ವಾಹನ ಪ್ರೇಮಿಗಳ ಕನಸಿನ ಬೈಕ್ 'ಗೋಲ್ಡ್‌ವಿಂಗ್' ಲಾಂಚ್
40ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್‌ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ದೇಶದ ವಾಹನ ಪ್ರೇಮಿಗಳಿಗಾಗಿ ಹೊಚ್ಚ ಹೊಸತಾದ 'ಗೋಲ್ಡ್ ವಿಂಗ್' ಬೈಕ್ ಅನ್ನು ಪರಿಚಯಿಸಿದೆ.
ಅಲ್ಟಿಮೇಟ್ ಟೂರಿಂಗ್ ಬೈಕ್ ಎನಿಸಿಕೊಂಡಿರುವ ಗೋಲ್ಡ್ ವಿಂಗ್ ಬೈಕ್ ಪ್ರೇಮಿಗಳಿಗೆ ನೈಜ ಚಾಲನಾ ಅನುಭವ ನೀಡಲಿದೆ.

ವೆರಿಯಂಟ್, ದರ ಮಾಹಿತಿ:
ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಹೋಂಡಾ ಗೋಲ್ಡ್ ವಿಂಗ್ ಲಭ್ಯವಾಗಲಿದ್ದು, ದರ ಪಟ್ಟಿ ಇಂತಿದೆ.
- ಹೋಂಡಾ ಗೋಲ್ಡ್‌ವಿಂಗ್ (ಏರ್ ಬ್ಯಾಗ್ ರಹಿತ): 28.50 ಲಕ್ಷ ರು.
- ಹೋಂಡಾ ಗೋಲ್ಡ್‌ವಿಂಗ್ ಏರ್ ಬ್ಯಾಗ್: 31.50 ಲಕ್ಷ ರು.
(ದೆಹಲಿ ಎಕ್ಸ್ ಶೋ ರೂಂ)
ಎಂಜಿನ್
ಹೋಂಡಾ ಗೋಲ್ಡ್ ವಿಂಗ್ ಸಿಕ್ಸ್ ಸಿಲಿಂಡರ್ 1832 ಸಿಸಿ ಫೋರ್ ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಅತ್ಯಾದ್ಭುತ 118 ಅಶ್ವಶಕ್ತಿ (167 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಸ್ಲೋ ಸ್ಪೀಡ್, ಎಲೆಕ್ಟ್ರಿಕ್ ರಿವರ್ಸ್ ಸಿಸ್ಟಂ ಹೊಂದಿರಲಿದೆ.

ವಿಶಿಷ್ಟತೆ
ಹೀಟಡ್ ಗ್ರಿಪ್ ಐದು ಸ್ಥಾನಗಳಿಗೆ ಬದಲಾವಣೆ ಸಾಧ್ಯ,
ಸ್ವತಂತ್ರವಾಗಿ ಹೊಂದಾಣಿಸಬಹುದಾದ ಹೀಟಡ್ ಸೀಟು,
ಫೂಟ್ ವಾರ್ಮಿಂಗ್ ಸಿಸ್ಟಂ,
ಹಿಂದುಗಡೆ ದೊಡ್ಡದಾದ ಲಗ್ಗೇಜ್ ಬಾಕ್ಸ್,
ಆರು ಸ್ಪೀಕರ್ (80w ಎಸ್‌ಆರ್‌ಎಸ್ ಸೌರಂಡ್ ಸೌಂಡ್ ಸಿಸ್ಟಂ)
ಐಪೊಡ್, ಐಫೋನ್, ಯುಎಸ್‌ಬಿ ಕನೆಕ್ಟಿವಿಟಿ,
ಎಲೆಕ್ಟ್ರಿಕ್ ರಿವರ್ಸ್ ಸಿಸ್ಟಂ,
ಎಲೆಕ್ಟ್ರಿಕ್ ಕ್ರೂಸ್ ಕಂಟ್ರೋಲ್,
ಲಗ್ಗೇಜ್ ಸಾಮರ್ಥ್ಯ - 150 ಲೀಟರ್‌ಗಿಂತಲೂ ಹೆಚ್ಚು
25 ಲೀಟರ್ ಇಂಧನ ಟ್ಯಾಂಕ್
ಸುರಕ್ಷತೆ
ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್),
ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
ಏರ್ ಬ್ಯಾಗ್ (ಐಚ್ಚಿಕ)
ಬೈಕನ್‌ವೀರ್ ಬೈಕರ್ ಬೈಕಿಂಗ್ ಗ್ಲೋವ್ಸ್ ರು. 340ರಿಂದ - ತ್ವರೆ ಮಾಡಿ


Click it and Unblock the Notifications








