ಹ್ಯೊಸಂಗ್ ಸಂಸ್ಥೆಯಿಂದ ಮಾರುಕಟ್ಟೆಗೆ ಹೊಸ ಕ್ರೂಸರ್ ಬೈಕ್..

ಹ್ಯೊಸಂಗ್ ಮೋಟರ್‍‍ಸೈಕಲ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಮತ್ತೆ ಎಂಟ್ರೀ ನೀಡುತ್ತಿದ್ದು, ತಮ್ಮ ಹೊಸ ಮಿರಾಜ್ 250 ಕ್ರೂಸರ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಮಾಹಿತಿಗಳ ಪ್ರಕಾರ ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯೊಸಂಗ್ ಭಾರತದ

By Rahul Ts

ಹ್ಯೊಸಂಗ್ ಮೋಟರ್‍‍ಸೈಕಲ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಮತ್ತೆ ಎಂಟ್ರೀ ನೀಡುತ್ತಿದ್ದು, ತಮ್ಮ ಹೊಸ ಮಿರಾಜ್ 250 ಕ್ರೂಸರ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಮಾಹಿತಿಗಳ ಪ್ರಕಾರ ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯೊಸಂಗ್ ಭಾರತದಲ್ಲಿ ಕೈನೆಟಿಕ್ ಗ್ರೂಪ್‍‍ನ ಜೊತೆ ಕೈ ಜೋಡಿಸಿದೆ.

ಹ್ಯೊಸಂಗ್ ಸಂಸ್ಥೆಯಿಂದ ಮಾರುಕಟ್ಟೆಗೆ ಹೊಸ ಕ್ರೂಸರ್ ಬೈಕ್..

ಈ ಹಿಂದೆ ಕಾರಣಾಂತರಗಳಿಂದ ಭಾರತೀಯ ಮಾರುಕಟ್ಟೆಯಿಂದ ಹಿಂಜರುಗಿತ್ತು. ಆದರೆ ಇದೀಗ ಹ್ಯೊಸಂಗ್ ಸಂಸ್ಥೆಯು ಕೈನೆಟಿಕ್ ಗ್ರೂಪ್‍‍ನೊಂದಿಗೆ ಸೇರಿ ಹೊಸ ಮಿರಾಜ್ 250 ಕ್ರೂಸರ್ ಬೈಕ್ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

ಹ್ಯೊಸಂಗ್ ಸಂಸ್ಥೆಯಿಂದ ಮಾರುಕಟ್ಟೆಗೆ ಹೊಸ ಕ್ರೂಸರ್ ಬೈಕ್..

ಹ್ಯೊಸಂಗ್ ಸಂಸ್ಥೆಯು ಮಿರಾಜ್ 250 ಕ್ರೂಸರ್ ಬೈಕ್‍‍ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಎರಡನೆಯ ಇನ್ನಿಂಗ್ಸ್ ಅನ್ನು ಶುರು ಮಾಡಲಿದ್ದು, ಇದು ಹ್ಯೊಸಂಗ್ ಸಂಸ್ಥೆಯ ಅಕ್ವ್ಲಾ 250 ಕೂಸರ್ ಬೈಕ್‍‍ನ ಸ್ಥಾನವನ್ನು ಭರ್ತಿ ಮಾಡಲಿದೆ. ಹೊಸ ಹ್ಯೊಸಂಗ್ ಮಿರಾಜ್ 250 ಬೈಕ್ ಆಧಿನಿಕ ವಿನ್ಯಸದಲ್ಲಿ ತಯಾರು ಮಾಡಲಾಗಿದೆ.

ಹ್ಯೊಸಂಗ್ ಸಂಸ್ಥೆಯಿಂದ ಮಾರುಕಟ್ಟೆಗೆ ಹೊಸ ಕ್ರೂಸರ್ ಬೈಕ್..

ಹ್ಯೊಸಂಗ್ ಮಿರಾಜ್ 250 ಕ್ರೂಸರ್ ಬೈಕ್ 15 ಲೀಟರ್‍‍ನ ಟೀಯರ್‍‍ಡ್ರಾಪ್ ಫ್ಯುಯಲ್ ಟ್ಯಾಂಕ್, ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ಸ್ ಮತ್ತು ಬೈಕಿನ ಮುಂಭಾಗದಲ್ಲಿ ಹಾಗು ಹಿಂಭಾಗದಲ್ಲಿ ಮುಬ್ಬಾದ ಮಡ್‍‍ಗಾರ್ಡ್‍‍ಗಳನ್ನು ಒದಗಿಸಲಾಗಿದೆ.

ಹ್ಯೊಸಂಗ್ ಸಂಸ್ಥೆಯಿಂದ ಮಾರುಕಟ್ಟೆಗೆ ಹೊಸ ಕ್ರೂಸರ್ ಬೈಕ್..

ಮಿರಾಜ್ 250 ಕ್ರೂಸರ್ ಬೈಕ್‍‍ಣಲ್ಲಿ ಸಿಂಗಲ್ ಪಾಡ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ವೃತ್ತಾಕಾರದ ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಟೈಲ್ ಲೈಟ್ಸ್ ಅನ್ನು ನೀಡಲಾಗಿದ್ದು, ವಿಶೇಷವಾಗಿ ಕೌ ಹಾರ್ನ್ ಎಂಬ ಹ್ಯಾಂಡಲ್‍‍ಬಾರ್‍‍ನೊಂದಿಗೆ ಇನ್ನು ಹಲವಾರು ಸ್ಪೋರ್ಟಿ ರೈಡಿಂಗ್ ಮನೋಭಾವವನ್ನು ಅಳವಡಿಸಲಾಗಿದೆ.

ಹ್ಯೊಸಂಗ್ ಸಂಸ್ಥೆಯಿಂದ ಮಾರುಕಟ್ಟೆಗೆ ಹೊಸ ಕ್ರೂಸರ್ ಬೈಕ್..

ಎಂಜಿನ್ ಸಾಮರ್ಥ್ಯ

ಹ್ಯೋಸಂಗ್ ಮಿರಾಜ್ 250 ಬೈಕ್ 250ಸಿಸಿ, ವಿ-ಟ್ವಿನ್ ಎಂಜಿನ್‍‍ನ ಸಹಾಯದಿಂದ 25.8 ಬಿಹೆಚ್‍‍ಪಿ ಮತ್ತು 21.7ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಅಕ್ವಿಲಾ 250 ಕ್ರೂಸರ್ ಬೈಕ್‍‍ಗಿಂತಾ ಹೆಚ್ಚಿನ ಟಾರ್ಕ್ ಅನ್ನು ಈ ಬೈಕ್ ಉತ್ಪಾದಿಸುತ್ತದೆ.

ಹ್ಯೊಸಂಗ್ ಸಂಸ್ಥೆಯಿಂದ ಮಾರುಕಟ್ಟೆಗೆ ಹೊಸ ಕ್ರೂಸರ್ ಬೈಕ್..

ಮಿರಾಜ್ 250 ಕ್ರೂಸರ್ ಬೈಕ್ ಮುಂಭಾಗದಲ್ಲಿ 19 ಇಂಚಿನ ಮತ್ತು ಹಿಂಭಾಗದಲ್ಲಿ 16 ಇಂಚಿನ ವ್ಹೀಲ್‍ಗಳನ್ನು ಪಡೆದುಕೊಂಡಿದೆ. ಮತ್ತು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿಸ್ ಶಾಕ್ಸ್ ಅನ್ನು ನೀಡಲಾಗಿದೆ.

ಹ್ಯೊಸಂಗ್ ಸಂಸ್ಥೆಯಿಂದ ಮಾರುಕಟ್ಟೆಗೆ ಹೊಸ ಕ್ರೂಸರ್ ಬೈಕ್..

ಪ್ರಯಾಣಿಕರ ಸುರಕ್ಷತೆಗಾಗಿ ಕ್ರೂಸರ್ ಬೈಕ್‍‍ಗಳಲ್ಲಿ ಇರಬೇಕಾದ ಸುರಕ್ಷಾ ವೈಶಿಷ್ಟ್ಯತೆಗಳನ್ನು ಇದರಲ್ಲಿಯು ಬಳಾಸಲಾಗಿದ್ದು, ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ನೀಡುವುದರ ಜೊತೆಗೆ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ಒದಗಿಸಲಾಗಿದೆ.

ಹ್ಯೊಸಂಗ್ ಸಂಸ್ಥೆಯಿಂದ ಮಾರುಕಟ್ಟೆಗೆ ಹೊಸ ಕ್ರೂಸರ್ ಬೈಕ್..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹ್ಯೊಸಂಗ್ ಭಾರತದಲ್ಲಿಯೆ ನಿರ್ಮಾಣವಾಗುವುದರಿಂದ ಈ ಬೈಕಿನ ಬೆಲೆಯು ಸುಮಾರು 3 ಲಕ್ಷದಲ್ಲಿ ಇರಬಹುದೆಂದು ಅಂದಾಜಿಸಲಾಗಿದ್ದು, ಒಮ್ಮೆ ಈ ಬೈಕ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ಈಗಾಗಲೆ ಲಭ್ಯವಿರುವ ಕ್ರೂಸರ್ ಸೆಗ್ಮೆಂಟ್‍‍ನಲ್ಲಿನ ಮೋಟರ್‍‍ಸೈಕಲ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on hyosung cruiser
English summary
Hyosung To Re-Enter Indian Market With The Mirage 250 Cruiser.
Story first published: Saturday, September 1, 2018, 15:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X