ಇಂಡಿಯನ್ ಮೋಟಾರ್‌ಸೈಕಲ್ಸ್‌ನ ಕಸ್ಟಮೈಸ್ಡ್ ಬೈಕ್
ಪೊಲರಿಸ್ ನೇತತ್ವದಲ್ಲಿರುವ ಇಂಡಿಯನ್ ಮೋಟಾರ್ ಸೈಕಲ್ಸ್ ಭಾರತಕ್ಕೆ ಲಗ್ಗೆಯಿಡಲು ಸಜ್ಜಾಗಿ ನಿಂತಿದೆ. ಈ ಅಮೆರಿಕ ಬ್ರಾಂಡ್ ಬೈಕ್ ಜನವರಿ 22ರಂದು ಮಾರುಕಟ್ಟೆ ಪ್ರವೇಶಿಸಲಿದೆ.
ಇಂಡಿಯನ್ ಮೋಟಾರುಸೈಕಲ್ಸ್ ಜನವರಿಯಲ್ಲಿ ಲಾಂಚ್
ಇದಕ್ಕೆ ಮುನ್ನುಡುಯಾಗಿ ದೇಶದಲ್ಲಿ ಲಾಂಚ್ ಆಗಲಿರುವ ಮೂರು ಮಾಡೆಲ್‌ಗಳನ್ನು ಪರಿಚಯಿಸಲಾಗಿತ್ತು. ಇದೀಗ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಅಂತರಾಷ್ಟ್ರೀಯ ಮೋಟಾರ್ ಸೈಕಲ್ಸ್ ಶೋವೊಂದರಲ್ಲಿ ಇಂಡಿಯನ್ ಬಿಗ್ ಚೀಫ್ ಕಸ್ಟಮ್ ಬೈಕ್‌ವೊಂದನ್ನು ಅನಾವರಣಗೊಳಿಸಿದೆ.

2014 ಚೀಫ್ ಕ್ಲಾಸಿಕ್‌ನಿಂದ ತಲಹದಿಯಲ್ಲಿ ನೂತನ ಇಂಡಿಯನ್ ಬಿಗ್ ಚೀಫ್ ಕಸ್ಟಮೈಸ್ಡ್ ಬೈಕ್ ನಿರ್ಮಿಸಲಾಗಿದೆ. ಹಾಗಿದ್ದರೂ ಇದು ನಿರ್ಮಾಣ ಹಂತದಲ್ಲಿರುವ ಮಾದರಿಯಲ್ಲ. ಬದಲಾಗಿ ತನ್ನ ಆಕ್ಸೆಸರಿ ಸಾಮರ್ಥ್ಯವನ್ನು ಪರಿಚಯಸಲು ಸಂಸ್ಥೆ ಇಂತಹದೊಂದು ನೀತಿ ಅನುಸರಿಸಿದೆ.
ಪೊಲರಿಸ್ ವಿನ್ಯಾಸ ಸೂತ್ರಧಾರಿ ಗ್ರೆ ಬ್ರಿವ್ಯೂ ನೂತನ ಇಂಡಿಯನ್ ಬಿಗ್ ಚೀಫ್ ಬೈಕ್‌ನಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ.



Click it and Unblock the Notifications