2014ರ ವೇಳೆಗೆ ಟಿವಿಎಸ್‌ನಿಂದ 5 ನೂತನ ಮಾಡೆಲ್
ಪ್ರಸ್ತುತ ಹೊಸ ಮಾಡೆಲ್‌ಗಳ ಅಭಾವದಿಂದಾಗಿ ಮಾರುಕಟ್ಟೆಯಲ್ಲಿ ಟಿವಿಎಸ್ ಹಿನ್ನಡೆ ಅನುಭವಿಸುತ್ತಿದೆ. ಆದರೆ ಬೃಹತ್ ಹೂಡಿಕೆ ಮಾಡುವುದರಿಂದ ಕಂಪನಿ ಹಿಂಜರಿಯಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಟಿವಿಎಸ್ 2013ಕ್ಕೆ ಹೋಲಿಸಿದರೆ ಮುಂದಿನ ವರ್ಷ ಹೆಚ್ಚುವರಿ 50 ಕೋಟಿ ರು.ಗಳನ್ನು ಹೂಡಿಕೆ ಮಾಡುವುದಾಗಿ ತಿಳಿಸಿದೆ. ಅಂದರೆ 2014 ಆರ್ಥಿಕ ಸಾಲಿನಲ್ಲಿ ಒಟ್ಟು ಹೂಡಿಕೆ ಮೊತ್ತ 150ರಿಂದ 175 ಕೋಟಿ ರು.ಗಳಿಷ್ಟರಲಿದೆ.
ಸದ್ಯ ಬಂದಿರುವ ಮಾಹಿತಿ ಪ್ರಕಾರ ಟಿವಿಎಸ್ ಸ್ಕೂಟರ್ ಪೆಪ್ ಅಪ್‌ಗ್ರೇಡ್ ವರ್ಷನ್, ಟಿವಿಎಸ್ ವಿಗೊ ಆಟೋಮ್ಯಾಟಿಕ್ ಸ್ಕೂಟರ್, ಪರಿಷ್ಕೃತ ಸ್ಟಾರ್ ಸಿಟಿ ಪ್ರಯಾಣಿಕ ಬೈಕ್‌ಗಳ ಆಗಮನವಾಗಲಿದೆ. ಸುಜುಕಿಯಿಂದ ಪಾಲುದಾರಿಕೆ ಕಡಿದುಕೊಂಡು 11 ವರ್ಷಗಳೇ ದಾಟಿರುವಂತೆಯೇ ತಂತ್ರಜ್ಞಾನ ಹಾಗೂ ಗುಣಮಟ್ಟದ ಬೈಕ್‌ಗಳನ್ನು ಉತ್ಪಾದಿಸುವತ್ತ ಟಿವಿಎಸ್ ಗುರಿಯಿರಿಸಿಕೊಂಡಿದೆ. ಈ ಮೂಲಕ ಮಾರುಕಟ್ಟೆ ಶೇರು ಕೂಡಾ ವೃದ್ಧಿಸುವ ನಿರೀಕ್ಷೆಯನ್ನಿಟ್ಟುಕೊಂಡಿದೆ.
2012 ಡಿಸೆಂಬರ್‌ನಲ್ಲಿ ಟವಿಎಸ್ ಫೋನಿಕ್ಸ್ 125ಸಿಸಿ ಲಾಂಚ್ ಆಗಿತ್ತು. ತದಾ ಬಳಿಕ ಟಿವಿಎಸ್ ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸಿತ್ತು. ಅಂದ ಹಾಗೆ ದ್ವಿಚಕ್ರ ಪ್ರೇಮಿಗಳಲ್ಲಂತೂ ಟಿವಿಎಸ್ ನೂತನ ಮಾದರಿಗಳ ಬಗ್ಗೆ ಕುತೂಹಲ ಮನೆ ಮಾಡಿದೆ.


Click it and Unblock the Notifications









