1 ವರೆ ಲಕ್ಷಕ್ಕೆ ರಾಯಲ್ ಎನ್‌ಫೀಲ್ಡ್ ಬುಲೆಟ್ 500 ಲಭ್ಯ
ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ 500 ದರ ಬಗ್ಗೆ ಎಲ್ಲರಲ್ಲೂ ಕುತೂಹಲ ಮನೆ ಮಾಡಿತ್ತು. ಇವೆಲ್ಲಕ್ಕೂ ಇದೀಗ ವಿರಾಮ ಬಿದ್ದಿದ್ದು, ದರ ಮಾಹಿತಿ ಹೊರಬಿದ್ದಿದೆ.
ನಿರೀಕ್ಷೆಯಂತೆ ರಾಯಲ್ ಎನ್‌ಫೀಲ್ಡ್ ಬುಲೆಟ್ 500, 1.5 ಲಕ್ಷ ರು.ಗಳಿಗೆ ಲಭ್ಯವಾಗಲಿದೆ. ಇದು ದೆಹಲಿ ಆನ್ ರೋಡ್ ದರ ಮಾಹಿತಿಯಾಗಿದೆ.
ಪ್ರಸ್ತುತ ಬೈಕ್ ಸದ್ಯಕ್ಕೆ ರಾಯಲ್ ಎನ್‌ಫೀಲ್ಡ್‌ಗೆ ಅತ್ಯಂತ ಹೆಚ್ಚು ಬೇಡಿಕೆಯುಳ್ಳ ಪಂಜಾಬ್, ಹರಿಯಾಣ, ಚಂಡೀಗಡ, ದೆಹಲಿ, ಹಾಗೂ ಕೇರಳ ರಾಜ್ಯಗಳಲ್ಲಿ ಮಾತ್ರ ಲಭ್ಯವಾಗಿರಲಿದೆ.
ಫ್ರಂಟ್ ಡಿಸ್ಕ್ ಬ್ರೇಕ್, ರಿಯರ್ ಗ್ಯಾಸ್ ಶಾಕ್ ಅಬ್ಸಾರ್ಬರ್, ಟೆಲಿಸ್ಕಾಪಿಕ್ ಫ್ರಂಟ್ ಸಸ್ಷೆಷನ್, ಪಿಲಿಯನ್ ಬ್ಯಾಕ್‌ರೆಸ್ಟ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟ್‌ಗಳಂತಹ ನೂತನ ಫೀಚರ್ಸ್ ಹೊಂದಿರಲಿದೆ.


Click it and Unblock the Notifications









