ಹೀರೊ ಮೊಟೊಕಾರ್ಪ್ 'ಗ್ರೀನ್ ಫಾಕ್ಟರಿ'ಗೆ ಚಾಲನೆ

Written By:

ಸುಸ್ಥಿರ ಪರಿಸರ ಬೆಳವಣಿಗೆಯನ್ನು ಗುರಿಯಾಗಿರಿಸಿಕೊಂಡಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ರಾಜಸ್ತಾನದಲ್ಲಿ ಪರಿಸರ ಸ್ನೇಹಿ 'ಗಾರ್ಡನ್ ಫಾಕ್ಟರಿ'ಗೆ ಚಾಲನೆ ನೀಡಿದೆ.

ಹೀರೊ ಮೊಟೊಕಾರ್ಪ್‌ನ ಈ ಮಹತ್ತರ ಘಟಕವು ರಾಜಸ್ತಾನದ ನಿಮ್ರಾನಾದಲ್ಲಿ ತಲೆಯೆತ್ತಿದೆ. ಈ ಮೂಲಕ 2020ರ ವೇಳೆಯಾಗುವಾಗ 100 ಮಿಲಿಯನ್ ಯುನಿಟ್‌ಗಳ ನಿರ್ಮಾಣ ಸಾಮರ್ಥ್ಯವನ್ನು ಸಂಸ್ಥೆಯು ಗುರಿಯಿರಿಸಿಕೊಂಡಿದೆ.

To Follow DriveSpark On Facebook, Click The Like Button

ಹೀರೊ ಗಾರ್ಡನ್ ಫಾಕ್ಟರಿ ಪ್ರಮುಖವಾಗಿಯೂ ಸುಸ್ಥಿರ ಪರಿಸರ ಬೆಳವಣಿಗೆಯನ್ನು ಎದುರು ನೋಡುತ್ತಿದ್ದು, ಈ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಇಲ್ಲಿ ಉನ್ನತ ಮಟ್ಟದ ಪರಿಸರ ಗುಣಮಟ್ಟತೆಯನ್ನು ಕಾಯ್ದುಕೊಳ್ಳಲಾಗುವುದು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೀರೊದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಪವನ್ ಮುಂಜಾಲ್, "ನಾವು ಹೊಸ ಘಟಕದಲ್ಲಿ ನಿರ್ಮಾಣ ಮಾತ್ರ ಮಾಡುತ್ತಿಲ್ಲ. ಬದಲಾಗಿ ಎಲ್ಲಿಂದ ನಾವು ಪಡೆದುಕೊಳ್ಳುತ್ತಿದ್ದೆವೆಯೋ ಅಲ್ಲಿಗೆ (ಪರಿಸರಕ್ಕೆ) ಹಿಂತಿರುಗಿ ನೀಡುತ್ತಿದ್ದೇವೆ" ಎಂದಿದ್ದಾರೆ.

Hero MotoCorp

ಆಟೋಮೊಬೈಲ್ ಜಗತ್ತಿನ ನಾಯಕನಾಗಿರುವ ಹಿನ್ನಲೆಯಲ್ಲಿ ಇದು ನಮ್ಮ ಕರ್ತವ್ಯವಾಗಿದ್ದು, ಶಿಪ್ರಗತಿಯಲ್ಲಿ ಬದಲಾಗುತ್ತಿರುವ ಪರಿಸರವನ್ನು ಅಧ್ಯಯನ ಮಾಡಬೇಕಾಗಿದೆ. ಮಾಲಿನ್ಯ ರಹಿತ ಪರಿಸರ ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಮೊತ್ತ ಮೊದಲ 'ಗ್ರೀನ್ ಕಾನ್ಸೆಪ್ಟ್'ಗೆ ಬದ್ಧರಾಗಿದ್ದೇವೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ಮುಂದಿನ ಎರಡು ಮೂರು ವರ್ಷಗಳಲ್ಲಿ 5,000 ಕೋಟಿ ರು.ಗಳನ್ನು ಹೂಡಿಕೆ ಮಾಡುವ ಗುರಿ ಸಹ ಹೊಂದಿದೆ. ಇದರಂತೆ 2016ರಲ್ಲಿ ಅಮೆರಿಕಕ್ಕೆ ಲೀಪ್ ಹೈಬ್ರಿಡ್ ಸ್ಕೂಟರ್ ಪರಿಚಯವಾಗಲಿದೆ. 

English summary
Hero MotoCorp is India's largest two-wheeler manufacturer and seller. Other than that they too are searching ways to promote sustainable growth. Their other agenda is to improve the overall ‘Green Concept' around its factories.
Story first published: Tuesday, October 21, 2014, 11:57 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark