ಮತ್ತೆ ಸ್ಪ್ಲೆಂಡರ್ ಹಿಂದಿಕ್ಕಿದ ಆಕ್ಟಿವಾ ಅಗ್ರಸ್ಥಾನಕ್ಕೆ ನೆಗೆತ

By Nagaraja

ಕಳೆದ ಒಂದು ವರ್ಷದ ಅವಧಿಯಲ್ಲಿ ಹೋಂಡಾ ಆಕ್ಟಿವಾ ಮೂರನೇ ಬಾರಿಗೆ ಅಗ್ರಸ್ಥಾನಕ್ಕೇರಿದೆ. ಅದು ಹೇಗೆ ಅಂತೀರಾ? ಹೌದು, ಜುಲೈ ತಿಂಗಳ ಮಾರಾಟದಲ್ಲೂ ನಂ.1 ಪಟ್ಟ ಆಲಂಕರಿಸಿರುವ ಹೋಂಡಾ ಆಕ್ಟಿವಾ ಸ್ಕೂಟರ್ ಇಂತಹದೊಂದು ಸಾಧನೆ ಮಾಡಿದೆ.

ಕಳೆದ 11 ತಿಂಗಳಲ್ಲಿ ಹೋಂಡಾ ಇದು ಮೂರನೇ ಬಾರಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಜನಪ್ರಿಯ ಹೀರೊ ಸ್ಪ್ಲೆಂಡರ್ ಆವೃತ್ತಿಯನ್ನು ಹಿಂದಿಕ್ಕಿರುವ ಆಕ್ಟಿವಾ ಜುಲೈ ತಿಂಗಳಲ್ಲಿ ಒಟ್ಟು 1,91,883 ಯುನಿಟ್‌ಗಳ ಮಾರಾಟ ಕಂಡುಕೊಂಡಿದೆ.

Honda Activa

ಇದೇ ಅವಧಿಯಲ್ಲಿ ಸ್ಪ್ಲೆಂಡರ್ 1,65,779 ಯುನಿಟ್‌ಗಳಷ್ಟು ಮಾರಾಟ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾದ ಆಕ್ಟಿವಾ 125 ಆವೃತ್ತಿಯು ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಈ ಹಿಂದೆ ಕಳೆದ ವರ್ಷ (2013ರಲ್ಲಿ) ಸೆಪ್ಟೆಂಬರ್ ಮತ್ತು 2014 ಮಾರ್ಚ್ ತಿಂಗಳಲ್ಲಿ ಆಕ್ಟಿವಾ ಅಗ್ರಸ್ಥಾನ ಆಲಂಕರಿಸಿತ್ತು. ಈ ಅವಧಿಯಲ್ಲಿ ಅನುಕ್ರಮವಾಗಿ 1,41,996 ಮತ್ತು 1,77,928 ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಈ ಎರಡೂ ಸಂದರ್ಭಗಳಲ್ಲಿ ಸ್ಪ್ಲೆಂಡರ್ 1,24,217 ಹಾಗೂ 1,63,778 ಯುನಿಟ್‌ಗಳ ಮಾರಾಟ ದಾಖಲಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಂಡಾ ಮೋಟಾರ್ಸ್ ಆಂಡ್ ಸ್ಕೂಟರ್ ಇಂಡಿಯಾ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿರುವ ಯಧ್‌ವಿಂದರ್ ಎಸ್ ಗುಲೆರಿಯಾ, 14 ವರ್ಷಗಳ ಹಿಂದೆ 2001ನೇ ಇಸವಿಯಲ್ಲಿ ಲಾಂಚ್ ಆಗಿರುವ ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಈಗಲೂ ಕಾಯುವಿಕೆ ಅವಧಿಯಿದ್ದು, ಇದು ಈ ಐಕಾನಿಕ್ ಮಾದರಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

More from DriveSpark

Article Published On: Tuesday, August 19, 2014, 7:40 [IST]
English summary
Honda Activa becomes the best selling two wheeler in India for the third time this July in the past 11 months. Keeping the upcoming festive season in mind, Honda is looking to cash in on this situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+