2020ಕ್ಕೂ ಮುನ್ನ ಬಿಎಸ್-6 ಬೈಕ್‌ಗಳನ್ನು ಉತ್ಪಾದನೆ ಮಾಡಲಿದೆ ಹೀರೊ ಮೊಟೊಕಾರ್ಪ್

Written By:

ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಇತ್ತೀಚೆಗಷ್ಟೇ ಬಿಎಸ್-3 ವಾಹನಗಳು ನಿಷೇಧಗೊಂಡ ಬಳಿಕ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಈ ನಡುವೆ ಹೀರೊ ಮೊಟೊಕಾರ್ಪ್ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ ಬಿಎಸ್-6 ಎಂಜಿನ್ ಉತ್ಪಾದನೆ ಮಾಡಲಿದೆ.

To Follow DriveSpark On Facebook, Click The Like Button
ಬಿಎಸ್-6 ಬೈಕ್‌ಗಳನ್ನು ಉತ್ಪಾದನೆ ಮಾಡಲಿದೆ ಹೀರೊ ಮೊಟೊಕಾರ್ಪ್

ಭವಿಷ್ಯದಲ್ಲಿ ಬರಲಿರುವ ಬಿಎಸ್‌-6 ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆ ಮುಂದಾಗಿರುವ ಹೀರೊ ಮೊಟೊಕಾರ್ಪ್ ಸಂಸ್ಥೆಯು, 2020ರ ವೇಳೆಗೆ ವಿನೂತನ ಬೈಕ್‌ಗಳನ್ನು ಪರಿಚಯಿಸಲಿದೆ.

ಬಿಎಸ್-6 ಬೈಕ್‌ಗಳನ್ನು ಉತ್ಪಾದನೆ ಮಾಡಲಿದೆ ಹೀರೊ ಮೊಟೊಕಾರ್ಪ್

ಈ ನಿಟ್ಟಿನಲ್ಲಿ ಈಗಾಗಲೇ ಯೋಜನೆಯೊಂದನ್ನು ರೂಪಿಸಿರುವ ಹೀರೊ ಮೊಟೊಕಾರ್ಪ್ ಸಂಸ್ಥೆಯು, ಸುಧಾರಿತ ತಂತ್ರಜ್ಞಾನ ಹೊಂದಿರುವ ಬೈಕ್ ಮಾದರಿಗಳ ಉತ್ಪಾದನೆಯಲ್ಲೂ ಮುಂಚೂಣಿ ಸಾಧಿಸಲಿದೆ.

ಬಿಎಸ್-6 ಬೈಕ್‌ಗಳನ್ನು ಉತ್ಪಾದನೆ ಮಾಡಲಿದೆ ಹೀರೊ ಮೊಟೊಕಾರ್ಪ್

ಕೇವಲ ಬೈಕ್ ಮಾದರಿಗಳಲ್ಲದೇ ಹಿರೋ ಸ್ಕೂಟರ್ ಮಾದರಿಗಳು ಕೂಡಾ ಬಿಎಸ್-6 ಎಂಜಿನ್ ಪಡೆದುಕೊಳ್ಳಲಿದ್ದು, ಪರಿಸರಕ್ಕೆ ಪೂರಕವಾದ ಅಂಶಗಳನ್ನು ಹೆಚ್ಚು ಬಳಕೆ ಮಾಡಲಿದೆ.

ಬಿಎಸ್-6 ಬೈಕ್‌ಗಳನ್ನು ಉತ್ಪಾದನೆ ಮಾಡಲಿದೆ ಹೀರೊ ಮೊಟೊಕಾರ್ಪ್

ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರುವ ಹೀರೊ ಮೊಟೊಕಾರ್ಪ್ ಸಿಇಒ ಪವನ್ ಮಂಜಲ್, '2020ರ ಒಳಗಾಗಿಯೇ ಬಿಎಸ್-6 ಎಂಜಿನ್ ಹೊಂದಿರುವ ವಾಹನಗಳು ಖರೀದಿಗೆ ಲಭ್ಯವಿರವೆ' ಎಂದಿದ್ದಾರೆ.

ಬಿಎಸ್-6 ಬೈಕ್‌ಗಳನ್ನು ಉತ್ಪಾದನೆ ಮಾಡಲಿದೆ ಹೀರೊ ಮೊಟೊಕಾರ್ಪ್

ಇದಲ್ಲದೇ ಭಾರತ ಸೇರಿದಂತೆ 35 ರಾಷ್ಟ್ರಗಳಲ್ಲಿ ಹೀರೊ ಮೊಟೊಕಾರ್ಪ್ ಸಂಸ್ಥೆಯ ಉತ್ಪನ್ನಗಳ ಮಾರಾಟ ಪ್ರಕ್ರಿಯೆ ಇದ್ದು, ಒಂದು ವೇಳೆ 2020ರ ಒಳಗಾಗಿ ಬಿಎಸ್-6 ವಾಹನಗಳು ಬಿಡುಗಡೆಯಾಗಲಿದ್ದಲ್ಲಿ ಜಾಗತಿಕ ಮಟ್ಟದಲ್ಲೂ ಹೀರೊ ಹೊಸ ಮೈಲಿಗಲ್ಲು ಸಾಧಿಸಲಿದೆ.

English summary
Hero MotoCorp To Introduce BS-VI Two-Wheelers Before 2020.
Story first published: Friday, July 7, 2017, 16:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark