ಗುಸ್ತು ನಿರ್ವಹಣೆಗಾಗಿ ವಿಶೇಷ ಸ್ಕೂಟರ್‌ಗಳನ್ನು ನಿರ್ಮಾಣ ಮಾಡಿದ ಹೀರೊ ಮೊಟೊಕಾರ್ಪ್

Written By:

'ಮಹಿಳಾ ಪೊಲೀಸ್ ದಿವಸ್' ಅಂಗವಾಗಿ ಹೀರೊ ಮೊಟೊಕಾರ್ಪ್ ಸಂಸ್ಥೆಯು ಗಸ್ತು ನಿರ್ವಹಣೆಗಾಗಿ ಸುಧಾರಿತ ತಂತ್ರಜ್ಞಾನ ಹೊಂದಿರುವ ವಿನೂತನ 30 ಡ್ಯುಯೆಟ್ ಸ್ಕೂಟರ್‌ಗಳನ್ನು ಉತ್ತರ ಪ್ರದೇಶ ಮಹಿಳಾ ಪೋಲಿಸರಿಗೆ ಹಸ್ತಾಂತರ ಮಾಡಿದೆ.

To Follow DriveSpark On Facebook, Click The Like Button
ಗುಸ್ತು ನಿರ್ವಹಣೆಗಾಗಿ ವಿಶೇಷ ಸ್ಕೂಟರ್‌ಗಳನ್ನು ನಿರ್ಮಾಣ ಮಾಡಿದ ಹೀರೊ

ದಿನನಿತ್ಯದ ಗಸ್ತು ಚಟುವಟಿಕೆಯ ಉದ್ದೇಶಕ್ಕಾಗಿಯೇ ಮಹಿಳಾ ಪೋಲಿಸ್ ಪಡೆಗೆ ಹೊಸ ಮಾದರಿಯಲ್ಲಿ ಡ್ಯುಯೆಟ್ ಸ್ಕೂಟರ್‌ಗಳನ್ನು ಅಭಿವೃದ್ಧಿಗೊಳಿಸಿರುವ ಹೀರೊ ಮೊಟೊಕಾರ್ಪ್ ಸಂಸ್ಥೆಯು ನಿನ್ನೆಯಷ್ಟೇ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗೆ 30 ಹೊಸ ಸ್ಕೂಟರ್‌ಗಳನ್ನು ಹಸ್ತಾಂತರ ಮಾಡಿತು.

ಗುಸ್ತು ನಿರ್ವಹಣೆಗಾಗಿ ವಿಶೇಷ ಸ್ಕೂಟರ್‌ಗಳನ್ನು ನಿರ್ಮಾಣ ಮಾಡಿದ ಹೀರೊ

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹೀರೊ ಮೊಟೊಕಾರ್ಪ್ಸಿಐಒ ಮತ್ತು ಸಿಎಸ್ಆರ್ ವಿಜಯ್ ಸೇಠಿಯವರು ಉತ್ತರ ಪ್ರದೇಶದ ಎಡಿಜಿ(ಲಾ ಆ್ಯಂಡ್ ಆರ್ಡರ್) ಆನಂದ್ ಕುಮಾರ್ ಅವರಿಗೆ ಕೀ ಹಸ್ತಾಂತರ ಮಾಡುವ ಮೂಲಕ ಹೊಸ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿದರು.

ಗುಸ್ತು ನಿರ್ವಹಣೆಗಾಗಿ ವಿಶೇಷ ಸ್ಕೂಟರ್‌ಗಳನ್ನು ನಿರ್ಮಾಣ ಮಾಡಿದ ಹೀರೊ

"ಶಕ್ತಿ ಆ್ಯಂಡ್ ಗಾರ್ಡ್" ಎಂಬ ಯೋಜನೆ ಅಡಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯು ಹೀರೊ ಮೊಟೊಕಾರ್ಪ್‌ನಿಂದ ಡ್ಯುಯೆಟ್ ಸ್ಕೂಟರ್‌ಗಳನ್ನು ಖರೀದಿ ಮಾಡಿದ್ದು, ಗಸ್ತು ನಿರ್ವಹಣೆಗಾಗಿಯೇ ವಿಶೇಷ ವಿನ್ಯಾಸಗಳನ್ನು ಒದಗಿಸಲಾಗಿದೆ.

ಗುಸ್ತು ನಿರ್ವಹಣೆಗಾಗಿ ವಿಶೇಷ ಸ್ಕೂಟರ್‌ಗಳನ್ನು ನಿರ್ಮಾಣ ಮಾಡಿದ ಹೀರೊ

ಸ್ಕೂಟರ್ ಗಳಲ್ಲಿ ಸೈರೆನ್‌, ಸಂಚಾರಿ ದೀಪಗಳು ಮತ್ತು ಪಿಎ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ತ್ವರಿತಗತಿಯಲ್ಲಿ ಸಂಪರ್ಕ ಸಾಧಿಸಲು ಅನುಕೂಲಕರವಾಗುವಂತೆ ವಿಶೇಷ ಸೌಲಭ್ಯಗಳನ್ನು ಜೋಡಣೆ ಮಾಡಲಾಗಿದೆ.

ಗುಸ್ತು ನಿರ್ವಹಣೆಗಾಗಿ ವಿಶೇಷ ಸ್ಕೂಟರ್‌ಗಳನ್ನು ನಿರ್ಮಾಣ ಮಾಡಿದ ಹೀರೊ

ಇದಲ್ಲದೇ ಕಳೆದ ವರ್ಷದಿಂದ ಹರಿಯಾಣ ಪೊಲೀಸ್ ಇಲಾಖೆಯಲ್ಲಿನ ಬೇಡಿಕೆ ಅನುಗುಣವಾಗಿ ವಿವಿಧ ರೀತಿಯ ಬೈಕ್ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿರುವ ಹೀರೊ ಮೊಟೊಕಾರ್ಪ್, ಪೊಲೀಸ್ ಅಕಾಡೆಮಿಗಾಗಿ 400ಕ್ಕೂ ಹೆಚ್ಚು ಹೊಸ ವಿನ್ಯಾಸ ಹೊಂದಿರುವ ಬೈಕ್‌ಗಳನ್ನು ಹಸ್ತಾಂತರ ಮಾಡಿತ್ತು.

ಗುಸ್ತು ನಿರ್ವಹಣೆಗಾಗಿ ವಿಶೇಷ ಸ್ಕೂಟರ್‌ಗಳನ್ನು ನಿರ್ಮಾಣ ಮಾಡಿದ ಹೀರೊ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

"ಶಕ್ತಿ ಆ್ಯಂಡ್ ಗಾರ್ಡ್" ಯೋಜನೆ ಅಡಿ ಪೊಲೀಸ್ ಇಲಾಖೆಗಾಗಿ ವಿಶೇಷ ವಾಹನಗಳ ಅಭಿವೃದ್ಧಿ ಮಾಡಲು ಹೊಣೆಹೊತ್ತಿರುವ ಹೀರೊ ಸಂಸ್ಥೆಯು, ಗಸ್ತು ವಾಹನಗಳು ಸೇರಿದಂತೆ ವಿವಿಧ ಮಾದರಿಯ ವಾಹನಗಳನ್ನು ಪ್ರಸ್ತುತ ಪಡಿಸುತ್ತಿರುವುದು ವಿಶೇಷ.

English summary
Read in Kannada about Hero Motocorp Partners With Uttar Pradesh Police Department.
Story first published: Monday, September 11, 2017, 14:06 [IST]
Please Wait while comments are loading...

Latest Photos