ಚಂಡೀಗಡದಲ್ಲಿ ಡಿಎಸ್‌ಕೆ ಹ್ಯೊಸಂಗ್ ಹೊಸ ಡೀಲರ್‌ಶಿಪ್
ಡಿಎಸ್‌ಕೆ ಜೊತೆ ಪಾಲುದಾರಿಕೆ ಹೊಂದಿರುವ ದಕ್ಷಿಣ ಕೊರಿಯಾ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯೊಸಂಗ್, ತನ್ನ ಐಕಾನಿಕ್ ಮಾದರಿಗಳನ್ನು ಭಾರತದಲ್ಲಿ ಮಾರಾಟಗೈಯುತ್ತಿದೆ.
ದೇಶದ ಪ್ರೀಮಿಯಂ ಬೈಕ್ ಮಾರಾಟದಲ್ಲಿ ಹೊಸ ಹುರುಪಿಗೆ ಕಾರಣವಾಗಿರುವ ಹ್ಯೊಸಂಗ್ ಯುವ ಗ್ರಾಹಕರನ್ನು ಆಕರ್ಷಿಸುವತ್ತ ಗಮನ ಕೇಂದ್ರಿತವಾಗಿದೆ. ಇದರಂತೆ ತನ್ನ ಮಾರಾಟ ಜಾಲವನ್ನು ವೃದ್ಧಿಸಿಕೊಳ್ಳುತ್ತಿದೆ. ಪ್ರಸ್ತುತ ಡಿಎಸ್‌ಕೆ ಹ್ಯೊಸಂಗ್ ಚಂಡೀಗಡದಲ್ಲಿ ಹೊಸ ವಿತರಕ ಜಾಲವನ್ನು ತೆರೆದುಕೊಂಡಿದೆ. ಈ ಮೂಲಕ ಬೈಕ್ ಪ್ರೇಮಿಗಳನ್ನು ಹೆಚ್ಚು ನಿಕಟವಾಗಿ ತಲುಪಲಿದೆ.

ಇದರೊಂದಿಗೆ ದೇಶದಲ್ಲಿ ಡಿಎಸ್‌ಕೆ ಹ್ಯೊಸಂಗ್ ಶೋ ರೂಂ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಚಂಡೀಗಡದ ಹೊಸ ಶೋ ರೂಂನಲ್ಲಿ ಭಾರತದಲ್ಲಿ ಮಾರಾಟದಲ್ಲಿ ಹ್ಯೊಸಂಗ್‌ನ ಎಕ್ಸ್‌ಕ್ಲೂಸಿವ್ ಸೂಪರ್ ಬೈಕ್‌ಗಳ ಪ್ರದರ್ಶನ ನಡೆಯಲಿದೆ.
ಡಿಎಸ್‌ಕೆ ಹ್ಯೊಸಂಗ್ (ಎಕ್ಸ್ ಶೋ ರೂಂ ಬೆಲೆ, ಚಂಡೀಗಡ)
ಅಕ್ವಿಲಾ 250 - 2.75 ಲಕ್ಷ ರು.
ಜಿಟಿ 250 ಆರ್ - 2.90 ಲಕ್ಷ ರು.
ಅಕ್ವಿಲಾ ಪ್ರೊ ಜಿವಿ - 5.08 ಲಕ್ಷ ರು.
ಎಸ್‌ಟಿ 7 - 5.79 ಲಕ್ಷ ರು.
ಇದೇ ಸಂದರ್ಭದಲ್ಲಿ ಚಂಡೀಗಡ ಡೀಲರ್‌ಶಿಪ್‌ನಲ್ಲಿ ಹ್ಯೊಸಂಗ್ ತುರ್ತು ಸೇವೆಯು ಲಭ್ಯವಿರಲಿದೆ. ಈ ಮೂಲಕ ಸ್ಥಳಕ್ಕೆ ತೆರಳಿ ರಿಪೇರಿ, ಬ್ಯಾಟರಿ ಜಂಪ್ ಸ್ಟಾರ್ಟ್, ಬ್ರೇಕ್ ಡೌನ್ ಸೇವೆ, ಇಂಧನ ವಿತರಣೆ, ಕೀಲಿ ಕಳವಾದ ವೇಳೆ ಸಹಾಯ, ಬೈಕ್ ರವಾನೆ ಮತ್ತು ಟ್ಯಾಕ್ಸಿ ಡ್ರಾಪ್ ಸೌಲಭ್ಯ ಕೂಡಾ ಲಭ್ಯವಾಗಲಿದೆ.


Click it and Unblock the Notifications








