ಜಾಗತಿಕವಾಗಿ 300 ದಶಲಕ್ಷ ಹೋಂಡಾ ಬೈಕ್‌ಗಳ ಮಾರಾಟ
ಹಾಗೇನಾದರೂ ಜಾಗತಿಕವಾಗಿ ಇದುವರೆಗೆ ಎಷ್ಟು ಹೋಂಡಾ ಬೈಕ್‌ಗಳು ಮಾರಾಟವಾಗಿರಬಹುದು ಎಂಬುದನ್ನೊಮ್ಮೆ ಅಂದಾಜು ಮಾಡಿ ಹೇಳಬಹುದೇ?
10 ಲಕ್ಷ? 20 ಲಕ್ಷ? ಖಂಡಿತ ಅಲ್ಲ, ಕೊನೆಗೂ ಆ ಐತಿಹಾಸಿಕ ಕ್ಷಣ ಬಂದೆ ಬಿಟ್ಟಿದೆ. ಜಾಗತಿಕವಾಗಿ ಒಟ್ಟು 300 ದಶಲಕ್ಷ ಹೋಂಡಾ ಬೈಕ್‌ಗಳು ಮಾರಾಟವಾಗಿದೆ. ಕಳೆದ 66 ವರ್ಷಗಳ ಸುದೀರ್ಘ ಅವಧಿಯಲ್ಲಿ ಹೋಂಡಾ ಇಂತಹದೊಂದು ಮಹತ್ತರ ಸಾಧನೆ ಮಾಡಿದೆ.

ಜಾಗತಿಕವಾಗಿಯೂ ತನ್ನ ಸಾನಿಧ್ಯ ಗಟ್ಟಿ ಮಾಡಿರುವ ಹೋಂಡಾ, ಅನೇಕ ಪ್ರಯಾಣಿಕ ಮಾದರಿಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಇದು ಹೆಚ್ಚಿನ ಮನ್ನಣೆಯ ಜೊತೆಗೆ ಜನಪ್ರಿಯತೆ ಕಾಯ್ದುಕೊಳ್ಳಲು ನೆರವಾಗಿತ್ತು.
ಹೋಂಡಾ ಮೋಟಾರು ಕಂಪನಿ ಲಿಮಿಟೆಡ್ ಇದನ್ನು ಡಿಸೆಂಬರ್ 9ರಂದು ಅಧಿಕೃತವಾಗಿ ಘೋಷಣೆ ಮಾಡಿದ್ದು, ಜಾಗತಿಕವಾಗಿ 300 ದಶಲಕ್ಷ (300 ಮಿಲಿಯನ್) ಮಾರಾಟ ತಲುಪಿರುವುದಾಗಿ ತಿಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಹೋಂಡಾ ಮೋಟಾರು ಕಂಪನಿ ಲಿಮಿಟೆಡ್ ಸಿಇಒ ಹಾಗೂ ಅಧ್ಯಕ್ಷರಾಗಿರುವ ಟಕನಾಬು ಇಟೊ, "ತನ್ನೆಲ್ಲ ಗ್ರಾಹಕರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಇನ್ನು ಮುಂದೆ ಉತ್ತಮ ಉತ್ಪನ್ನಗಳನ್ನು ಪರಿಚಯಿಸುವುದಾಗಿ" ತಿಳಿಸಿದ್ದಾರೆ.

ಅಂದ ಹಾಗೆ ಹೋಂಡಾ 300 ಮಿಲಿಯನ್ ಬೈಕ್ ಜಪಾನ್‌ನ ಕುಮಮೊಟೊ ಘಟಕದಲ್ಲಿ ಉತ್ಪಾದನೆಯಾಗಿದೆ. ವಿಶೇಷವೆಂದರೆ ಹೋಂಡಾದ ಮೊದಲ ಘಟಕವೂ ಇದಾಗಿದೆ. ಅಲ್ಲದೆ ಸಂಸ್ಥೆಯ 300 ದಶಲಕ್ಷದ ಮಾದರಿ ಯಾವುದೆಂಬುದನ್ನು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಆದರೆ ನಿಮ್ಮ ಕಾಯುವಿಕೆಗೆ ನಾವಿಲ್ಲಿ ಅಂತ್ಯ ಹಾಡಲಿದ್ದೇವೆ. ಯಾಕೆಂದರೆ ಸಂಸ್ಥೆಯ 300ನೇ ದಶಲಕ್ಷದ ಬೈಕ್ 2015 'ಗೋಲ್ಡ್ ವಿಂಗ್' ಆಗಿರಲಿದೆ. ಈ ಹಿಂದೆ 1949ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದ ಹೀರೊ ಇದೀಗ 22 ದೇಶಗಳಲ್ಲಿ ಸಾನಿಧ್ಯ ಹೊಂದಿದ್ದು, ಜಾಗತಿಕವಾಗಿ 33 ಘಟಕಗಳನ್ನು ಹೊಂದಿದೆ.


Click it and Unblock the Notifications