ಬಜಾಜ್ ಡಿಸ್ಕವರ್ ಎಫ್150 ಟೆಸ್ಟಿಂಗ್ ಟೆಸ್ಟಿಂಗ್
ದೇಶದ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಬಜಾಜ್, ಮಗದೊಂದು 150 ಬೈಕನ್ನು ಪರಿಚಯಿಸಲಿದೆ. ಇದಕ್ಕೆ ಸಂಬಂಧಪಟ್ಟಂತೆ ನೂತನ ಡಿಸ್ಕವರ್ ಎಫ್150 ಟೆಸ್ಟಿಂಗ್ ವೇಳೆ ಸೆರೆಹಿಡಿಯಲಾಗಿದೆ. ದೇಶದ ಪ್ರಮುಖ ಆಟೋಮೊಬೈಲ್ ನಿಯತಕಾಲಿಕವಾಗಿರುವ ಓವರ್‌ಡ್ರೈವ್ ಡಾಟ್ ಇನ್ ಇದನ್ನು ಪ್ರಕಟಿಸಿದೆ.
ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅದರಲ್ಲೂ ಹೆಚ್ಚು ಎಂಜಿನ್ ಸಾಮರ್ಥ್ಯದ ಬೈಕ್‌ಗಳನ್ನು ಯುವ ಗ್ರಾಹಕರು ಇಷ್ಟಪಡುತ್ತಾರೆ.

ನೂತನ ಡಿಸ್ಕವರ್ ಎಫ್150 ಸಂಪೂರ್ಣ ಮರೆಮಾಚಿದ ರೂಪದಲ್ಲಿ ಕಂಡುಬಂದಿದೆ. ಇದು ಡಿಸ್ಕವರ್ 125 ಎಸ್‌ಟಿ ತಲಹದಿಯಲ್ಲಿ ರೂಪಿತವಾಗಿರುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಫ್ರಂಟ್ ಡಿಸ್ಕ್ ಬ್ರೇಕ್, ಮೊನೊ ರಿಯರ್ ಶಾಕ್ಸ್ ಮತ್ತು ಫ್ರಂಟ್ ಫಾರ್ಕ್ಸ್ ಪಡೆದುಕೊಂಡಿದೆ.
ವರದಿಗಳ ಪ್ರಕಾರ ಡಿಸ್ಕವರ್ ಎಫ್150, ನೂತನ 4 ವಾಲ್ವೆ 150 ಸಿಸಿ, ಸಿಂಗಲ್ ಸಿಲಿಂಡರ್ ಡಿಟಿಎಸ್-ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 14 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಹಾಗಿದ್ದರೂ ನೂತನ ಡಿಸ್ಕವರ್ ಗಾಡಿ ಪಲ್ಸರ್ 150 ಕೆಳಸ್ತರದಲ್ಲೇ ಗುರುತಿಸಿಕೊಳ್ಳುವ ಸಾಧ್ಯತೆಯಿದೆ. ಇದರಲ್ಲೂ ಸ್ಪೋರ್ಟಿ ವಿನ್ಯಾಸದ ಜತೆಗೆ ಗರಿಷ್ಠ ಇಂಧನ ಕ್ಷಮತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಸದ್ಯ ಗೋಚರಿಸಿರುವಂತೆಯೇ ಡಿಸ್ಕವರ್ ಎಫ್150 ಫೇರ್ಡ್ ವರ್ಷನ್ ಆಗಿರಲಿದೆ.


Click it and Unblock the Notifications








