ಶೇರು ಇಲ್ಲ, ವೇತನವಿಲ್ಲ; ನಿಲ್ಲದ ಬಜಾಜ್ ಕಾರ್ಮಿಕರ ಮುಷ್ಕರ
ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬಜಾಜ್ ಚಕನ್ ಘಟಕದಲ್ಲಿ ಕಾರ್ಮಿಕರು ನಡೆಸಿಕೊಂಡು ಬರುತ್ತಿರುವ ಮುಷ್ಕರ ಬಹುತೇಕ ಒಂದು ತಿಂಗಳಿಗೆ ಕಾಲಿಟ್ಟಿದ್ದು, ಪ್ರತಿಭಟನೆ ನಿಲ್ಲುವ ಯಾವುದೇ ಸೂಚನೆಗಳು ಇನ್ನೂ ದೊರಕಿಲ್ಲ.
ಈ ನಡುವೆ ಪ್ರತಿಕ್ರಿಯಿಸಿರುವ ಬಜಾಜ್ ಆಟೋ ಲಿಮಿಟೆಡ್, ಮುಷ್ಕರ 500ನೇ ದಿನಕ್ಕೂ ಕಾಲಿರಿಸಿದ್ದರೂ ಕೂಡಾ ಕಂಪನಿಯಿಂದ ಯಾವುದೇ ಉಚಿತ ಶೇರುಗಳು ನೌಕರರಿಗೆ ದೊರಕದು ಎಂಬುದನ್ನು ಸ್ಪಷ್ಟಪಡಿಸಿದೆ.
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬಜಾಜ್ ನೌಕರರು ಹಮ್ಮಿಕೊಂಡಿದ್ದ ಮುಷ್ಕರ ಜೂನ್ 26ಕ್ಕೆ ಆರಂಭಗೊಂಡಿತ್ತು. ಇದರ ಬೆನ್ನಲ್ಲೇ ಮುಷ್ಕರ ನ್ಯಾಯಸಮ್ಮತವಲ್ಲ ಎಂಬ ಹೇಳಿಕೆಯೊಂದಿಗೆ ಬಜಾಜ್ ಕಾರ್ಮಿಕ ನ್ಯಾಯಾಲಯವನ್ನು ಸಮೀಪಿಸಿತ್ತು.
ಮುಷ್ಕರ ನಿರತ ಕಾರ್ಮಿಕರು ಹಾಗೂ ಆಡಳಿತ ವರ್ಗದ ನಡುವೆ ಮಾತುಕತೆ ನಡೆದಿದ್ದರೂ ವೈಫಲ್ಯ ಕಂಡಿತ್ತು. ಈ ಎಲ್ಲ ಪ್ರತಿಭಟನೆಗಳ ನಡುವೆಯೂ ತರಬೇತಿ ಸಿಬ್ಬಂದಿ ಹಾಗೂ ಒಪ್ಪಂದದ ಮೇರೆಗೆ ಕೆಲಸ ಮಾಡುತ್ತಿರುವ ಕಾರ್ಮಿಕರ ಬೆಂಬಲದೊಂದಿಗೆ ಕಂಪನಿ ಉತ್ಪಾದನೆ ಮುಂದುವರಿಸಿದೆ. ಈ ನಡುವೆ ಬಜಾಜ್ ಪಲ್ಸರ್ ಬೈಕ್‌ಗಳ ಉತ್ಪಾದನೆಯನ್ನು ಔರಂಗಾಬಾದ್‌ನ ವಾಲುಜ್ ಘಟಕಕ್ಕೆ ಸ್ಥಳಾಂತರಿಸಲಾಗಿದೆ.


Click it and Unblock the Notifications









