ಹೀರೊ ಪಾಟ್ನರ್ ಇಬಿಆರ್‌ನಿಂದ 3 ಬೈಕ್ ರೆಡಿ
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೊ ಮೊಟೊಕಾರ್ಪ್ ಜತೆ ಪಾಲುದಾರಿಕೆಯನ್ನು ಹೊಂದಿರುವ ಅಮೆರಿಕದ ಪ್ರಖ್ಯಾತ ಸ್ಪೋರ್ಟ್ಸ್ ಬೈಕ್ ಬ್ರಾಂಡ್ ಆದ ಎರಿಕ್ ಬ್ಯೂಯೆಲ್ ರೇಸಿಂಗ್ (ಇಬಿಆರ್) ಮುಂಬರುವ ದಿನಗಳಲ್ಲಿ ದೇಶದ ಜನತೆಗೆ ಮೂರು ಅತಿ ನೂತನ ಬೈಕ್‌ಗಳನ್ನು ಸಾದರಪಡಿಸಲಿದೆ.
ಇದು ದೇಶದ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದ್ದು, ಅಮೆರಿಕದ ಈ ಸಂಸ್ಥೆಯು ಈಗಾಗಲೇ 1125 ಸಿಸಿ ವಿ-ಟ್ವಿನ್ ಎಂಜಿನ್ ಆಧಾರಿತ ಬೈಕ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಇದು ಹೀರೊ ಮೊಟೊಕಾರ್ಪ್ ಜತೆ ತಂತ್ರಜ್ಞಾನ ಪಾಲುದಾರಿಕೆ ಒಪ್ಪಂದ ಮಾಡಿಕೊಂಡ ಬಳಿಕ ಎರಿಕ್ ಬ್ಯೂಯೆಲ್ ರೇಸಿಂಗ್‌ನಿಂದ ಆಗಮನವಾಗುತ್ತಿರುವ ಮೊದಲ ಬೈಕಾಗಿದೆ. ಈಗಾಗಲೇ ಹೀರೊ ಬೈಕ್ ಉತ್ಪನ್ನ ಎಂಜಿನರ್‌ಗಳು ಎಬಿಆರ್ ಜತೆ ಅಮೆರಿಕದಲ್ಲಿ ಕಾರ್ಯ ಮಗ್ನವಾಗಿದ್ದಾರೆ.
ಖಂಡಿತವಾಗಿಯೂ ಇಬಿಆರ್ ಜತೆಗಿನ ನಂಟು ಭವಿಷ್ಯದಲ್ಲಿ ದೇಶದಲ್ಲಿ ಮತ್ತಷ್ಟು ಸ್ಪೋರ್ಟ್ಸ್ ಬೈಕ್‌ಗಳನ್ನು ಅಭಿವೃದ್ಧಿಪಡಿಸಲು ಹೀರೊಗೆ ನೆರವಾಗಲಿದೆ. ಈ ನಡುವೆ ದೇಶಕ್ಕೆ 250 ಸಿಸಿ ಬೈಕ್ ಪರಿಚಯಿಸುವುದಾಗಿ ಹೀರೊ ಈಗಾಗಲೇ ಘೋಷಿಸಿದ್ದು, ಖಂಡಿತವಾಗಿ ಇಬಿಆರ್ ಜತೆಗಿನ ತಂತ್ರಜ್ಞಾನ ಪಾಲುದಾರಿಕೆ ನೆರವಾಗಲಿದೆ.
ಮೂರು ಬೈಕ್‌ಗಳು ಯಾವುವು?
ಅಂದ ಹಾಗೆ ಈ ಬಹುನಿರೀಕ್ಷಿತ ಮೂರು ಬೈಕ್‌ಗಳು ಯಾವುವು ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿರಬಹುದು. ಕಂಪನಿಯು ಈಗಾಗಲೇ ರಹಸ್ಯ ಚಿತ್ರಗಳನ್ನು ಬಿಡುಗಡೆಗೊಳಿಸಿದ್ದು ಆರ್‌ಎಕ್ಸ್, ಎಸ್‌ಎಕ್ಸ್ ಹಾಗೂ ಎಎಕ್ಸ್ ಎಂದು ಅರಿಯಲ್ಪಡಲಿದೆ.
ದರ ಎಷ್ಟು?
ಇನ್ನು ದರದ ಬಗ್ಗೆ ಹೇಳುವುದಾದರೆ ಕಂಪನಿಯ ಪ್ರಕಾರ ಇದು ಕಡಿಮೆ ದರದ ಸ್ಪೋರ್ಟ್ಸ್ ಬೈಕ್ ಆಗಿರಲಿದೆ. 20 ಸಾವಿರ ಡಾಲರ್ ಅಸುಪಾಸಿನಲ್ಲಿ ಗ್ರಾಹಕರ ಕೈ ಸೇರಲಿದೆ. ಅಂದರೆ ಭಾರತದ ರುಪಾಯಿ ಪ್ರಕಾರ 10 ಲಕ್ಷಕ್ಕೂ ಹೆಚ್ಚಾಗಲಿದೆ. ಹಾಗೆಯೇ ದೇಶದಲ್ಲಿ ಹರ್ಲಿ ಡೇವಿಡ್ಸನ್ ಬೈಕ್‌ಗಳಿಗೆ ನಿಕಟ ಪೈಪೋಟಿ ಒಡ್ಡಲಿದೆ.
ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ 2014ರ ವೇಳೆಗೆ ಇಬಿಆರ್ ಬೈಕ್‌ಗಳು ಲಾಂಚ್ ಆಗಲಿದೆ. ಒಟ್ಟಿನಲ್ಲಿ ಇಬಿಆರ್ ಪಾಲುದಾರಿಕೆಯಿಂದ ದೇಶದಲ್ಲಿ ಮತ್ತಷ್ಟು ಉತ್ತಮ ಬೈಕ್ ಪ್ರದರ್ಶಿಸಲು ಹೀರೊಗೆ ಖಂಡಿತ ನೆರವಾಗಲಿದೆ.


Click it and Unblock the Notifications









