ಹ್ಯೊಸಂಗ್ ಬೈಕ್ ಇಂಡಿಯಾ ಲಾಂಚ್- ಅಕ್ಟೋಬರ್
ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಹ್ಯೊಸಂಗ್ ಜಿವಿ250 ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಈ ಹಿಂದೆ ಕಾರಣಾಂತರಗಳಿಂದಾಗಿ ಹಲವು ಬಾರಿ ವಿಳಂಬವಾಗಿದ್ದ ಹ್ಯೊಸಂಗ್ ಬೈಕನ್ನು ದೇಶದಲ್ಲಿ ಡಿಎಸ್‌ಕೆ ಮೊಟೊವೀಲ್ಸ್ ಪರಿಚಯಿಸಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಹ್ಯೊಸಂಗ್ ಬೈಕ್ ಉತ್ತಮ ಬೇಡಿಕೆ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ. ನೂತನ ಹ್ಯೊಸಂಗ್ ಜಿವಿ250, 249 ಸಿಸಿ ಏರ್ ಆಂಡ್ ಒಯಿಲ್ ಕೂಲ್ಡ್ ವಿ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 25 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.
ಇದು ಮುಂಭಾಗದಲ್ಲಿ ಡಿಸ್ಕ್ ಹಾಗೂ ಹಿಂದುಗಡೆ ಡ್ರಮ್ ಬ್ರೇಕ್ ತಂತ್ರಜ್ಞಾನ ಹೊಂದಿರಲಿದೆ. ಹಾಗೆಯೇ ಒಟ್ಟಾರೆಯಾಗಿ 170ಕೆ.ಜಿ ತೂಕ ಹೊಂದಿರಲಿದೆ.
ನೂತನ ಹ್ಯೊಸಂಗ್ ಜಿವಿ250 ಎಕ್ಸ್ ಶೋ ದರ 1.8 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಇದು ರಾಯಲ್ ಎನ್‌ಫೀಲ್ಡ್‌ಗೆ ನೇರ ಪೈಪೋಟಿ ನೀಡಲು ನೆರವಾಗಲಿದೆ.


Click it and Unblock the Notifications
