ದೇಶಕ್ಕೆ ಅಪ್ಪಳಿಸಲಿದೆ ಟ್ರಯಂಪ್ ಅಬ್ಬರ
ಬ್ರಿಟನ್‌ನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯು ಭಾರತದಲ್ಲಿ 250 ಸಿಸಿ ಬೈಕ್ ಉತ್ಪಾದನೆ ಆರಂಭಿಸಲು ಸಿದ್ಧವಾಗಿದೆ. ದೇಶದಲ್ಲಿ ತಯಾರಿಸಲಾಗುವ ಟ್ರಯಂಪ್ (Triumph) 250cc ಬೈಕ್ ಏಷ್ಯಾದ ಇತರ ಮಾರಕಟ್ಟೆಗಳಿಗೂ ರಫ್ತು ಮಾಡಲಾಗುವುದು.
ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ 250 ಸಿಸಿ ಬೈಕ್ ಟ್ವಿನ್ ಸಿಲಿಂಡರ್ ಹೊಂದಿರಲಿದೆ. ಈ ಹೊಸ ಪೀಳಿಗೆಯ ಬೈಕ್ ಕೆಟಿಎಂ, ಕವಾಸಕಿ ಹಾಗೂ ಹೊಂಡಾ 200-250ಸಿಸಿ ಸೆಗ್ಮೆಂಟ್ ಬೈಕ್‌ಗಳಿಗೆ ಕಠಿಣ ಪ್ರತಿಸ್ಪರ್ಧಿಯಾಗಲಿದೆ.
ಜಾಗತಿಕ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಕೆಟಿಎಂ, ಕವಾಸಕಿ ಹಾಗೂ ಹೊಂಡಾ ಸಂಸ್ಥೆಗಳು ಸಣ್ಣ ಸಾಮರ್ಥ್ಯದ ಬೈಕ್‌ಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಮಗ್ನವಾಗಿದೆ. ದೇಶದ ಯುವ ಪೀಳಿಗೆಯು ಸಣ್ಣ ಬೈಕ್ ಸಾಮರ್ಥ್ಯದ ಬೈಕ್‌ಗಳನ್ನು ಬಯಸುತ್ತಿರುವುದು ಇದರ ಪ್ರಮುಖ ಕಾರಣವಾಗಿದೆ.
ಪ್ರಸ್ತುತ ತಯಾರಿಸಲಾಗುತ್ತಿರುವ ಟ್ರಯಂಪ್ ಮೋಟಾರ್ ಸೈಕಲ್ ಇಂಡಿಯಾ ಕಂಪನಿಯ ನೂತನ 250ಸಿಸಿ ಬೈಕ್ ಯಾವ ರೀತಿಯಲ್ಲಿ ಯುವ ಜನಾಂಗವನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications









