ಡೌನ್ ಪೇಮೆಂಟ್ 5,999, ಮಾಸಿಕ 999 ರು.ಗಳಿಗೆ ಸಿಬಿ ಶೈನ್ ನಿಮ್ಮದಾಗಿಸಿ
ಹೊಸ ಬೈಕ್ ಹುಡುಕಾಟದಲ್ಲಿದ್ದೀರಾ? ಬಜೆಟ್ ಸಮಸ್ಯೆ ಕಾಡುತ್ತಿದೆಯೇ? ಚಿಂತೆ ಬೇಡ. ಈ ಹಬ್ಬದ ಸಂಭ್ರಮದಲ್ಲಿ ನೂತನ ಆಫರ್‌ನೊಂದಿಗೆ ಮುಂದೆ ಬಂದಿರುವ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ಪ್ರಯಾಣಿಕ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಟು ವೀಲರ್ಸ್, ತನ್ನ ಜನಪ್ರಿಯ ಸಿಬಿ ಶೈನ್ ಬೈಕ್‌ಗೆ ವಿನೂತನ ಆಫರ್ ಮುಂದಿರಿಸಿದೆ.
ನಿಮ್ಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ನಂ.1 ಕಾರ್ಯ ನಿರ್ವಾಹಕ (Executive) ಬೈಕ್ ಎನಿಸಿಕೊಂಡಿರುವ ಸಿಬಿ ಶೈನ್‌ಗೆ 125 ಸಿಸಿ ವಿಭಾಗದಲ್ಲಿ ಸರಿಸಾಟಿಯೇ ಇಲ್ಲ.
ಮುಖ್ಯಾಂಶಗಳು
ಡೌನ್ ಪೇಮೆಂಟ್ - 5999 ರು.
ಮಾಸಿಕ ಪಾವತಿ - 999 ರು.
ಆಫರ್ ಅಂತ್ಯ - 2015 ಸೆಪ್ಟೆಂಬರ್ 29, ಗುರುವಾರ

ಏನಿದು ಆಫರ್?
ಹೋಂಡಾ ಸಂಸ್ಥೆಯೀಗ ಕೇವಲ 5,999 ರು.ಗಳ ಮುಂಗಡ ಪಾವತಿಯಲ್ಲಿ ಸಿಬಿ ಶೈನ್ ಗ್ರಾಹಕರನ್ನು ತಲುಪಿಸುತ್ತಿದೆ. ಹಾಗೆಯೇ ಮಾಸಿಕ ಶುಲ್ಕವನ್ನು 999 ರು.ಗಳಿಗೆ ನಿಗದಿಪಡಿಸಲಾಗಿದೆ. ಅತಿ ಹೆಚ್ಚಿನ ಗ್ರಾಹಕರು ಗರಿಷ್ಠ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಇಂತಹದೊಂದು ಆಫರ್ ಮುಂದಿಡಲಾಗಿದೆ.
ನೀವೇನು ಮಾಡಬೇಕು?
ಆಸಕ್ತ ಗ್ರಾಹಕರು ಹೋಂಡಾ ಟು ವೀಲರ್ಸ್ ಅಧಿಕೃತ ಫೇಸ್ ಬುಕ್ ಪುಟಕ್ಕೆ ತೆರಳಿ ಅಲ್ಲಿ ಕೊಟ್ಟಿರುವ (https://www.facebook.com/honda2wheelers.in/) ಸಿಬಿ ಶೈನ್ ಆಫರ್ (Get Offer) ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಇನ್ ಬಾಕ್ಸ್ ಗೆ ಆಫರ್ ಮೇಲ್ ಬಂದು ಸೇರಲಿದೆ. ಬಳಿಕ ಇದನ್ನು ನಿಮ್ಮ ಹತ್ತಿರ ಹೋಂಡಾ ಶೋ ರೂಂಗಳಿಗೆ ತೆರಳಿ ತೋರಿಸಿದಾಯಿತು. ಇನ್ಯಾಕೆ ತಡ ಈಗಲೇ ಆಫರ್ ನಿಮ್ಮದಾಗಿಸಿ!


Click it and Unblock the Notifications