ಯಮಹಾ ರೇ ತೆಕ್ಕೆಗೆ ಇಂಡಿಯಾ ಡಿಸೈನ್ ಮಾರ್ಕ್ ಪ್ರಶಸ್ತಿ

ಯಮಹಾ ಮೋಟಾರ್ ಕಂಪನಿಯ ರೇ ಸ್ಕೂಟರ್, ಪ್ರತಿಷ್ಠಿತ ಇಂಡಿಯಾ ಡಿಸೈನ್ ಮಾರ್ಕ್ (ಐ ಮಾರ್ಕ್) 2013 ಪ್ರಶಸ್ತಿ ಬಾಚಿಕೊಂಡಿದೆ. ಭಾರತೀಯ ಡಿಸೈನ್ ಕೌನ್ಸಿಲ್ ಈ ಅವಾರ್ಡ್ ನೀಡಿ ಗೌರವಿಸಿದೆ.

ಇದು ಎರಡನೇ ಬಾರಿಗೆ ಇಂಡಿಯಾ ಡಿಸೈನ್ ಮಾರ್ಕ್ ಅವಾರ್ಡ್ ನೀಡಲಾಗುತ್ತಿದೆ. ಕಳೆದ ಬಾರಿಯೂ ಯಮಹಾ ಮೋಟಾರ್ಸ್‌ನ ವೈಝಡ್‌ಎಫ್-ಆರ್15 ಆವೃತ್ತಿ ಪ್ರಶಸ್ತಿ ಬಾಚಿಕೊಂಡಿತ್ತು.

ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾರತದಲ್ಲೇ ಉತ್ಪಾದಿಸಿದ ವಿನ್ಯಾಸಗೊಳಿಸಿದ ಹಾಗೂ ಮಾರಾಟ ಮಾಡಿದ ದ್ವಿಚಕ್ರ ವಾಹನಗಳನ್ನು ಮಾನದಂಡವಾಗಿ ಪರಿಗಣಿಸಲಾಗುತ್ತಿದೆ.

ದೇಶಕ್ಕೆ ಮೊದಲ ಸ್ಕೂಟರ್ ಮಾಡೆಲ್ ಪರಿಚಯಿಸಿದ್ದ ಯಮಹಾ, 2012ರಲ್ಲಿ ರೇ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಪ್ರಸ್ತುತ ಸ್ಕೂಟರ್ ಪ್ರಮುಖವಾಗಿ ಮಹಿಳೆಯರ ಅಗತ್ಯಕ್ಕಾನುಸಾರವಾಗಿ ವಿನ್ಯಾಸಗೊಳಿಸಲಾಗಿತ್ತು.

ಸಮಾಜದಲ್ಲಿ ಮಹಿಳೆಯರ ಪಾತ್ರ ಅಮೂಲ್ಯವಾಗಿದೆ. ಇದರಂತೆ ಯಮಹಾದ 'ಕೂಲ್ ಆಂಡ್ ಬ್ಯೂಟಿ' ಕಾನ್ಸೆಪ್ಟ್ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. ಉತ್ತಮ ಇಂಧನ ಕ್ಷಮತೆ, ಮಹಿಳೆಯರಿಗೆ ಹೊಂದಿಕೆಯಾಗುವ ಸೀಟು ವಿನ್ಯಾಸ ಹಾಗೂ ನಯವಾದ ವೇಗವರ್ಧನೆ ಹೆಚ್ಚು ಪ್ರಶಂಸೆಗೆ ಪಾತ್ರವಾಗಿದೆ.

Most Read Articles

Kannada
English summary
Yamaha Motor's Ray scooter has been awarded the prestigious India Design Mark (I Mark) Award 2013. The award is presented by the Indian Design Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X