ನೀವು ರೆಡಿನಾ; ಹೊಸ ಡಿಸ್ಕವರ್ ಎಫ್150 ಜೂನಲ್ಲಿ ಲಾಂಚ್

By Nagaraja

ಒಂದರ ಬಳಿಕ ಒಂದರಂತೆ ಅತ್ಯಾಕರ್ಷಕ ಸುಂದರ ಬೈಕ್‌ಗಳನ್ನು ಪರಿಚಯಿಸುತ್ತಿರುವ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಬಜಾಜ್ ಆಟೋ, ಸದ್ಯದಲ್ಲೇ ಮಗದೊಂದು ಆಕರ್ಷಕ ಬೈಕನ್ನು ದೇಶಕ್ಕೆ ಪರಿಚಯಿಸಲಿದೆ. ವರದಿಗಳ ಪ್ರಕಾರ ಹೊಚ್ಚ ಹೊಸ ಬಜಾಜ್ ಡಿಸ್ಕವರ್ ಎಫ್150, ಮುಂಬರುವ ಜೂನ್ ತಿಂಗಳಲ್ಲಿ ಲಾಂಚ್ ಆಗಲಿದೆ. ಈ ಮೂಲಕ ಡಿಸ್ಕವರ್ ಫ್ಯಾಮಿಲಿಗೆ ಮಗದೊಂದು ಆತಿಥಿಯ ಆಗಮನವಾಗಲಿದೆ.

ಬಜಾಜ್ ಪಾಲಿಗೆ ಅತ್ಯಂತ ಯಶಸ್ಸು ಕೊಟ್ಟಿರುವ ಬೈಕ್ ಅಂದರೆ ಅದುವೇ ಪಲ್ಸರ್. ಇದು ದೇಶದ ನಂ.1 ಕ್ರೀಡಾ ಬೈಕ್ ಎಂಬ ಪಟ್ಟವನ್ನು ಈಗಲೂ ಉಳಿಸಿಕೊಂಡು ಬಂದಿದೆ. ಇದೀಗ ಡಿಸ್ಕವರ್ ಎಫ್150 ಸೆಮಿ ಫೇರ್ಡ್ ಬೈಕ್ ಪರಿಚಯಿಸುವ ಮೂಲಕ ದೇಶದ ಪ್ರಯಾಣಿಕ ಬೈಕ್ ವಿಭಾಗದಲ್ಲಿ ತನ್ನ ಆವೇಗವನ್ನು ಹೆಚ್ಚಿಸಿಕೊಳ್ಳುವ ಇರಾದೆಯನ್ನು ಬಜಾಜ್ ಹೊಂದಿದೆ.

Discover F150

ನೂತನ ಡಿಸ್ಕವರ್ ಎಫ್150 ಬೈಕ್, 150 ಸಿಸಿ, 4 ವಾಲ್ವೆ, ಟ್ವಿನ್ ಸ್ಪಾರ್ಕ್ ತಂತ್ರಗಾರಿಕೆ ಹೊಂದಿರಲಿದ್ದು, 14 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

ಇನ್ನುಳಿದಂತೆ ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಸಸ್ಪೆಷನ್ ಹಾಗೂ ಹಿಂದುಗಡೆ ಮೊನೊಶಾಕ್ ಪಡೆಯಲಿದೆ. ಅಲ್ಲದೆ ಡಿಜಿಟಲ್ ಇನ್ಸ್ಟ್ರಮೆಂಟ್ ಹಾಗೂ ಎಲ್‌ಇಡಿ ಬ್ರೇಕ್ ಲೈಟ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಅಂತಿಮವಾಗಿ ಮುಂದುಗಡೆ ಡಿಸ್ಕ್ ಬ್ರೇಕ್ ಸ್ಟಾಂಡರ್ಡ್ ಆಗಿರಲಿದ್ದು, ಹಿಂದುಗಡೆ ಐಚ್ಛಿಕವಾಗಿರಲಿದೆ.

ಮೊದಲ ನೋಟದಲ್ಲಿ ನೂತನ ಬಜಾಜ್ ಎಫ್150, ಹೀರೊ ಮೊಟೊಕಾರ್ಪ್‌ನ ಕರಿಜ್ಮಾ ಆರ್ ವಿನ್ಯಾಸಕ್ಕೆ ಸಾಮತ್ಯೆ ಪಡೆದಿದೆ. ಆದರೂ ಪಲ್ಸರ್ 220 ಸ್ಪೋರ್ಟ್ ಬೈಕ್‌ನಿಂದ ಪ್ರೇರಣೆ ಪಡೆದು ಬಜಾಜ್ ಇದರ ವಿನ್ಯಾಸ ರಚಿಸಿದೆ. ಇದು ಡಿಸ್ಕವರ್ 125ಎಸ್‌ಟಿ ಮಾದರಿಯಲ್ಲಿರುವುದಕ್ಕೆ ಸಮಾನವಾದ ಅಲಾಯ್ ವೀಲ್ ಪಡೆದುಕೊಳ್ಳಲಿದೆ.

ಅಂದ ಹಾಗೆ ನೂತನ ಡಿಸ್ಕವರ್ ಎಫ್150, ಯಮಹಾ ಫೇಜರ್ ಹಾಗೂ ಸುಜುಕಿಯಿಂದ ಇನ್ನಷ್ಟೇ ಲಾಂಚ್ ಆಗಲಿರುವ ಜಿಕ್ಸರ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ. ಇದರ ದರ 50,000 ರು.ಗಳಿಂದ 60,000 ರು.ಗಳೆಡೆಯಲ್ಲಿ ಅಂದಾಜಿಸಲಾಗಿದೆ.

More from DriveSpark

Article Published On: Wednesday, May 14, 2014, 17:17 [IST]
English summary
Now there is confirmation that they will be launching a commuter bike in the Discover family in the coming month, June 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+