ಮುಷ್ಕರ ಭೀತಿಯಲ್ಲಿ ಹೀರೊ; ವೇತನ ಹೆಚ್ಚಳಕ್ಕೆ ಕಾರ್ಮಿಕರ ಪಟ್ಟು

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೊ ಮೊಟೊಕಾರ್ಪ್ ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ಪಟ್ಟು ಹಿಡಿದಿದ್ದು, ಆದರೆ ಯಾವುದೇ ಪ್ರಕಾರ ಮುಷ್ಕರ ಹೂಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಮೂಲಕ ಕಳೆದ ವರ್ಷ ದೇಶದ ನಂ. 1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಗೆ ಎದುರಾದ ಸಮಾನ ರೀತಿಯ ಸಂಕಷ್ಟವೀಗ ಹೀರೊಗೆ ಎದುರಾಗುತ್ತಿದೆ.

ಮುಂದಿನ ಮೂರು ವರ್ಷಗಳ ವರೆಗೆ ವೇತನದಲ್ಲಿ 18,000 ರುಪಾಯಿಗಳ ವರೆಗೆ ಹೆಚ್ಚಳ ಮಾಡಬೇಕಾಗಿ ಹೀರೊದ ಗುರ್ವಾಂಗ್ ಘಟಕದ ಕಾರ್ಮಿಕರು ಬೇಡಿಕೆ ಮುಂದಿರಿಸಿದ್ದಾರೆ. ಪ್ರಸ್ತುತ ಬೇಡಿಕೆಯು ಇತ್ತೀಚೆಗಷ್ಟೇ ಮಾಡಲಾದ ನೂತನ ವೇತನ ಒಪ್ಪಂದಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಹರಿಯಾಣದ ಗುರ್ಗಾಂವ್ ಘಟಕದಲ್ಲಿ ಸುಮಾರು 1,200ರಷ್ಟು ಕಾಯಂ ಕೆಲಸಗಾರರಿದ್ದು, ಅವರೆಲ್ಲರು ಹೀರೊ ಮೊಟೊಕಾರ್ಪ್ ಕಾರ್ಮಿಕ ಸಂಘಟನೆಯನ್ನು (HMCWU) ಪ್ರತಿನಿಧಿಸುತ್ತಿದ್ದಾರೆ.

ಕಂಪನಿ ವಿರುದ್ಧ ಪ್ರತಿಭಟನೆಯ ಅಂಗವಾಗಿ ಕಾರ್ಮಿಕರು ಬ್ಯಾಡ್ಜ್‌ಗಳನ್ನು ಧರಿಸುವುದರೊಂದಿಗೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಹಾಗೆಯೇ ಕೆಲಸದ ಅವಧಿಯಲ್ಲಿ ಕಂಪನಿಯಿಂದ ಲಭ್ಯವಿರುವ ಚಹಾ ಹಾಗೂ ತಿಂಡಿಗಳನ್ನು ನಿರಾಕರಿಸುತ್ತಿದ್ದಾರೆ. ಈ ಮೂಲಕ ಆಡಳಿತ ಮಂಡಳಿ ಮೇಲೆ ಒತ್ತಡ ತರುವ ಪ್ರಯತ್ನ ಮಾಡಲಾಗುತ್ತಿದೆ.

ಹಾಗಿದ್ದರೂ ಉತ್ಪಾದನಾ ಕುಸಿಯಲು ಸಾಧ್ಯತೆಯಿರುವ ಯಾವುದೇ ರೀತಿಯ ಮುಷ್ಕರಗಳನ್ನು ನಾವು ಹಮ್ಮಿಕೊಳ್ಳುವುದಿಲ್ಲ ಎಂದು ಕಾರ್ಮಿಕರ ಒಕ್ಕೂಟ ತಿಳಿಸಿದೆ. ಕಳೆದ ಅಗಸ್ಟ್ ತಿಂಗಳಲ್ಲಿ ಕಾರ್ಮಿಕರ ಬೇಡಿಕೆ ಬಗ್ಗೆ ಕಂಪನಿ ಮ್ಯಾನೇಜ್‌ಮೆಂಟ್‌ಗೆ ಮನವರಿಕೆ ಮಾಡಿಕೊಡಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಹಾಗೊಂದು ವೇಳೆ ಕಾರ್ಮಿಕರ ಬೇಡಿಕೆಗಳನ್ನು ಪೂರೈಸದಿದ್ದಲ್ಲಿ ಮುಷ್ಕರ ಹೂಡುವ ಕುರಿತಾಗಿ ಪರಿಗಣಿಸಲಾಗುವುದು ಎಂದು ಎಚ್‌ಎಂಸಿಡಬ್ಲ್ಯುಯು ಅಧ್ಯಕ್ಷ ಕವಾಲ್‌ಪ್ರೀತ್ ಸಿಂಗ್ ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಹೀರೊ ಆಡಳಿತ ಮಂಡಳಿ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

More from DriveSpark

Article Published On: Friday, January 18, 2013, 12:44 [IST]
English summary
Hero MotoCorp's workers at its plants in Gurgaon, Haryana are demanding increased wages by up to Rs.18,000 over the next three years and are on silent protest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+