ವ್ಹಾವ್...ಬಜಾಜ್‌ನಿಂದ ಕ್ರೂಸರ್ ಬೈಕ್ ನಿರೀಕ್ಷಿಸಿ
ಅಚ್ಚರಪಡಬೇಡಿರಿ, ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ನಿಕಟ ಭವಿಷ್ಯದಲ್ಲೇ ಬಜಾಜ್ ಕ್ರೂಸರ್ ಬೈಕನ್ನು ದೇಶದ ಗ್ರಾಹಕರನ್ನು ಬರಮಾಡಿಕೊಳ್ಳಬಹುದಾಗಿದೆ. ಹೌದು, ದೇಶದ ವಾಹನ ಮಾರುಕಟ್ಟೆ ಅತೀವ ಕುತೂಹಲದಿಂದ ಎದುರು ನೋಡುತ್ತಿರುವ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಮಗದೊಂದು ಕ್ರೂಸರ್ ಬೈಕ್ ಕಾನ್ಸಪ್ಟನ್ನು ಬಜಾಜ್ ಪರಿಚಯಿಸಲಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನಮಾನ ಭದ್ರವಾಗಿರಿಸಿರುವ ಬಜಾಜ್, ಇದೀಗ ಅವೆಂಜರ್ ಕ್ರೂಸರ್ ಬೈಕ್‌ನ ನೂತನ ಅವತಾರ ಪರಿಚಯಿಸಲು ಸನ್ನದ್ಧವಾಗಿದೆ. ಇದು ನೈಜ ಅವೆಂಜರ್ 220 ಆವೃತ್ತಿಗಿಂತಲೂ ಸಂಪೂರ್ಣ ವಿಭಿನ್ನ ವಿನ್ಯಾಸ ಪಡೆದುಕೊಳ್ಳಲಿದೆ.

ಅಂದ ಹಾಗೆ ಅವೆಂಜರ್ 220 ಕ್ರೂಸರ್ ಬೈಕ್ 219.89 ಸಿಸಿ ಸಿಂಗಲ್ ಸಿಲಿಂಡರ್ ಡಿಟಿಎಸ್-ಐ ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತಿದ್ದು, 19.03 ಪಿಎಸ್ (17.5 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಆದರೆ ಬೇಡಿಕೆ ಕುಸಿದಂತೆ ಅವೆಂಜರನ್ನು ಕಡೆಗಣಿಸಿದ್ದ ಬಜಾಜ್, ಪಲ್ಸರ್ ಹಾಗೂ ಡಿಸ್ಕವರ್ ಉತ್ಪನ್ನಗಳತ್ತ ಹೆಚ್ಚು ಗಮನ ಕೇಂದ್ರಿಕರಿಸಿತ್ತು. ಸದ್ಯ ನೂತನ ಅವೆಂಜರ್ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.


Click it and Unblock the Notifications








