ಜೀರೋ ಎಮಿಷನ್ ಬೈಕ್ ಉತ್ಪಾದನೆಗೆ ಮುಂದಾದ ಹೀರೊ ಮೊಟೊಕಾರ್ಪ್..!!

Written By:

ವಾಯುಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಭಾರತೀಯ ಆಟೋ ಉದ್ಯಮದಲ್ಲಿ ಜೀರೋ ಎಮಿಷನ್ ವಾಹನಗಳ ಉತ್ಪಾದನೆಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೀರೊ ಮೊಟೊಕಾರ್ಪ್ ಸಂಸ್ಥೆಯು ಹೊಸ ಮಾದರಿಯ ಬೈಕ್ ನಿರ್ಮಾಣಕ್ಕೆ ಮುಂದಾಗಿದೆ.

ಜೀರೋ ಎಮಿಷನ್ ಬೈಕ್ ಉತ್ಪಾದನೆಗೆ ಮುಂದಾದ ಹೀರೊ ಮೊಟೊಕಾರ್ಪ್..!!

ದಿನದಿಂದ ದಿನಕ್ಕೆ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಿದ್ದು, ನಗರಪ್ರದೇಶಗಳಲ್ಲಿನ ಜನತೆಯಲ್ಲಿ ಆರೋಗ್ಯದ ಸಮಸ್ಯೆ ಉಲ್ಬಣಗೊಳ್ಳುತ್ತಿವೆ. ಈ ಹಿನ್ನೆಲೆ ಆಟೋ ಉದ್ಯಮ ವಲಯದಲ್ಲಿ ಹೊಸ ಕ್ರಾಂತಿ ಶುರುವಾಗಿದ್ದು, ಜೀರೋ ಎಮಿಷನ್ ವಾಹನ ಉತ್ಪಾದನೆಗೆ ಭಾರೀ ಬೇಡಿಕೆ ಸೃಷ್ಠಿಯಾಗಿದೆ.

ಜೀರೋ ಎಮಿಷನ್ ಬೈಕ್ ಉತ್ಪಾದನೆಗೆ ಮುಂದಾದ ಹೀರೊ ಮೊಟೊಕಾರ್ಪ್..!!

ಸದ್ಯ ಜೀರೋ ಎಮಿಷನ್ ಬೈಕ್ ಉತ್ಪಾದನೆ ಬಗ್ಗೆ ಹೊಸ ಪರಿಕಲ್ಪನೆ ಅನಾವರಣ ಮಾಡಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು, ಭಾರತೀಯ ಗ್ರಾಹಕರಿಗಾಗಿ ವಿಶೇಷ ವಿನ್ಯಾಸ ಹೊಂದಿರುವ ಬೈಕ್ ಮಾದರಿಯನ್ನು ಪರಿಚಯಿಸಲಿದೆ.

ಜೀರೋ ಎಮಿಷನ್ ಬೈಕ್ ಉತ್ಪಾದನೆಗೆ ಮುಂದಾದ ಹೀರೊ ಮೊಟೊಕಾರ್ಪ್..!!

ಕಳೆದ 2 ತಿಂಗಳು ಹಿಂದಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-3 ವಾಹನಗಳನ್ನು ನಿಷೇಧ ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ಹೊಸ ಯೋಜನೆ ರೂಪಿಸಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು, ಸುಧಾರಿತ ತಂತ್ರಜ್ಞಾನ ಹೊಂದಿರುವ ಬೈಕ್ ಉತ್ಪಾದನೆ ಕೈಗೆತ್ತಿಕೊಳ್ಳಲಿದೆ.

ಜೀರೋ ಎಮಿಷನ್ ಬೈಕ್ ಉತ್ಪಾದನೆಗೆ ಮುಂದಾದ ಹೀರೊ ಮೊಟೊಕಾರ್ಪ್..!!

ಕಳೆದ ವರ್ಷ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಹೊಸ ಬೈಕ್ ಪರಿಕಲ್ಪನೆಯನ್ನು ಪರಿಚಯ ಮಾಡಿದ್ದ ಹೀರೋ ಸಂಸ್ಥೆಯು, ಹೊಸ ಮಾದರಿಯ ಬೈಕ್‌ಗೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆ ಉತ್ಪಾದನೆಯನ್ನು ಆರಂಭ ಮಾಡಿದೆ.

ಜೀರೋ ಎಮಿಷನ್ ಬೈಕ್ ಉತ್ಪಾದನೆಗೆ ಮುಂದಾದ ಹೀರೊ ಮೊಟೊಕಾರ್ಪ್..!!

124 ಸಿಸಿ ಎಂಜಿನ್ ಹೊಂದಲಿರುವ ಹೊಸ ಬೈಕ್, ಪೆಟ್ರೋಲ್ ಹಾಗೂ ಅಯಾನ್ ಲಿಥಿಯಮ್ ಬ್ಯಾಟರಿಯೊಂದಿಗೆ ಅಭಿವೃದ್ಧಿಗೊಳ್ಳಲಿದೆ.

ಜೀರೋ ಎಮಿಷನ್ ಬೈಕ್ ಉತ್ಪಾದನೆಗೆ ಮುಂದಾದ ಹೀರೊ ಮೊಟೊಕಾರ್ಪ್..!!

ಇನ್ನೊಂದು ವಿಶೇಷ ಅಂದ್ರೆ ಹಿರೋ ಮೋಟೋ ಕಾರ್ಪ್ ಸಿದ್ದಪಡಿಸಿರುವ ಹೊಸ ಯೋಜನೆಗೆ ಬೆಂಗಳೂರು ಮೂಲದ ಅಧೆರ್ ಏನರ್ಜಿ ಸಂಸ್ಥೆಯು ರೂ.205 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ.

ಜೀರೋ ಎಮಿಷನ್ ಬೈಕ್ ಉತ್ಪಾದನೆಗೆ ಮುಂದಾದ ಹೀರೊ ಮೊಟೊಕಾರ್ಪ್..!!

ಹೀಗಾಗಿ 2020ರ ವೇಳೆಗೆ ಹೊಸ ಮಾದರಿಯ ಬೈಕ್ ಖರೀದಿಗೆ ಲಭ್ಯವಾಗಲಿದ್ದು, ಎಲೆಕ್ಟ್ರಿಕ್ ಹಾಗೂ ಜೀರೋ ಎಮಿಷನ್ ಬೈಕ್‌ಗಳ ಖರೀದಿ ಭರಾಟೆ ಕೂಡಾ ಹೆಚ್ಚಲಿದೆ.

English summary
Read in Kannada about Hero MotoCorp Working On Zero Emission Vehicles.
Story first published: Saturday, June 17, 2017, 12:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark