ಇಂಡಿಯನ್ ಮೋಟಾರುಸೈಕಲ್ಸ್ ಜನವರಿಯಲ್ಲಿ ಲಾಂಚ್
ದೇಶದ ಬೈಕ್ ಪ್ರಿಯರು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಮೋಟಾರುಸೈಕಲ್ಸ್ ಮುಂಬರುವ ಜನವರಿ ತಿಂಗಳಲ್ಲಿ ಲಗ್ಗೆಯಿಡಲಿದೆ. ಅಮೆರಿಕ ಮೂಲದ ಈ ಪ್ರಾಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು ಜನವರಿ 22ರಂದು ದೇಶಕ್ಕೆ ಪ್ರವೇಶಿಸುವುದನ್ನು ಖಚಿತಪಡಿಸಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಇಂಡಿಯನ್ ಮೋಟಾರ್‌ಸೈಕಲ್ ಮಾತೃಸಂಸ್ಥೆ ಪೊಲರಿಸ್ ಇಂಡಸ್ಟ್ರೀಸ್ ನೇತೃತ್ವದಲ್ಲಿ 2014 ವರ್ಷಾರಂಭದ ಮೂರನೇ ವಾರದ ಬುಧವಾರದಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನೂತನ ಬೈಕ್ ಬಿಡುಗಡೆ ಮಾಡಲಿದೆ.

ಎಲ್ಲ ಭೂಪ್ರದೇಶದ ವಾಹನಗಳನ್ನು ನಿರ್ಮಿಸುವುದರಲ್ಲಿ ಹೆಸರಿಸುವುದರಲ್ಲಿ ಹೆಸರುವಾಸಿಯಾಗಿರುವ ಪೊಲರಿಸ್, ಇಂಡಿಯನ್ ಮೋಟಾರ್ ಸೈಕಲ್ ಮೂಲಕವೂ ಇದನ್ನೇ ಆವರ್ತಿಸುವ ನಿರೀಕ್ಷೆಯಲ್ಲಿದೆ.
ಈ ಪೈಕಿ ಇಂಡಿಯನ್ ಚೀಫ್ ಕ್ಲಾಸ್, ಇಂಡಿಯನ್ ಚೀಫ್ ವಿಂಟೇಜ್ ಮತ್ತು ಇಂಡಿಯನ್ ಚೀಫ್ಟೈನ್ ಬೈಕ್‌ಗಳು ದೇಶದ ರಸ್ತೆಗಿಳಿಯಲು ತುದಿಗಾಲಲ್ಲಿ ನಿಂತಿದೆ. ಇದು ಹೊಸತಾದ ಥಂಡರ್ ಸ್ಟ್ರೋಕ್- 111 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 6 ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಇದರ 1819 ಸಿಸಿ ವಿ ಟ್ವಿನ್ ಎಂಜಿನ್ 161 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಅಲ್ಲದೆ ಕೀಲೆಸ್ ಎಂಟ್ರಿ, ಲೆಥರ್ ಸೀಟು, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಕ್ರೂಸ್ ಕಂಟ್ರೋಲ್ ಜತೆ ಕ್ರೋಮ್ ಫಿನಿಶ್ ಸ್ಟಾಂಡರ್ಡ್ ಸೌಲಭ್ಯಗಳು ಲಭ್ಯವಿರಲಿದೆ.


Click it and Unblock the Notifications








