ಸದ್ಯದಲ್ಲೇ ಹ್ಯೊಸಂಗ್‌ನಿಂದ ಇನ್ನೆರಡು ಆವೃತ್ತಿಗಳು ರಸ್ತೆಗೆ
ಕೆಲವು ದಿನಗಳ ಹಿಂದೆಯಷ್ಟೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ ಎರಡನೇ ಶೋ ರೂಂ ತೆರೆದುಕೊಂಡಿದ್ದ ಡಿಎಸ್‌ಕೆ ಹ್ಯೊಸಂಗ್ ನೂತನ ಅಕ್ವಿಲಾ 250 ಆವೃತ್ತಿಯನ್ನು ಇದೇ ಮೊದಲ ಬಾರಿಗೆ ನಗರದಲ್ಲಿ ಬಿಡುಗಡೆಗೊಳಿಸಿತ್ತು.
ಅಂದ ಹಾಗೆ ಎರಡು ನೂತನ ಆವೃತ್ತಿಗಳನ್ನು ಪ್ರಸಕ್ತ ಸಾಲಿನಲ್ಲೇ ಕಂಪನಿ ಬಿಡುಗಡೆಗೊಳಿಸಿದೆ. ಅವುದೇ ಜಿಡಿ 250ಎನ್ ಮತ್ತು ಜಿಟಿ250 ಕಾಮೆಟ್. ಈ ಪೈಕಿ ಜಿಡಿ 250ಎನ್ ನೆಕ್ಡ್ ಸ್ಟ್ರೀಟ್ ಸ್ಪೋರ್ಟ್ ಬೈಕಾಗಿರಲಿದೆ.

ಜಿಡಿ 250ಎನ್ ಬೈಕ್ 249 ಸಿಸಿ, ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 28 ಅಶ್ವಶಕ್ತಿ ಉತ್ಪಾದಿಸಲಿದೆ. ಇದು 6 ಸ್ಪೀಡ್ ಟ್ರಾನ್ಸ್‌ಮಿಷನ್ ಸಹ ಹೊಂದಿರಲಿದೆ.
ಇನ್ನೊಂದೆಡೆ ಹ್ಯೊಸಂಗ್ ಜಿಟಿ250 ಕಾಮೆಟ್ ದೇಶಕ್ಕೆ ಮರು ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ದಶಕಗಳ ಹಿಂದೆ ಈ ಸ್ಟ್ರೀಟ್ ಫೈಟರ್ ಶೈಲಿಯ ನೆಕ್ಡ್ ಬೈಕನ್ನು ಕೈನಾಟಿಕ್ ಪರಿಚಯಿಸಿತ್ತು. ಆದರೆ ಬಿಡಿಭಾಗಗಳ ಕೊರತೆಯಿಂದಾಗಿ ವೈಫಲ್ಯತೆ ಅನುಭವಿಸಿತ್ತು. ಇದು 248 ಸಿಸಿ, ಟ್ವಿನ್ ಸಿಲಿಂಡರ್ ಎಂಜಿನ್ ನಿಯಂತ್ರಿಸಲ್ಪಡಲಿದ್ದು, 330 ಅಶ್ವಶಕ್ತಿ ಉತ್ಪಾದಿಸಲಿದೆ.


Click it and Unblock the Notifications








