ಶೀಘ್ರದಲ್ಲೇ ಸುಜುಕಿಯಿಂದ 250 ಸಿಸಿ ಬೈಕ್ ಭಾರತಕ್ಕೆ
ಭಾರತಕ್ಕೆ ನೂತನ 250 ಸಿಸಿ ಸೆಗ್ಮೆಂಟ್ ಬೈಕ್‌ವೊಂದನ್ನು ಜಪಾನ್ ಮೂಲದ ಸುಜುಕಿ ಸಂಸ್ಥೆ ಪರಿಚಯಿಸಲಿದೆ. ಈ ಹಿಂದೆಯೇ ಸುಜುಕಿ 250 ಸಿಸಿ ಬೈಕ್ ಭಾರತಕ್ಕೆ ಆಗಮನವಾಗುವ ಬಗ್ಗೆ ಮಾಹಿತಿಗಳು ಬಂದಿದ್ದವು.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ
ಇದೀಗ ಅಧಿಕೃತವಾಗಿ ಘೋಷಣೆಯಾಗಿದ್ದು ಸುಜುಕಿ ಇನಝುಮಾ ಜಿಡಬ್ಲ್ಯು250 ಬೈಕ್ ಹೊಸ ವರ್ಷದಲ್ಲಿ ಲಾಂಚ್ ಆಗಲಿದೆ ಎಂದು ಸುಜುಕಿ ಮೋಟಾರುಸೈಕಲ್ ಇಂಡಿಯಾ ಲಿಮಿಟೆಡ್ (ಎಸ್‌ಎಂಐಎಲ್) ಘೋಷಿಸಿದೆ.

ಮುಂಬರುವ ಆಟೋ ಎಕ್ಸ್ ಪೋದಲ್ಲಿ ತನ್ನ ಸೆಗ್ಮೆಂಟ್ ವಿಸ್ತರಿಸಲಿರುವ ಸಂಸ್ಥೆಯು ನೂತನ ಬೈಕ್ ಲಾಂಚ್ ಮಾಡಲಿದೆ. ಅಂದ ಹಾಗೆ ಸುಜುಕಿ ಇನಝುಮಾ 250 ಬೈಕ್ ಜಿಡಬ್ಲ್ಯು250 ಎಂದು ಅರಿಯಲ್ಪಡುತ್ತದೆ. ಕಂಪ್ಲೀಟ್ ನೌಕ್ಡ್ ಡೌನ್ ಮುಖಾಂತರ ಇದು ಭಾರತ ಮಾರುಕಟ್ಟೆ ತಲುಪಲಿದೆ. ಇದು ಸುಜುಕಿಯ ಗುರ್ಗಾಂವ್ ಘಟಕದಲ್ಲಿ ಜೋಡಣೆಯಾಗಲಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ತಲುಪಲು ನೆರವಾಗಲಿದೆ.
ಸುಜುಕಿ ಇನಝುಮಾ 250 ಬೈಕ್ 248 ಸಿಸಿ, ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಫೋರ್ ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 26 ಬಿಎಚ್‌ಪಿ (24.2 ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಒಟ್ಟಿನಲ್ಲಿ ಸುಜುಕಿ ಆಗಮನವು ಹೋಂಡಾಗೆ ತಲೆನೋವಾಗಿ ಪರಿಣಮಿಸಲಿದೆ. ಪ್ರಸ್ತುತ ಸುಜುಕಿಯಿಂದ ಭಾರತದಲ್ಲಿ ದೊರಕುವ ದ್ವಿಚಕ್ರ ವಾಹನಗಳು ಇಂತಿದೆ.
ಸ್ಕೂಟರ್: ಆಸೆಸ್ 125, ಸ್ವಿಶ್ 125
ಬೈಕ್ ಪ್ರಯಾಣಿಕ ವಿಭಾಗ: ಹಯಾಟೆ (110 ಸಿಸಿ), ಸ್ಲಿಂಗ್‌ಶಾಟ್ (125ಸಿಸಿ), ಜಿಎಸ್150ಆರ್ (150ಸಿಸಿ)


Click it and Unblock the Notifications








