2015ರಲ್ಲಿ ಹೋಂಡಾ 15 ಮಾಡೆಲ್: ಆಕ್ಟಿವಾ 3ಜಿ, 125 ಸಿಬಿ ಶೈನ್, ಡ್ರೀಮ್ ಶ್ರೇಣಿ

Written By:

ತನ್ನ ನಿಕಟ ಪ್ರತಿಸ್ಪರ್ಧಿ ಹೀರೊ ಮೊಟೊಕಾರ್ಪ್‌ ಮೋಟಾರುಸೈಕಲ್‌ಗಳನ್ನು ಎಲ್ಲ ಹಂತದಲ್ಲೂ ಮೀರಿಸಲು ಹೊರಟಿರುವ ಒಂದು ಕಾಲದ ಜತೆಗಾರ ಹೋಂಡಾ ಮೋಟಾರ್‌ಸೈಕಲ್ಸ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೀಗ ಪ್ರಸಕ್ತ ಸಾಲಿನಲ್ಲಿ 15 ಮಾದರಿಗಳನ್ನು ಬಿಡುಗಡೆ ಮಾಡುವ ಮಹತ್ತರ ಯೋಜನೆ ಹೊಂದಿದೆ.

ಮುಖ್ಯಾಂಶಗಳು

 • 2015-16 ಆರ್ಥಿಕ ಸಾಲಿನಲ್ಲಿ ಒಟ್ಟು 15 ಮಾಡೆಲ್ ಪರಿಚಯ,
 • ಇವುಗಳಳಲ್ಲಿ ಏಳು ಹೊಚ್ಚ ಹೊಸ ಮಾಡೆಲ್,
 • 5 ಹೊಸ ಉತ್ಪನ್ನಗಳ ಅನಾವರಣ,
 • ಮೂರನೇ ಜನಾಂಗದ ವಿನ್ಯಾಸದೊಂದಿಗೆ ಐಕಾನಿಕ್ ಹೋಂಡಾ ಆಕ್ಟಿವಾ 3ಜಿ ಬಿಡುಗಡೆ - ಬೆಲೆ 48,852 ರು. (ಎಕ್ಸ್ ಶೋ ರೂಂ ದೆಹಲಿ),
 • ಹೊಸ ಶೈಲಿ ಹಾಗೂ ಬಣ್ಣಗಳನ್ನು ಪಡೆದ ಜನಪ್ರಿಯ 125 ಸಿಸಿ ಸಿಬಿ ಶೈನ್,
 • ಮೂರು ಅತ್ಯಾರ್ಷಕ 2015 ಆವೃತ್ತಿ - ಹೋಂಡಾ ಡ್ರೀಮ್ ಯುಗಾ, ಡ್ರೀಮ್ ನಿಯೋ ಹಾಗೂ ಡಿಯೋ (ಹೊಸ ಬಣ್ಣಗಳು ಹಾಗೂ ಗ್ರಾಫಿಕ್ಸ್)

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯೂ ಆಗಿರುವ ಹೋಂಡಾ ಈ ಬಗ್ಗೆ ಸ್ಪಷ್ಟ ಯೋಜನೆಯನ್ನು ಹೊಂದಿದ್ದು, ಹೊಸ ಮಾಡೆಲ್‌ಗಳ ಜೊತೆಗೆ ಈಗಿರುವ ತನ್ನ ಆವೃತ್ತಿಗಳಿಗೆ ಹೊಸ ಸ್ವರೂಪ ನೀಡಲಿದೆ.

ಆಕ್ಟಿವಾ 3ಜಿ

ಆಕ್ಟಿವಾ 3ಜಿ

ಇದೇ ವೇಳೆ ದೇಶದ ಅತ್ಯಂತ ಹೆಚ್ಚು ಮಾರಾಟದ ಸ್ಕೂಟರ್ ಹೊಸ ಆಕ್ಟಿವಾ 3ಜಿ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ. ಅನೇಕ ಬಾರಿ ಹೀರೊ ಸ್ಲ್ಪೆಂಡರ್‌‌ಗಳಂತಹ ಐಕಾನಿಕ್ ಮಾದರಿಯನ್ನು ಹಿಂದಿಕ್ಕಿರುವ ಆಕ್ಟಿವಾ ಹೊಸ 3ಜಿ ಮಾದರಿಯು ಹೊಸ ತಲೆಮಾರಿನ ಶೈಲಿ, ಸೈಡ್ ಪ್ಯಾನಲ್, ಆಕರ್ಷಕ ಮುಂಭಾಗ, ಆಕರ್ಷಕ ಟೈಲ್ ಲ್ಯಾಂಪ್ ಹಾಗೂ 3ಡಿ ಲಾಂಝನ ಪಡೆಯಲಿದೆ.

ಆಕ್ಟಿವಾ 3ಜಿ

ಆಕ್ಟಿವಾ 3ಜಿ

ಎಂಜಿನ್: 100 ಸಿಸಿ ಜೊತೆಗೆ ಹೋಂಡಾ ಇಕೊ ತಂತ್ರಜ್ಞಾನ (ಎಚ್‌ಇಟಿ)

ಮೈಲೇಜ್: 60 kmpl

ಬಣ್ಣಗಳು (ಐದು)

 • ಟ್ರಾನ್ಸ್ ಬ್ಲೂ ಮೆಟ್ಯಾಲಿಕ್ (ಹೊಸದು),
 • ಲಸ್ಟಿ ರೆಡ್ ಮೆಟ್ಯಾಲಿಕ್ (ಹೊಸದು),
 • ಗೀನಿ ಗ್ರೇ ಮೆಟ್ಯಾಲಿಕ್,
 • ಬ್ಲ್ಯಾಕ್ ಮತ್ತು ಪಿಯರ್ಲ್ ಅಮೇಜಿಂಗ್ ವೈಟ್

ಆಕ್ಟಿವಾ 3ಜಿ

ಆಕ್ಟಿವಾ 3ಜಿ

ವಿಶಿಷ್ಟತೆ

 • ಆರಾಮದಾಯಕ ಆಸನ ವ್ಯವಸ್ಥೆ,
 • ಫೂಟ್ ಜಾಗ,
 • ಉದ್ದವಾದ ಹಾಗೂ ಅಗಲವಾದ ಸೀಟು,
 • ಕ್ಲಿಕ್ ಮೆಕಾನಿಸಂ,
 • ಏರ್ ಫಿಲ್ಟರ್, ಉಚಿತ ನಿರ್ವಹಣಾ ಬ್ಯಾಟರಿ,
 • ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್),
 • ಸಂಪೂರ್ಣ ಮೆಟಲ್ ಬಾಡಿ,
 • ಟ್ಯೂಬ್ ಲೆಸ್ ಚಕ್ರ, ಕೀ ಲಾಕ್
ಸಿಬಿ ಶೈನ್

ಸಿಬಿ ಶೈನ್

ಜಗತ್ತಿನ ಅತಿ ಹೆಚ್ಚು ಮಾರಾಟದ 125 ಸಿಸಿ ಬೈಕ್ ಆಗಿರುವ ಸಿಬಿ ಶೈನ್‌ನಲ್ಲಿ ನಾವೀನ್ಯತೆಯ ವಿನ್ಯಾಸ ತಂತ್ರಗಾರಿಕೆ ಅನುಸರಿಸಲಾಗಿದೆ. ಈ ಕಾರ್ಯನಿರ್ವಾಹಕ ಬೈಕ್‌ನಲ್ಲಿ ಆಧುನಿಕ ವಿನ್ಯಾಸ, ಗ್ರಾಫಿಕ್ಸ್, ಸೈಡ್ ಪ್ಯಾನಲ್, ಟ್ರೆಂಡಿ ವೈಸರ್, ಸೊಗಸಾದ ಟೈಲ್ ಲ್ಯಾಂಪ್, ಮೊನಚಾದ ಟ್ಯಾಂಕ್ ಹಾಗೂ ಟ್ರೆಂಡಿ ಅಲಾಯ್ ವೀಲ್ ಕಾಣಬಹುದಾಗಿದೆ.

ಕ್ರಾಂತಿಕಾರಿ ಹೋಂಡಾ ಇಕೊ ಟೆಕ್ನಾಲಜಿಯಿಂದಲೇ (ಎಚ್‌ಇಟಿ) ನಿಯಂತ್ರಿತ ಹೊಸ ಸಿಬಿ ಶೈನ್ ಕೊಂಬಿ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ಹೊಂದಿರುತ್ತದೆ. ಅಂತೆಯೇ ಮಾರ್ಚ್ ವೇಳೆಯಾಗುವಾಗ ಮಾರುಕಟ್ಟೆ ತಲುಪಲಿದೆ.

ಬಣ್ಣಗಳು

 • ಕಪ್ಪು,
 • ಗೀನಿ ಗ್ರೇ ಮೆಟ್ಯಾಲಿಕ್,
 • ಮ್ಯಾಪಲ್ ಬ್ರೌನ್ ಮೆಟ್ಯಾಲಿಕ್,
 • ಇಂಪಿರಿಯಲ್ ರೆಡ್ ಮೆಟ್ಯಾಲಿಕ್

3 ಹೊಸ ಪರಿಷ್ಕೃತ ಮಾದರಿಗಳು

3 ಹೊಸ ಪರಿಷ್ಕೃತ ಮಾದರಿಗಳು

ಇವೆಲ್ಲದರ ಜೊತೆಗೆ ಡ್ರೀಮ್ ಶ್ರೇಣಿಯ ಡ್ರೀಮ್ ಹಾಗೂ ಯುಗಾ ಬೈಕ್‌ಗಳು ಹೊಸ ಸ್ವರೂಪವನ್ನು ಪಡೆಯಲಿದೆ. ಪರಿಷ್ಕೃತ ನೋಟ, ಆಖರ್ಷಕ ಸ್ಟಿಕ್ಕರ್ ಹಾಗೂ ಗ್ರಾಫಿಕ್ಸ್‌ಗಳು ಹೊಸ ಡ್ರೀಮ್ ಶ್ರೇಣಿಯ ಬೈಕ್‌ಗಳನ್ನು ಇನ್ನಷ್ಟು ಅಂದವಾಗಿಸಲಿದೆ. ಇವೆಲ್ಲವೂ ಫೆಬ್ರವರಿ ಅಂತ್ಯದಲ್ಲೇ ಮಾರುಕಟ್ಟೆ ತಲುಪಲಿದೆ. ಅಂತೆಯೇ ಸ್ಟೈಲಿಷ್ 2015 ಡಿಯೋ ಸ್ಕೂಟರ್ 2015 ಮಾರ್ಚ್ ಅಂತ್ಯದ ವೇಳೆಗೆ ಮಾರಾಟಕ್ಕೆ ಲಭ್ಯವಾಗಲಿದೆ.

English summary
Japanese two-wheeler giant, Honda Motorcycle and Scooter Pvt. Ltd. has a wide range of products on offer. They have now decided to launch 15 new model in 2015 for India. These will include refreshes as well as totally new models as well.
Story first published: Thursday, February 5, 2015, 11:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark