ಬಜಾಜ್ ಕಾರ್ಮಿಕರಿಂದ ಮುಷ್ಕರ ಬೆದರಿಕೆ
ಯಾಕೋ ದೇಶದ ವಾಹನೋದ್ಯಮಕ್ಕೆ ಒಳ್ಳೆಯ ಕಾಲ ಕೂಡಿ ಬಂದಂತೆ ತೋಚುತ್ತಿಲ್ಲ. ಬೆಂಗಳೂರಿನ ಹೊರವಲಯದಲ್ಲಿ ಸ್ಥಿತಗೊಂಡಿರುವ ಟೊಯೊಟಾ ಕಿರ್ಲೊಸ್ಕರ್ ಇಂಡಿಯಾ ಎರಡು ಘಟಕಗಳಲ್ಲಿನ ಮುಷ್ಕರ ಬಿಸಿ ತನ್ನಗಾಗುವ ಮುನ್ನವೇ ಅಲ್ಲಿ ದೂರದ ಚಕನ್ ಘಟಕದಲ್ಲೂ ಮುಷ್ಕರ ಬೆದರಿಕೆ ಕೇಳಿ ಬಂದಿದೆ.
ಬಜಾಜ್ ಆಟೋದ ಚಕನ್ ಘಟಕದಲ್ಲಿ ಎಪ್ರಿಲ್ 28ರಿಂದ ಮುಷ್ಕರ ಹೂಡುವುದಾಗಿ ಅಲ್ಲಿನ ಕಾರ್ಮಿಕ ಸಂಘಟನೆಯು ಬೆದರಿಕೆಯೊಡ್ಡಿದೆ. ಸಂಸ್ಥೆಯ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ವಿಶ್ವ ಕಲ್ಯಾಣ್ ಕಾಮಗಾರ್ ಸಂಘಟನೆ (ವಿಕೆಕೆಎಸ್) ಆರೋಪಿಸಿದೆ.

ಈ ಸಂಬಂಧ ಎಪ್ರಿಲ್ 28ರಿಂದ ಮುಷ್ಕರ ಹೂಡುವುದಾಗಿ ಬೆದರಿಕೆಯೊಡ್ಡಿದೆ. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಕಾರ್ಮಿಕರಿಗೂ ಶೇರನ್ನು ಹಂಚಿಕೊಳ್ಳಲು ಬೇಡಿಕೆ ಒಡ್ಡಲಾಗಿದೆ.
ಪುಣೆಯಲ್ಲಿ ಸ್ಥಿತಗೊಂಡಿರುವ ಬಜಾಜ್ ಚಕನ್ ಘಟಕದಲ್ಲಿ 2000ದಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಪಲ್ಸರ್, ಆವೆಂಜರ್, ಕೆಟಿಎಂ ಹಾಗೂ ನಿಂಜಾಗಳಂತಹ ಬೈಕ್‌ಗಳು ಉತ್ಪಾದನೆಯಾಗುತ್ತಿದೆ.


Click it and Unblock the Notifications








