ಭಾರತದಲ್ಲಿ ಬಜಾಜ್ ಡಿಸ್ಕವರ್ 125 ಎಸ್‌ಟಿಗೆ ಬಿತ್ತು ಬ್ರೇಕ್
ಭಾರತದಲ್ಲಿನ್ನು ಬಜಾಜ್ ಡಿಸ್ಕವರ್ 125 ಎಸ್‌ಟಿ ಮಾದರಿ ಮಾರಾಟವಾಗಲ್ಲ. ಬಲ್ಲ ಮೂಲಗಳ ಪ್ರಕಾರ ದೇಶದಲ್ಲಿ ಬಜಾಜ್ ಡಿಸ್ಕವರ್ 125 ಎಸ್‌ಟಿ ಮಾರಾಟವನ್ನು ಬಜಾಜ್ ಆಟೋ ಸ್ಥಗಿತಗೊಳಿಸಿದೆ. ಹಾಗಿದ್ದರೂ ಸ್ಟೋಕ್ ಮುಗಿಯ ವರೆಗೂ ಮಾರಾಟ ಕಂಡುಬರಲಿದೆ.
ಅದೇ ಹೊತ್ತಿಗೆ ಈ ನಿರ್ದಿಷ್ಟ ಬೈಕ್ ವಿದೇಶಗಳಿಗೆ ರಫ್ತು ಪ್ರಕ್ರಿಯೆ ಮುಂದುವರಿಯಲಿದೆ. ಡಿಸ್ಕವರ್ ಪೈಕಿ ಜನಪ್ರಿಯ 125 ಎಸ್‌ಟಿ ಬೈಕ್ 2012ರಲ್ಲಿ ಲಾಂಚ್ ಆಗಿತ್ತು. ಇದರಲ್ಲಿ ಮುಂಭಾಗದಲ್ಲಿ 200 ಎಂಎಂ ಪೆಡ್ಯಾಲ್ ಬ್ರೇಕ್, ನಿಟ್ರಾಕ್ಸ್ ಮೊನೊಶಾಕ್ ರಿಯರ್ ಸಸ್ಪೆಷನ್ ಹಾಗೂ ಸ್ಪೋರ್ಟಿ ವಿನ್ಯಾಸ ಲಭ್ಯವಾಗಿತ್ತು.

ಹಾಗಿದ್ದರೂ ನಿರ್ದಿಷ್ಠ ಗ್ರಾಹಕರನ್ನು ಮಾತ್ರ ಸೆಳೆಯುವಲ್ಲಿ ಡಿಸ್ಕವರ್ 125 ಎಸ್‌ಟಿಗೆ ಸಾಧ್ಯವಾಗಿತ್ತು. ಇದರಿಂದಾಗಿ ಮಾರಾಟ ಹಿನ್ನಡೆ ಅನುಭವಿಸುವಂತಾಗಿತ್ತು. ಇದೇ ಕಾರಣಕ್ಕಾಗಿ ದೇಶದಲ್ಲಿ ಮಾರಾಟ ಸ್ಥಗಿತಗೊಳಿಸಲಾಗುತ್ತಿದೆ ಎಂಬ ಮಾಹಿತಿಯಿದೆ.
ಅಂದ ಹಾಗೆ ಡಿಸ್ಕವರ್ 125 ಎಸ್‌ಟಿ, 124.6 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 13 ಅಶ್ವಶಕ್ತಿ (10.78 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.


Click it and Unblock the Notifications








