ನವೆಂಬರ್‌ನಲ್ಲಿ ಹೋಂಡಾ ಸಿಬಿಆರ್300ಆರ್ ದೇಶದಲ್ಲಿ ಲಾಂಚ್

By Nagaraja

ಹೋಂಡಾ ಸಿಬಿಆರ್250ಆರ್ ಈಗಾಗಲೇ ದೇಶದ ರಸ್ತೆಗಳಲ್ಲಿ ಸದ್ದು ಮಾಡುತ್ತಿದೆ. ಪ್ರಸ್ತುತ ಜಪಾನ್‌ನ ಈ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ನೂತನ ಸಿಬಿಆರ್300ಆರ್ ಪರಿಚಯಿಸುವ ಯೋಜನೆ ಹೊಂದಿದೆ.

ಇನ್ನೊಂದೆಡೆ ಸಿಬಿಆರ್250ಆರ್ ಬಿಡುಗಡೆ ಬಳಿಕ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ಹಾಗಿದ್ದರೂ ಕೆಲವು ವಿಶೇಷ ಆವೃತ್ತಿಗಳ ಮೂಲಕ ಹೊಸ ಬಣ್ಣಗಳನ್ನು ಮಾತ್ರ ಪರಿಚಯಿಸಲಾಗಿತ್ತು. ಜಾಗಿತಿಕವಾಗಿ ಸಿಬಿಆರ್250ಆರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಪಡೆದುಕೊಂಡಿದೆ. ಸಹಜವಾಗಿಯೇ ಎಂಜಿನ್ ಬದಲಾವಣೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.


ಇವೆಲ್ಲದರ ನಡುವೆ ಸಿಬಿಆರ್300ಆರ್ ಸಹ ಭಾರತ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದೆ. ಈ ಹಿಂದೆ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣದಿರುವುದು ಬೇಸರಕ್ಕೆ ಕಾರಣವಾಗಿದ್ದರೂ ಸಹ ಮುಂಬರುವ ಹಬ್ಬದ ಆವೃತ್ತಿ ವೇಳೆ ಅಂದರೆ ನವೆಂಬರ್ ಅಸುಪಾಸಿನಲ್ಲಿ ದೇಶಕ್ಕೆ ಪರಿಚಯಿಸುವ ಯೋಜನೆ ಹೊಂದಿದೆ.

ಸಿಬಿಆರ್300ಆರ್ ಹೆಚ್ಚು ಆಕ್ರಮಣಕಾರಿ ಲುಕ್ ಪಡೆದುಕೊಳ್ಳಲಿದ್ದು, ಟ್ವಿನ್ ಹೆಡ್‌ಲೈಟ್ ಇನ್ನಷ್ಟು ಆಕರ್ಷಣೀಯವಾಗಿದೆ. ಇದರಲ್ಲಿ 286 ಸಿಸಿ 4 ಸ್ಟ್ರೋಕ್ ಎಂಜಿನ್ ಆಳವಡಿಸಲಾಗಿದ್ದು, 30 ಬಿಎಚ್‌ಪಿ (27 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಸಿಬಿಆರ್‌250ಆರ್ ಆವೃತ್ತಿಗಿಂತಲೂ ಹಗುರವಾಗಿರಲಿದೆ ಎಂಬುದು ಮಗದೊಂದು ಗಮನಾರ್ಹ ಸಂಗತಿ. ಈ ನಿಟ್ಟಿನಲ್ಲಿ ಎಕ್ಸಾಸ್ಟ್ ಹಾಗೂ ಚಾಸೀ ಪರಿಷ್ಕೃತಗೊಳಿಸಲಾಗಿದೆ.

Honda India

ಅಂದ ಹಾಗೆ ದೇಶದಲ್ಲಿ ಸಿಬಿಆರ್‌300ಆರ್ ಮಾದರಿಗೆ ಮಹೀಂದ್ರದಿಂದ ಇನ್ನಷ್ಟೇ ಆಗಮನವಾಗಲಿರುವ ಮೊಜೊ ಕಠಿಣ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ. ಇದು ಸಿಂಗಲ್ ಸಿಲಿಂಡರ್ 300 ಸಿಸಿ ಎಂಜಿನ್ ಪಡೆದುಕೊಳ್ಳಲಿದೆ. ಒಟ್ಟಿನಲ್ಲಿ ಮೂರು ಲಕ್ಷ ರು.ಗಳ ಅಸುಪಾಸಿನಲ್ಲಿ ರಸ್ತೆ ಪ್ರವೇಶಿಸಲಿರುವ ಹೋಂಡಾ ಸಿಬಿಆರ್300ಆರ್ ಹೇಗೆ ಗ್ರಾಹಕರನ್ನು ಆಕರ್ಷಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ದೊರಕಲಿದೆ.

More from DriveSpark

Article Published On: Thursday, May 22, 2014, 15:45 [IST]
English summary
The CBR250R by Honda has been in India for a while now. However, the Japanese manufacturer has not given it a cosmetic change since its launch. They have only introduced new colours along with a few special editions of their quarter-litre bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+