ಹೋಂಡಾ ಆಕ್ಟಿವಾ 125 ಜಾಹೀರಾತು ಅಭಿಯಾನ
ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ಸ್ಕೂಟರ್ ವಿಭಾಗದಲ್ಲಿ ಈಗಾಗಲೇ ತನ್ನ ಅಧಿಪತ್ಯ ಸ್ಥಾಪಿಸಿದೆ. ಹೋಂಡಾ ಇಂತಹದೊಂದು ಸಾಧನೆಯ ಹಿಂದೆ ಆಕ್ಟಿವಾ ಪ್ರಮುಖ ಪಾತ್ರ ವಹಿಸಿತ್ತು.
ಇದರಿಂದಲೇ ಉತ್ಸಾಹಿತಗೊಂಡಿರುವ ಜಪಾನ್ ಮೂಲದ ಈ ಟು ವೀಲರ್ ಸಂಸ್ಥೆಯು ಇತ್ತೀಚೆಗಷ್ಟೇ ಆಕ್ಟಿವಾ 125 ಆವೃತ್ತಿಯನ್ನು ಪರಿಚಯಿಸಿತ್ತು. ಇದು 110 ಸಿಸಿ ಆಕ್ಟಿವಾಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿದೆ.

ಈ ಮೂಲಕ 125 ಸಿಸಿ ವಿಭಾಗಕ್ಕೂ ಕಾಲಿರಿಸಿದ್ದ ಹೋಂಡಾ, ಈ ನಿಟ್ಟಿನಲ್ಲಿ ಆಕರ್ಷಕ ಪ್ರಚಾರ ಜಾಹೀರಾತುವೊಂದನ್ನು ತಯಾರಿಸಿದೆ. 'ಸ್ಟೆಪ್-ಅಪ್' ಎಂದು ಹೆಸರಿಸಿಕೊಂಡಿರುವ ಈ ಜಾಹೀರಾತನ್ನು ಹೋಂಡಾ ಸಂಸ್ಥೆಗಾಗಿ ಡೆಂಟ್ಸು ಮಾರ್ಕಮ್ ತಯಾರಿಸಿದೆ.
124 ಸಿಸಿ ಪೆಟ್ರೋಲ್ ನಿಯಂತ್ರಿತ ಆಕ್ಟಿವಾ ಸ್ಟಾಡಂರ್ಡ್ ಹಾಗೂ ಡಿಲಕ್ಸ್‌ಗಳೆಂಬ ಎರಡು ಮಾದರಿಗಳಲ್ಲಿ ಲಭ್ಯವಿರುತ್ತದೆ. ಈ ಪೈಕಿ ಡಿಲಕ್ಸ್ ವೆರಿಯಂಟ್ ಡಿಸ್ಕ್ ಬ್ರೇಕ್ ಹಾಗೂ ವಿಶೇಷ ವರ್ಣಗಳನ್ನು ಪಡೆಯಲಿದೆ.
ಹೋಂಡಾ ಪ್ರಕಾರ ಆಕ್ಟಿವಾ 125 ಸಿಸಿ ಸ್ಕೂಟರ್ ಪ್ರತಿ ಲೀಟರ್ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದರ ಮುಂಬೈ ಎಕ್ಸ್ ಶೋ ರೂಂ ದರ 56.607 ರು.ಗಳಾಗಿವೆ. ಅದೇ ಹೊತ್ತಿಗೆ ಡಿಲಕ್ಸ್ ವರ್ಷನ್ 62,588 ರು.ಗಳಷ್ಟು (ಮುಂಬೈ ಎಕ್ಸ್ ಶೋ ರೂಂ) ದುಬಾರಿಯೆನಿಸಿದೆ.


Click it and Unblock the Notifications








