ದೇಶಕ್ಕೆ ಅಗ್ಗದ ಬೈಕ್; ಇದುವೇ ಹೋಂಡಾ ಯೋಜನೆ
ನಿರಂತರ ಅಂತರಾಳದಲ್ಲಿ ದೇಶದ ಮಾರುಕಟ್ಟೆಗೆ ಆಕರ್ಷಕ ಹಾಗೂ ಗ್ರಾಹಕರ ಕೈಗೆಟುಕುವ ಬೈಕ್‌ಗಳನ್ನು ಪರಿಚಯಿಸುತ್ತಲೇ ಬಂದಿರುವ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ (ಎಚ್‌ಎಂಎಸ್ಐ) ಸಂಸ್ಥೆಯು ಭಾರತದ ಮಾರುಕಟ್ಟೆಗೆ ಮಗದೊಂದು ಅಗ್ಗದ ಬೈಕ್ ಪರಿಚಯಿಸುವ ಯೋಜನೆ ಹೊಂದಿದೆ.
ವಿಶೇಷವಾಗಿಯೂ ಭಾರತೀಯ ಗ್ರಾಹಕರನ್ನು ಗುರಿಯಲ್ಲಿಟ್ಟುಕೊಂಡು ಈ ಪ್ರಯಾಣಿಕ ಬೈಕ್ ಬಿಡುಗಡೆಯಾಗಲಿದೆ. ಇದು ದೇಶದಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ ಆರ್ ಆಂಡ್ ಡಿ ಘಟಕದಲ್ಲಿ ಅಭಿವೃದ್ಧಿಗೊಳ್ಳಲಿದೆ.

ಜಪಾನ್ ಮೂಲದ ಸಂಸ್ಥೆಯು ಈಗಾಗಲೇ ದಕ್ಷಿಣ ಆಫ್ರಿಕಾ ಮಾರುಕಟ್ಟೆಗೆ ಅಗ್ಗದ ಬೈಕ್ ಪರಿಚಯಿಸಿದೆ. ಇದು ಭಾರತೀಯ ರುಪಾಯಿ ಪ್ರಕಾರ 37,808 ರು.ಗಳಷ್ಟು ದುಬಾರಿಯೆನಿಸಿದೆ.
ಇವೆಲ್ಲದರ ಜೊತೆಗೆ 2015ನೇ ಸಾಲಿನಲ್ಲಿ ಒಟ್ಟು 10 ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿರುತ್ತದೆ. ಈ ಪೈಕಿ ಏಳು ಸಂಪೂರ್ಣವಾಗಿಯೂ ಹೊಸ ಉತ್ಪನ್ನವಾಗಿರಲಿದೆ. ಉಳಿದಂತೆ ಈಗಿನ ಮಾದರಿಗಳು ತಾಜಾನನದೊಂದಿಗೆ ಬಿಡುಗಡೆಯಾಗಲಿದೆ.
ಈ ಎಲ್ಲದರ ಮೂಲಕ ದೇಶದಲ್ಲಿ ಎರಡಂಕಿಯ ವೃದ್ಧಿ ದರ ಸಾಧಿಸುವುದು ಸಂಸ್ಥೆಯ ಗುರಿಯಾಗಿದೆ. ಅದೇ ರೀತಿ ಈಗಿರುವ 3,400 ಔಟ್ಲೆಟ್‌ಗಳನ್ನು ವೃದ್ಧಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಮುಂದಿನ ಸಾಲಿನ ಅಂತ್ಯದ ವೇಳೆ ಈ ಸಂಖ್ಯೆಯನ್ನು 3,800ಕ್ಕೆ ಏರಿಸುವುದು ಸಂಸ್ಥೆಯ ಯೋಜನೆಗಳಲ್ಲಿ ಒಂದಾಗಿದೆ. ಹಾಗೆಯೇ ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 6,000 ಔಟ್ಲೆಟ್‌ಗಳ ಯೋಜನೆ ಹೊಂದಿದೆ.
ಅಂತೆಯೇ ನಿರ್ಮಾಣ ವಿಚಾರದಲ್ಲೂ ಈಗಿನ 4.6 ಮಿಲಿಯನ್ ಸಂಖ್ಯೆಯನ್ನು 5.8 ಮಿಲಿಯನ್‌ಗೆ ಏರಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಈ ಗುರಿಯನ್ನು ಹೋಂಡಾದ ಗುಜರಾತ್ ಘಟಕ ಪ್ರಾರಂಭವಾದಾಗ ತಲುಪಲಿದೆ.


Click it and Unblock the Notifications








