ಬಜಾಜ್ ಡಿಸ್ಕವರ್ 125ಎಂ ಲಾಂಚ್; ದರ ರು. 48,000
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಬಜಾಜ್, ನೂತನ ಡಿಸ್ಕವರ್ 125 ಎಂ ಆವೃತ್ತಿಯನ್ನು ಲಾಂಚ್ ಮಾಡಿದೆ. ಇದರ ಎಕ್ಸ್ ಶೋ ರೂಂ ದರ 48,000 ರು.ಗಳಾಗಿರಲಿದೆ.
ಇದರೊಂದಿಗೆ ಡಿಸ್ಕವರ್ 100, 100ಎಂ, 100ಟಿ, 125, 125 ಟಿ ಮತ್ತು 125 ಎಸ್‌ಟಿ ಮಾದರಿಗಳ ಸಾಲಿಗೆ ಮಗದೊಂದು ವೆರಿಯಂಟ್ ಸೇರ್ಪಡೆಯಾಗಿದೆ. ಪ್ರಸ್ತುತ ಡಿಸ್ಕವರ್ 125ಎಂ ಆವೃತ್ತಿಯು 125 ಹಾಗೂ 125 ಟಿ ಮಾದರಿಗಳ ನಡುವೆ ಗುರುತಿಸಿಕೊಳ್ಳಲಿದೆ.

ಎಂಜಿನ್..
ಇದು 124.5 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಮತ್ತು ಕಾರ್ಬೂರೇಟಡ್ ಡಿಟಿಎಸ್-ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 11.3 ಬಿಎಚ್‌ಪಿ ಪವರ್ (10.8 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಫೈವ್ ಸ್ಪೀಡ್ ಟ್ರಾನ್ಸ್‌ಮಿಷನ್ ಇರಲಿದೆ.
ಮೈಲೇಜ್, ವೇಗ..
ಪ್ರಸ್ತುತ ಗಾಡಿ ಗಂಟೆಗೆ ಗರಿಷ್ಠ 100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ನೂತನ ಬಜಾಜ್ ಡಿಸ್ಕವರ್ 125 ಎಂ ಪ್ರತಿ ಲೀಟರ್‌ಗೆ 76 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ 9.5 ಲೀಟರ್ ಇಂಧನ ಟ್ಯಾಂಕ್ ಪಡೆದುಕೊಳ್ಳಲಿದೆ.

ಸ್ಟಾಂಡರ್ಡ್ ವೈಶಿಷ್ಟ್ಯಗಳು...
- ಮುಂಭಾಗ ಹಾಗೂ ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್,
- ಎಲೆಕ್ಟ್ರಿಕ್ ಸ್ಟಾರ್ಟರ್,
- ಟೆನ್ ಸ್ಪೋಕ್ ಅಲಾಯ್ ವೀಲ್,
- ಫ್ರಂಟ್ ಫಾರ್ಕ್ಸ್, ರಿಯರ್ ನಿಟ್ರಾಕ್ಸ್ ಟ್ವಿನ್ ಶಾಕ್ಸ್,
- ಐಚ್ಛಿಕ 200 ಎಂಎಂ ಡಿಸ್ಕ್ ಬ್ರೇಕ್
ಕಲರ್ ವೆರಿಯಂಟ್...
- ಎಲೆಕ್ಟ್ರಾನ್ ಬ್ಲ್ಯೂ,
- ವೈನ್ ರೆಡ್,
- ಕ್ಯಾರ್‌ಕೋಲ್ ಮ್ಯಾಗ್ನೆಟಾ,
- ಕ್ಯಾರ್‌ಕೋಲ್ ಗ್ರೀನ್,
- ಸಿಲ್ವರ್ ಬ್ಲೂ,
- ಸಿಲ್ವರ್ ಗೋಲ್ಡ್
ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ರು. 48,000
- ಐಚ್ಛಿಕ ಡಿಸ್ಕ್ ಬ್ರೇಕ್ - ರು. 50,000


Click it and Unblock the Notifications








