ಬೆಂಗಳೂರಿನಲ್ಲಿ ಇಂಡಿಯಾ ಸೂಪರ್ ಬೈಕ್ ಫೇಸ್ಟಿವಲ್
ದೇಶದ ಅತ್ಯಂತ ಜನಪ್ರಿಯ ಮೋಟಾರುಸೈಕಲ್ ಈವೆಂಟ್‌ಗಳಲ್ಲಿ ಒಂದಾಗಿರುವ 'ಇಂಡಿಯಾ ಸೂಪರ್ ಬೈಕ್ ಫೇಸ್ಟಿವಲ್' ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಇದು ಮಾಲಿಕರಿಗೆ ಹಾಗೂ ವಾಹನ ಪ್ರೇಮಿಗಳಿಗೆ ಒಂದೇ ವೇದಿಕೆಯಡಿಯಲ್ಲಿ ಗುರುತಿಸಿಕೊಳ್ಳಲು ಉತ್ತಮ ಅವಕಾಶವೊದಗಿಸಲಿದೆ. ಬೆಂಗಳೂರಿನ ಫೋನಿಕ್ಸ್ ಮಾರ್ಕೆಟ್‌ಸಿಟಿ ಮಾಲ್‌ನಲ್ಲಿ ಮೇ 10 ಹಾಗೂ 11ರಂದು ಮೂರನೇ ಆವೃತ್ತಿಯ ಇಂಡಿಯಾ ಸೂಪರ್ ಬೈಕ್ ಹಬ್ಬ ಆಯೋಜನೆಯಾಗಲಿದೆ.
ನಿಮ್ಮ ಮಾಹಿತಿಗಾಗಿ ಕಳೆದ ಬಾರಿ ಪುಣೆಯಲ್ಲಿ ಆಯೋಜನೆಯಾಗಿದ್ದ ಇಂಡಿಯಾ ಸೂಪರ್ ಬೈಕ್ ಫೇಸ್ಟಿವಲ್‌ನಲ್ಲಿ ದಾಖಲೆ ಸಂಖ್ಯೆಯ 500ರಷ್ಟು ಬೈಕರುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂದರ್ಶಕರಿಗೆ ವಿವಿಧ ತಯಾರಕರ 600ಸಿಸಿ ಮೇಲ್ಪಟ್ಟ ಗರಿಷ್ಠ ನಿರ್ವಹಣೆಯ ಬೈಕ್‌ಗಳನ್ನು ಒಂದೇ ತಲಹದಿಯಲ್ಲಿ ನೋಡುವ ಅದೃಷ್ಟ ದೊರಕಿತ್ತು.

ಹರ್ಲಿ ಡೇವಿಡ್ಸನ್‌ನಿಂದ ಆರಂಭಿಸಿ, ಹೋಂಡಾ ಗೋಲ್ಡ್ ವಿಂಗ್ಸ್, ವಾಲ್ಕಿರಿ, ಸುಜುಕಿ ಇನ್ಟ್ರುಡರ್, ಕವಾಸಕಿ ನಿಂಜಾ ಝಡ್‌ಎಕ್ಸ್-10ಆರ್‌ಎಸ್, ಡುಕಾಟಿ, ಬಿಎಂಡಬ್ಲ್ಯು, ಎಪ್ರಿಲಿಯಾ ಸೇರಿದಂತೆ ಬಹುತೇಕ ಎಲ್ಲ ಮೋಟಾರು ಸೈಕಲುಗಳು ಪ್ರಮುಖ ಆಕರ್ಷಣೆಯಾಗಿರಲಿದೆ. ಇದರ ಜತೆಗೆ ಕಲವೊಂದು ವಿರಳಗಳಲ್ಲಿ ಅತಿ ವಿರಳವಾದ ವಿಂಟೇಜ್ ಬೈಕ್‌ಗಳು ಪ್ರದರ್ಶನಗೊಳ್ಳಲಿದೆ.
ಇದೇ ವೇಳೆಯಲ್ಲಿ ಸಂದರ್ಶಕರನ್ನು ಆಕರ್ಷಿಸಲು ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಆಕ್ಸೆಸರಿಗಳ ಮಾರಾಟವು ನಡೆಯಲಿದೆ. ಹಾಗೆಯೇ ಫ್ರಿಸ್ಟೈಲ್ ಮೋಟಾರು ಸೈಕಲ್ ಸ್ಟಂಟ್, ಡರ್ಟ್ ಬೈಕ್‌ಗಳಲ್ಲಿ ಸೂಪರ್ ಕ್ರಾಸ್ ಈವೆಂಟ್ ಗಮನ ಸೆಳೆಯಲಿದೆ.


Click it and Unblock the Notifications








