50 ದಿನಗಳ ಬಜಾಜ್ ಚಕನ್ ಕಾರ್ಮಿಕರ ಮುಷ್ಕರ ಹಿಂತೆಗೆತ

By Nagaraja

ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬಜಾಜ್ ಚಕನ್ ಘಟಕದಲ್ಲಿ ಕಾರ್ಮಿಕರು ನಡೆಸಿಕೊಂಡು ಬಂದಿರುವ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೊನೆಗೂ ಕೈಬಿಡಲಾಗಿದ್ದು, ನೌಕರರು ಎಂದಿನಂತೆ ತಮ್ಮ ತಮ್ಮ ಕೆಲಸಕ್ಕೆ ಹಿಂತಿರುಗಿದ್ದಾರೆ.

ವೇತನ ಪರಿಷ್ಕರಣೆ, ರಿಯಾಯಿತಿ ಬೆಲೆಯಲ್ಲಿ ಶೇರುಗಳನ್ನು ವಿತರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಿ ಬಜಾಜ್ ಚಕನ್ ಘಟಕದಲ್ಲಿ ವಿಶ್ವ ಕಲ್ಯಾಣ್ ಕಾಮಗಾರ್ ಸಂಘಟನೆಯ (ವಿಕೆಕೆಎಸ್) 1,5000ರಷ್ಟು ಪೂರ್ಣವಾಧಿ ಹಾಗೂ ಅಲ್ಪಾವಾಧಿ ಕಾರ್ಮಿಕರು ಜೂನ್ 25ರಂದು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆದರೆ ಮುಷ್ಕರ ಭೀತಿಗೊಳಗಾಗದ ಬಜಾಜ್ ಆಟೋ, ತನ್ನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಔರಂಗಾಬಾದ್ ಘಟಕಕ್ಕೆ ಸ್ಥಳಾಂತರಿಸಿದ್ದಲ್ಲದೆ ಕೋರ್ಟ್ ಮೆಟ್ಟಿಲೇರಿತ್ತು.

ಈ ನಡುವೆ ಮುಂಬರುವ ಹಬ್ಬದ ಆವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸಕ್ಕೆ ಹಾಜರಾಗಲು ನೌಕರರು ಸಮ್ಮಿತಿ ಸೂಚಿಸಿದ್ದಾರೆ. ಕಾರ್ಮಿಕರ ಈ ನಿಲುವನ್ನು ಬಜಾಜ್ ಆಡಳಿತ ಮಂಡಳಿ ಸ್ವಾಗತಿಸಿದೆ. ಹಾಗೆಯೇ ಕೆಲಸದಿಂದ ವಜಾಗೊಂಡಿರುವ 22 ನೌಕರರ ಪುನರ್ ನೇಮಕವನ್ನು ಪರಿಗಣಿಸುವುದಾಗಿ ಬಜಾಜ್ ಆಟೋ ಮಹಾನಿರ್ದೇಶಕ ರಾಜೀವ್ ಬಜಾಜ್ ಭರವಸೆ ನೀಡಿದ್ದಾರೆ.

ನೌಕರರು ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆಗಳನ್ನು ಕೈಬಿಟ್ಟಿದ್ದಾರೆಯೇ ಎಂಬುದಕ್ಕೆ ಉತ್ತರಿಸಿರುವ ವಿಕೆಕೆಎಸ್ ಅಧ್ಯಕ್ಷ ದಿಲೀಪ್ ಪವಾರ್, ನಮ್ಮ ಬೇಡಿಕೆಗಳನ್ನು ಕೈಬಿಟ್ಟಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಮಂಡಳಿ ಜತೆ ಮಾತುಕತೆ ನಡೆಸಲಾಗುವುದು. ಸದ್ಯ ದೀಪಾವಳಿ ಹಾಗೂ ಗಣೇಶ ಹಬ್ಬ ಮುಂದಿರುವ ಹಿನ್ನಲೆಯಲ್ಲಿ ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಹಾಗಿದ್ದರೆ ಭವಿಷ್ಯದಲ್ಲಿ ಮತ್ತೆ ಮುಷ್ಕರ ಕೈಗೊಳ್ಳುವರೇ ಎಂಬುದಕ್ಕೆ ಅಂದೊಂದೇ ನಮ್ಮ ಮುಂದಿರುವ ಹಾದಿಯಾಗಿದೆ. ಹಾಗಿದ್ದರೂ ಕಂಪನಿ ಜತೆಗಿನ ಮಾತುಕತೆ ಮುಖಾಂತರ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ ಎಂದಿದ್ದಾರೆ.

ಈ ಹಿಂದೆ ಜೂನ್ 25ರಂದು ಬಜಾಜ್ ಚಕನ್ ಘಟಕದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ 900 ಪೂರ್ಣವಾಧಿಯ ಹಾಗೂ 364 ತರಬೇತಿ ಪಡೆಯುವ ಕಾರ್ಮಿಕರು ಸೇರಿದಂತೆ ಒಟ್ಟು 1486 ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆದರೆ ಚಕನ್ ಘಟಕದ ಶೇಕಡಾ 50ರಷ್ಟು ಉತ್ಪಾದನೆಯನ್ನು ಔರಾಂಗಬಾದ್ ಘಟಕಕ್ಕೆ ಸ್ಥಳಾಂತರಿಸಲು ಬಜಾಜ್ ಮುಂದಾಗಿತ್ತು. ಇದರಲ್ಲಿ ಜನಪ್ರಿಯ ಪಲ್ಸರ್ ಸೇರಿದಂತೆ ಕೆಟಿಎಂ ಡ್ಯೂಕ್ 200 ಹಾಗೂ 390 ವೆರಿಯಂಟ್‌ಗಳು ಸೇರಿದ್ದವು. ಇದೇ ಪ್ರದೇಶದಲ್ಲಿ ಟಾಟಾ ಮೋಟಾರ್ಸ್, ಬಜಾಜ್ ಆಂಡ್ ಬಜಾಜ್, ಮರ್ಸಿಡಿಸ್ ಬೆಂಝ್ ಹಾಗೂ ಫೋಕ್ಸ್‌ವ್ಯಾಗನ್ ಸಂಸ್ಥೆಗಳ ಘಟಕಗಳು ಸಹ ನೆಲೆಗೊಂಡಿವೆ.

More from DriveSpark

Article Published On: Wednesday, August 14, 2013, 11:11 [IST]
English summary
The 50-day strike at Bajaj Auto's Chakan plant has been called off on Tuesday and the work will resume from Wednesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+