ಬಜಾಜ್ ಪಲ್ಸರ್ 200 ಎಸ್‌ಎಸ್ ಲಾಂಚ್ ಸನ್ನಿಹಿತ

By Nagaraja

ಬಜಾಜ್ ಪಲ್ಸರ್ ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಎಂಬ ವಿಚಾರ ನಿಮಗೆಲ್ಲರಿಗೂ ಗೊತ್ತಿದೆ. ಇದೀಗ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಬಜಾಜ್, ಅತಿ ಶೀಘ್ರದಲ್ಲೇ ಪಲ್ಸರ್ 200 ಎಸ್‌ಎಸ್ ಮಾದರಿಯನ್ನು ಲಾಂಚ್ ಮಾಡಲಿದೆ.

ಇದಕ್ಕೆ ಪೂರಕವೆಂಬಂತೆ ಪುಣೆಯ ಡೀಲರ್‌ಶಿಪ್‌ವೊಂದರಲ್ಲಿ ನೂತನ ಪಲ್ಸರ್ 200 ಎಸ್‌ಎಸ್ ಮಾದರಿ ಪ್ರತ್ಯಕ್ಷವಾಗಿದೆ. ಇದರಿಂದಲೇ ಈ ಬಹುನಿರೀಕ್ಷಿತ ಬೈಕ್‌ನ ಬಿಡುಗಡೆ ಇನ್ನು ಸನ್ನಿಹಿತವಾಗಿರುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ.

Bajaj Pulsar 200 SS

ಬಜಾಜ್ 200 ಎನ್‌ಎಸ್‌ ಆವೃತ್ತಿಗೆ ಹೋಲಿಸಿದರೆ ನೂತನ ಪಲ್ಸರ್ ಎಸ್‌ಎಸ್ ಕೆಲವೊಂದು ಕಾಸ್ಮೆಟಿಕ್ ಬದಲಾವಣೆ ಪಡೆದುಕೊಳ್ಳಲಿದೆ. ಅಲ್ಲದೆ ಹೆಡ್‌ಲೈಟ್, ಟೈಲ್ ಲೈಟ್ ಪರಿಷ್ಕೃತ ರೂಪ ಪಡೆದುಕೊಂಡಿದ್ದು, ಹೆಚ್ಚು ಕ್ರೀಡಾತ್ಮಕವಾಗಿರಲಿದೆ.

ವರದಿಗಳ ಪ್ರಕಾರ ಪ್ರಸಕ್ತ ಸಾಲಿನಲ್ಲೇ ಪಲ್ಸರ್ 400 ಎಸ್ಎಸ್ ಸಹ ಆಗಮನವಾಗಲಿದೆ. ಅಂದ ಹಾಗೆ ಪಲ್ಸರ್ 200 ಎಸ್‌ಎಸ್, 200 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 23 ಅಶ್ವಶಕ್ತಿ ಉತ್ಪಾದಿಸುವ (20 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಕೆಟಿಎಂ ಡ್ಯೂಕ್ 200 ಹಾಗೂ ಟಿವಿಎಸ್ ಅಪಾಚೆ 180 ಮಾದರಿಗಳಿಗೆ ಕಠಿಣ ಸ್ಪರ್ಧೆಯೊಡ್ಡಲಿದೆ.

More from DriveSpark

Article Published On: Friday, May 16, 2014, 15:57 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+