ಮುಂದಿನ ವರ್ಷ ಹೋಂಡಾದಿಂದ 160ಸಿಸಿ ಬೈಕ್
ದೇಶದ ಎರಡನೇ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಇಂಡಿಯಾ (ಎಚ್‌ಎಂಎಸ್‌ಐ), ಮುಂದಿನ ವರ್ಷದಲ್ಲಿ ಹೊಸತಾದ 160ಸಿಸಿ ಬೈಕ್ ಪರಿಚಯಿಸುವ ಇರಾದೆ ಹೊಂದಿದೆ.
ಇತ್ತೇಚೆಗಷ್ಟೇ ಜಪಾನ್‌ನಲ್ಲಿ ಸಾಗಿದ 13ನೇ ವಾರ್ಷಿಕ ವಾಣಿಜ್ಯ ಸಮ್ಮೇಳದಲ್ಲಿ ಹೋಂಡಾ ತನ್ನ ಯೋಜನೆಯನ್ನು ಬಹಿರಂಗಪಡಿಸಿದೆ. ಇದೇ ಮೊದಲ ಬಾರಿಗೆ ಎಚ್‌ಎಂಎಸ್‌ಐ ಸಭೆಯು ಜಪಾನ್‌ನಲ್ಲಿ ಆಯೋಜನೆಯಾಗಿತ್ತು.

ಈಗಿರುವ ಶೋ ರೂಂಗಳ ಜತೆ 1000ದಷ್ಟು ಹೊಸ ಪ್ರದರ್ಶನ ಮಳಿಗೆಗಳನ್ನು ತೆರೆಯುವುದು ಹೋಂಡಾ ಇರಾದೆಯಾಗಿದೆ. ಹಾಗೆಯೇ 45 ಲಕ್ಷ ಯುನಿಟ್ ಮಾರಾಟವನ್ನು ಹೋಂಡಾ ಗುರಿಯಿರಿಸಿಕೊಂಡಿದೆ.
ಮೊದಲ ಹಂತವಾಗಿ ಡ್ರೀಮ್ ಸಿರೀಸ್ ಪ್ರಯಾಣಿಕ ಬೈಕ್ ಪರಿಚಯಿಸಲಿದೆ. ಬಳಿಕ 160ಸಿಸಿ ಮಾದರಿ ಎಂಟ್ರಿ ಪಡೆಯಲಿದೆ. ವರದಿಗಳ ಪ್ರಕಾರ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿರುವ ಹೋಂಡಾ ಸಿಎಕ್ಸ್-01 160ಸಿಸಿ ರೂಪದಲ್ಲಿ ಆಗಮನವಾಗುವ ಸಾಧ್ಯತೆಯಿದೆ.


Click it and Unblock the Notifications