ಎಲ್ಲೆಲ್ಲೂ ಫ್ಯಾಂಥರೊ ಅಲೆ; 4 ರಾಜ್ಯಗಳಿಗೆ ವಿಸ್ತರಣೆ
ದೇಶದ ದ್ವಿಚಕ್ರ ವಾಹನ ತಯಾರಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿರುವ ಮಹೀಂದ್ರ ಪ್ಯಾಂಥರೊ, ತನ್ನ ಲಭ್ಯತೆಯನ್ನು ನಾಲ್ಕು ಹೊಸ ರಾಜ್ಯಗಳಿಗೂ ವಿಸ್ತರಿಸುವ ಮೂಲಕ ಮತ್ತಷ್ಟು ಭದ್ರ ತಲಹದಿ ರೂಪಿಸಿದೆ.
ವರ್ಷಾರಂಭದಲ್ಲಿ ಎರಡು ನೂತನ ಬೈಕ್‌ಗಳನ್ನು ಪರಿಚಯಿಸಿದ್ದ ಮಹೀಂದ್ರ, ಟು ವೀಲರ್ ಮಾರುಕಟ್ಟೆಗೆ ಭರ್ಜರಿ ರಿ ಎಂಟ್ರಿ ಕೊಟ್ಟಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೂ ಪ್ಯಾಂಥರೊ ಲಭ್ಯತೆಯನ್ನು ವಿಸ್ತರಿಸುವ ಮೂಲಕ ಹೆಚ್ಚು ಪ್ರಗತಿ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
100ಸಿಸಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ಪ್ಯಾಂಥರೊ ಉತ್ತಮ ಇಂಧನ ಕ್ಷಮತೆಯನ್ನು ಖಾತ್ರಿಪಡಿಸುತ್ತಿದೆ. ಇದರ ಎಂಸಿಐ-5 ಮಕ್ರೋಚಿಪ್ ಎಂಜಿನ್, ಸಮತೋಲಿತ ನಿರ್ವಹಣೆ ನೀಡಲು ನೆರವಾಗಲಿದೆ.
ಮಹೀಂದ್ರ ಪ್ಯಾಂಥರೊ ಪ್ರಾರಂಭಿಕ ದರ 45,000ದಿಂದ ಆರಂಭವಾಗಿ ಟಾಪ್ ಎಂಡ್ ವೆರಿಯಂಟ್‌ಗೆ 49,500 ರು.ಗಳ ತನಕವಿದೆ. ಎಆರ್‌ಎಐನಿಂದ ಮಾನ್ಯತೆ ಪಡೆದಿರುವ ಮಹೀಂದ್ರ ಪ್ಯಾಂಥರೊ ಪ್ರತಿ ಲೀಟರ್‌ಗೆ 79.4 ಲೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.
ಇವನ್ನೂ ಓದಿ: ಮಹೀಂದ್ರ ಪ್ಯಾಂಥರೊ, ಸೆಂಚುರೊ ಅನಾವರಣ


Click it and Unblock the Notifications









