ಹೊಸ ಕಲರ್‌ನಲ್ಲಿ ಶೈನಾದ ಹೋಂಡಾ ಸಿಬಿ ಶೈನ್
ಹೊಂಡಾ ಶೈನ್ ಬೈಕ್ ಖರೀದಿಸಬೇಕೆಂದು ಯೋಚಿಸುತ್ತಿರುವ ಗ್ರಾಹಕರಿಗೆ ಗುಡ್‌ನ್ಯೂಸ್. ದೇಶದ 125 ಸಿಸಿಯಲ್ಲಿ ನಂಬರ್ ಒನ್ ಬೈಕ್ ಆಗಿರುವ ಹೋಂಡಾ ಸಿಬಿ ಶೈನ್ ಇದೀಗ ಹೊಸದಾಗಿ ಬಣ್ಣ ಮತ್ತು ಗ್ರಾಫಿಕ್ಸ್‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಂಪು, ಕಪ್ಪು ಬಣ್ಣದ ಗ್ರಾಫಿಕ್ಸ್ ಮತ್ತು ಬಿಳಿ ಮಿಶ್ರಿತ ಮುತ್ತು ಬಣ್ಣದಲ್ಲಿ ಹೊಸದಾಗಿ ಮಾರುಕಟ್ಟೆಯಲ್ಲಿ ಶೈನ್ ಶೈನಾಗಿದೆ.

ಹೊಂಡಾ ಮೋಟರ್ ಸೈಕಲ್ ಇಂಡಿಯಾದ ಮಾರಾಟ ವಿಭಾಗದ ಉಪಾಧ್ಯಕ್ಷ ವೈಎಸ್ ಗುಲೆರಿಯಾ ಹೊಸ ಬೈಕ್‌ನ್ನು ಬಿಡುಗಡೆಗೊಳಿಸಿ ಮಾತನಾಡಿ" ದೇಶದಲ್ಲಿ 125ಸಿಸಿ ವಿಭಾಗದ ಬೈಕಿನಲ್ಲಿ ಸಿಬಿ ಶೈನ್ ಅತಿ ಹೆಚ್ಚು ಮಾರಾಟವಾದ ಬೈಕ್ ಎಂಬ ಖ್ಯಾತಿ ಪಡೆದಿದ್ದು, ಗ್ರಾಹಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ನೀಡಲು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆಗೆ ಬಿಡುಗಡೆಯಾದ 54 ತಿಂಗಳಲ್ಲಿ 10 ಲಕ್ಷ ಮಾರಾಟ ಹೋಂಡಾ ಸಿಬಿ ಶೈನ್ ಬೈಕ್‌ಗಳು ಭಾರತದಲ್ಲಿ ಮಾರಾಟವಾಗಿದೆ.

ಹೋಂಡಾ ಸಿಬಿ ಶೈನ್
ಎಂಜಿನ್: 124.7ಸಿಸಿ, ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಐ ಎಂಜಿನ್
ಪವರ್: 10.12 ಅಶ್ವಶಕ್ತಿ (7500 ಆರ್‌ಪಿಎಂ)
ಟಾರ್ಕ್: 10.54 ಎನ್‌ಎಂ (5500 ಆರ್‌ಪಿಎಂ)
ಗೇರ್ ಬಾಕ್ಸ್: 4 ಸ್ಪೀಡ್ (N-1-2-3-4)
ಮೈಲೇಜ್: ಪ್ರತಿ ಲೀಟರ್‌ಗೆ 65 ಕೀ.ಮೀ.
ಇಂಧನ ಟ್ಯಾಂಕ್: 10.5 ಲೀಟರ್
ಭಾರ: 120 ಕೆ.ಜಿ.
ಬೆಲೆ: 52,063 - 59,248 ರು. (ಆನ್ ರೋಡ್ ದೆಹಲಿ)


Click it and Unblock the Notifications








