ಹೆಣ್ಮಕ್ಕಳಿಗಾಗಿ ಹೊಸ ಆಟೋಮ್ಯಾಟಿಕ್ ಸ್ಕೂಟರ್ ಟಿವಿಎಸ್ ಜೆಸ್ಟ್
ದೇಶದ ಪ್ರಯಾಣಿಕ ಸ್ಕೂಟರ್ ಸೆಗ್ಮೆಂಟ್‌ನಲ್ಲಿ ಹೆಚ್ಚಿನ ಖ್ಯಾತಿ ಪಡೆದಿರುವ ಟಿವಿಎಸ್ ಮೋಟಾರ್ಸ್, ಮುಂದಿನ ವರ್ಷಾರಂಭದಲ್ಲಿ ಅತಿ ನೂತನ ಆಟೋಮ್ಯಾಟಿಕ್ ಜೆಸ್ಟ್ ಸ್ಕೂಟರನ್ನು ಲಾಂಚ್ ಮಾಡಲಿದೆ.
ನಿಮ್ಮ ಮಾಹಿತಿಗಾಗಿ ಟಿವಿಎಸ್ ಜೂಪಿಟರ್ 100ಸಿಸಿ ಆಟೋಮ್ಯಾಟಿಕ್ ಸ್ಕೂಟರನ್ನು ಇತ್ತೀಚೆಗಷ್ಟೇ ಲಾಂಚ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಪ್ರಸಕ್ತ ಸಾಲಿನಲ್ಲೇ ಆಲ್ ನ್ಯೂ ವಿಕ್ಟರ್ ಕೂಡಾ ರಸ್ತೆ ಪ್ರವೇಶಿಸುವ ನಿರೀಕ್ಷೆಯಿದೆ.
ನೂತನ ಜೆಸ್ಟ್ ಸ್ಕೂಟರ್, ಟಿವಿಎಸ್‌ನ ಜನಪ್ರಿಯ ಪೆಪ್ ಬ್ರಾಂಡ್‌ನ ಕೆಳಗಡೆ ಗುರುತಿಸಿಕೊಳ್ಳಲಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ 2014 ಜನವರಿ ತಿಂಗಳಲ್ಲಿ ಪೆಪ್ ಮಾರುಕಟ್ಟೆ ಪ್ರವೇಶಿಸಲಿದೆ. ಹಾಗಿದ್ದರೂ ಜೆಸ್ಟ್ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.
ಪ್ರಮುಖವಾಗಿಯೂ ಯುವ ಮಹಿಳಾ ಗ್ರಾಹಕರನ್ನು ಗುರಿಯಾರಿಸಿಕೊಂಡು ಪೆಪ್ ತಯಾರಿಸಲಾಗಿತ್ತು. ಇದೀಗ ಇದೇ ರೇಂಜ್‌ನಲ್ಲಿ ಇನ್ನೊಂದು ಸ್ಕೂಟರ್ ಸೇರ್ಪಡೆಯಾಗುತ್ತಿದೆ.


Click it and Unblock the Notifications









