ಬಜಾಜ್ ಪಲ್ಸರ್ 375 ಸಿಸಿ ಬೈಕ್‌ನ ಚಿತ್ರ ಸೋರಿಕೆ
ದೇಶದ ಕ್ರೀಡಾ ಸ್ನೇಹಿ ಅಭಿಮಾನಿಗಳು ಕಾದು ಕುಳಿತಿರುವ ಬಜಾಜ್ ಪಲ್ಸರ್ 375 ಸಿಸಿ ಬೈಕ್ ಇನ್ನಷ್ಟೇ ಮಾರುಕಟ್ಟೆ ಅಪ್ಪಳಿಸಲಿರುವಂತೆಯೇ ಮತ್ತಷ್ಟು ಚಿತ್ರಗಳು ಸೋರಿಕೆಯಾಗಿದೆ.
ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ಇತ್ತೀಚೆಗಷ್ಟೇ ಬಜಾಜ್ ಪಲ್ಸರ್ 375 ಸ್ಪೋರ್ಟ್ಸ್ ಬೈಕ್‌ನ ಚಿತ್ರಗಳು ಸೋರಿಕೆಯಾಗಿದ್ದವು. ಇದರ ಬೆನ್ನಲ್ಲೇ ಇನ್ನಷ್ಟು ಚಿತ್ರಗಳು ಲೀಕ್ ಆಗಿವೆ. ಇದಕ್ಕಾಗಿ ವೈಸರ್ ಡಾನ್ ವೆಬ್‌ಸೈಟ್‌ಗೆ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ.

ನೂತನ ಬೈಕ್ ಹೆಚ್ಚು ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಕೆಟಿಎಂ ಬೈಕ್‌ಗೆ ಪೈಪೋಟಿ ಒಡ್ಡಲಿದೆ. ಹಾಗೆಯೇ ಕೆಟಿಎಂಗೆ ಸಮಾನವಾದ ಪವರ್ ಉತ್ಪಾದಿಸುತ್ತಿದೆ.
ಅಂದ ಹಾಗೆ 2014 ಆಟೋ ಎಕ್ಸ್‌ಪೋದಲ್ಲಿ ಬಜಾಜ್ ಪಲ್ಸರ್ ಅನಾವರಣಗೊಳ್ಳಲಿದೆ. ಇದು 373 ಸಿಸಿ, ಸಿಂಗಲ್ ಸಿಲಿಂಡರ್, ಫ್ಯೂಯೆಲ್ ಇಂಜೆಕ್ಟಡ್, ಲಿಕ್ಟಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.


Click it and Unblock the Notifications








