ಮುಂಬೈ ಪೊಲೀಸ್‌‌ ತೆಕ್ಕೆಗೆ ರಾಯಲ್ ಎನ್‌ಫೀಲ್ಡ್ ಗಸ್ತು ಬೈಕ್

Written By:
To Follow DriveSpark On Facebook, Click The Like Button
ಸದ್ಯದಲ್ಲೇ ದೇಶದಲ್ಲಿ ಹೈಟೆಕ್ ಪೆಟ್ರೋಲಿಂಗ್ ಗಸ್ತು ವಾಹನಗಳನ್ನು ಬಳಕೆ ಮಾಡುತ್ತಿರುವ ದೇಶದ ಮೊದಲ ಭದ್ರತಾ ತಂಡ ಎಂಬ ಹೆಗ್ಗಳಿಕೆಗೆ ಮುಂಬೈ ಪೊಲೀಸ್ ಪಾತ್ರವಾಗಲಿದೆ.

ಯಾಕೆಂದರೆ ಮುಂಬೈ ಪೊಲೀಸ್‌ಗೆ ಸದ್ಯದಲ್ಲೇ ರಾಯಲ್ ಎನ್‌ಫೀಲ್ಡ್ ಸೇರ್ಪಡೆಯಾಗಲಿದೆ. ಅಮೆರಿಕದ ಎಫ್‌ಬಿಐ ಪೆಟ್ರೋಲ್ ಬೈಕ್‌ಗಳಿಂದ ಸ್ಪೂರ್ತಿ ಪಡೆದಿರುವ ಜುಝಾರ್ಟೆ ನೂತನ ರಾಯಲ್ ಎನ್‌ಫೀಲ್ಡ್ 350 ಕಾನ್ಸೆಪ್ಟ್ ಪೆಟ್ರೋಲ್ ಬೈಕ್ ತಯಾರಿಸಿದೆ.

ಇದು ನಗರದಲ್ಲಿ ಗಸ್ತು ತಿರುಗುವ ಪೊಲೀಸರಿಗೆ ಹೆಚ್ಚಿನ ನೆರವು ಮಾಡಲಿದೆ. ಇದರಲ್ಲಿ ಎಲ್ಲ ಹವಾಮಾನದಲ್ಲೂ ಬಳಕೆ ಮಾಡಬಹುದಂತಹ ಕ್ಯಾಮೆರಾ, ಜಿಪಿಎಸ್, ಲ್ಯಾಪ್ ಟಾಪ್, ತುರ್ತು ತನಿಖೆಗಾಗಿ ಬೇಸಿಕ್ ಫಾರೆನ್ಸಿಕ್ ಉಪಕರಣಗಳು, ಪ್ರಥಮ ಚಿಕಿತ್ಸಾ ಕಿಟ್, ಸ್ಟೋರೆಜ್ ಬಾಕ್ಸ್, ಹೆಚ್ಚಿನ ಬ್ಯಾಟರಿಗಳು ಸೇರಿದಂತೆ ಅತ್ಯಗತ್ಯ ವಸ್ತುಗಳು ಇರಲಿದೆ.

ಮುಂದಿನ ಆಗಸ್ಟ್ ತಿಂಗಳಲ್ಲಿ ಕಾನ್ಸೆಪ್ಟ್ ಮಾಡೆಲ್ ಅನಾವರಣವಾಗಲಿದ್ದು, ಸರಕಾರದಿಂದ ಮಾನ್ಯತೆ ದೊರಕಿದ್ದಲ್ಲಿ ಮುಂಬೈ ಪೊಲೀಕ್ ಕೈ ಸೇರಲಿದೆ. ಒಟ್ಟಾರೆಯಾಗಿ ದೇಶದ ಸುರಕ್ಷತೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸಲಿದೆ.

English summary
Mumbai Police could soon become the country's first law enforcement agency to ride high-tech patrolling motorcycles, with features that are found commonly in patrol bikes of other countries.
Story first published: Thursday, May 16, 2013, 11:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark