ಬರುತ್ತಿದೆ ಇನ್ನೊಂದು ಮೈಲೇಜ್ ಬೈಕ್ ಸ್ಲ್ಪೆಂಡರ್ ಐ-ಸ್ಮಾರ್ಟ್

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ತನ್ನ ಜನಪ್ರಿಯ ಸ್ಪ್ಲೆಂಡರ್ ಆವೃತ್ತಿಯ ನೂತನ ಐ-ಸ್ಮಾರ್ಟ್ ವರ್ಷನ್ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಇದರಂತೆ ಬಿಡುಗಡೆ ಮುನ್ನವೇ ದರ ಇತ್ಯಾದಿ ಕುತೂಹಲಕಾರಿ ಮಾಹಿತಿಗಳು ಲೀಕ್ ಆಗಿವೆ.

ಬಲ್ಲ ಮೂಲಗಳ ಪ್ರಕಾರ ಸ್ಪ್ಲೆಂಡರ್ ಐ-ಸ್ಮಾರ್ಟ್ 2014 ಜನವರಿ 29ರಂದು ಲಾಂಚ್ ಆಗಲಿದೆ. ಇದರ ಎಕ್ಸ್ ಶೋ ರೂಂ ದರ 57.200 ರು.ಗಳಾಗಿರಲಿದೆ. ಇದು ಟಾಪ್ ಎಂಡ ಸ್ಪ್ಲೆಂಡರ್ ಆವೃತ್ತಿಗಿಂತಲೂ 2000 ರು.ಗಳಷ್ಟು ದುಬಾರಿಯಾಗಿರಲಿದೆ. ಹಾಗೆಯೇ ಬುಕ್ಕಿಂಗ್ ಮಾಡಿದ ಒಂದೆರೆಡು ವಾರಗಳಲ್ಲಿ ಗ್ರಾಹಕರ ಕೈ ಸೇರಲಿದೆ.

Hero Splendor

ನೂತನ ಐಡ್ಲ್ (idle) ಸ್ಟಾಪ್-ಸ್ಟಾರ್ಟ್ ಸಿಸ್ಟಂ ಐಸ್ಮಾರ್ಟ್ ಬೈಕ್‌ನ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಇದು ಹೆಚ್ಚು ಇಂಧನ ಕ್ಷಮತೆ ಗಿಟ್ಟಿಸಿಕೊಳ್ಳಲು ನೆರವಾಗಲಿದೆ. ಪ್ರಸ್ತುತ ತಂತ್ರಗಾರಿಕೆಯು ಮಹೀಂದ್ರದ ಮೈಕ್ರೊ ಹೈಬ್ರಿಡ್ ತಂತ್ರಜ್ಞಾನಕ್ಕೆ ಸಮಾನವಾಗಿ ಕಾರ್ಯಾಚರಿಸಲಿದೆ.

ಹೊಸತಾದ ಬಾಡಿ ಗ್ರಾಫಿಕ್ಸ್, ಎಲೆಕ್ಟ್ರಿಕ್ ಸ್ಟಾರ್ಟ್, ಇನ್ಸ್ಟ್ರುಮೆಂಟ್, ಕಪ್ಪು ವರ್ಣದ ಅಲಾಯ್ ವೀಲ್, ಪವರ್ ಸ್ಟಾರ್ಟ್ ಮತ್ತು ಸ್ಟೈಲಿಷ್ ಮೀಟರ್ ಕನ್ಸೋಲ್‌ಗಳಂತಹ ಆಕರ್ಷಕ ಫೀಚರ್ಸ್‌ಗಳನ್ನು ನೂತನ ಬೈಕ್ ಪಡೆಯಲಿದೆ. ಇನ್ನುಳಿದಂತೆ 97.2 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 7.8 ಪಿಎಸ್ ಪವರ್ (8.04 ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಬಜಾಜ್‌ನ ಡಿಸ್ಕವರ್ 100ಎಂ ಆವೃತ್ತಿಗೆ ಪೈಪೋಟಿ ಒಡ್ಡಲಿದೆ.

More from DriveSpark

Article Published On: Thursday, January 16, 2014, 12:36 [IST]
English summary
India’s largest two-wheeler manufacturer Hero MotoCorp is all set to launch its new and upgraded products this year. According to sources, Hero Splendor iSmart will be launched on January 29, 2014 which was unveiled in October last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+