ಹೀರೊ ಬಿಕ್ಕಟ್ಟು; ವೇತನ ಹೆಚ್ಚಳ ನಿರಾಕರಿಸಿದ ಕಾರ್ಮಿಕರು
ಹೀರೊ ಮೊಟೊಕಾರ್ಪ್ ಕಾರ್ಮಿಕರ ಸಂಘಟನೆ ಹಾಗೂ ಆಡಳಿತ ಮಂಡಳಿ ನಡುವಣ ಮಾತುಕತೆಯು ಮತ್ತೊಮ್ಮೆ ಮುರಿದು ಬಿದ್ದಿದೆ. ಹೀರೊ ಆಡಳಿತ ಮಂಡಳಿ 7,500 ರು.ಗಳ ವರೆಗೆ ವೇತನ ಹೆಚ್ಚಳದ ಪ್ರಸ್ತಾಪ ಮುಂದಿರಿಸಿದ್ದರೂ ಇದರಿಂತ ತೃಪ್ತರಾಗದ ಕಾರ್ಮಿಕರು ಕಂಪನಿ ಆಫರನ್ನು ತಿರಸ್ಕರಿಸಿದೆ.
ಹಾಗಿದ್ದರೂ ಯಾವುದೇ ಮುಷ್ಕರ ಅಥವಾ ಪ್ರತಿಭಟನೆಗಳಿಗೆ ಮುಂದಾಗದ ಹೀರೊ ಕಾರ್ಮಿಕರು ಆಡಳಿತ ಮಂಡಳಿ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದೆ. ಈಗಾಗಲೇ ಸಂಸ್ಥೆಯ ಗುರ್ಗಾಂವ್ ಘಟಕದಲ್ಲಿ ದ್ವಿಚಕ್ರ ವಾಹನ ಉತ್ಪಾದನೆಯು ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ 1,000 ಸ್ಕೂಟರ್‌ಗಳಷ್ಟು ಉತ್ಪಾದನೆ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಹರಿಯಾಣ ರಾಜ್ಯ ಕಾರ್ಮಿಕ ಇಲಾಖೆ ರಂಗ ಪ್ರವೇಶ ಮಾಡಿದ್ದು, ಪ್ರಸ್ತುತ ಭುಗಿಲೆದ್ದಿರುವ ಬಿಕ್ಕಟ್ಟಿಗೆ ಶಮನ ಹಾಡುವ ಪ್ರಯತ್ನ ಮಾಡುತ್ತಿದೆ. ಆದರೆ ಕಳೆದ ದಿನ ಕಾರ್ಮಿಕರು ಹಾಗೂ ಆಡಳಿತ ಮಂಡಳಿ ಜತೆ ನಡೆಸಿದ ಮೊದಲ ಸುತ್ತಿನ ಮಾತುಕತೆ ಮುರಿದು ಬಿದ್ದಿರುವುದು ಬಿಕ್ಕಟ್ಟು ಮತ್ತಷ್ಟು ಬಿಗಾಡಯಿಸಲು ಕಾರಣವಾಗಿದೆ.


Click it and Unblock the Notifications









