ಇಂಡಿಯಾ ಸೂಪರ್ ಬೈಕ್ ಹಬ್ಬದಲ್ಲಿ ನೀವು ಪಾಲ್ಗೊಳ್ಳಿರಿ
ನೀವು ಬೈಕ್ ಉತ್ಸಾಹಿಯೇ? ರೇಸಿಂಗ್ ಎಂದರೆ ನಿಮ್ಮ ಪ್ರಾಣವೇ? ಈಗಲೇ ಕೆಳಗಡೆ ತಿಳಿಸಿದ ದಿನಾಂಕವನ್ನು ಬುಕ್ ಮಾಡಿಕೊಳ್ಳಿರಿ. ಯಾಕೆಂದರೆ ಇಂಡಿಯಾ ಸೂಪರ್ ಬೈಕ್ ಫೇಸ್ಟಿವಲ್ ಇದೇ ಬರುವ ಡಿಸೆಂಬರ್ 6 ಹಾಗೂ 7ರಂದು ಪುಣೆಯಲ್ಲಿ ಭರ್ಜರಿಯಾಗಿ ಆಯೋಜನೆಯಾಗಲಿದೆ.
ದೇಶದೆಲ್ಲ ಮೋಟಾರುಸೈಕಲ್ ಪ್ರೇಮಿಗಳಿಗೆ ಇದು ಸುವರ್ಣಾವಕಾಶವಾಗಿರಲಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಬೈಕ್ ಹಬ್ಬವು ಭಾರಿ ಯಶಸ್ಸು ಸಾಧಿಸಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಈ ಬಾರಿಯ ಇಂಡಿಯಾ ಸೂಪರ್ ಬೈಕ್ ಫೇಸ್ ಫೇಸ್ಟಿವಲ್‌ನಲ್ಲಿ ಇನ್ನಷ್ಟು ವಿಶಿಷ್ಟ, ರೋಚಕ ಬೈಕ್‌ಗಳನ್ನು ನಿರೀಕ್ಷಿಸಬಹುದು. ಅಲ್ಲದೆ ಸೂಪರ್ ಬೈಕ್ ಪ್ರದರ್ಶನದ ಜೊತೆಗೆ ಬರ್ನೌಟ್ ಈವೆಂಟ್, ಸ್ಟಂಟ್, ನಿರ್ವಹಣಾ ಸ್ಪರ್ಧೆಗಳು ನೆರವೇರಲಿದೆ.
ಅಂದ ಹಾಗೆ ನಿಮ್ಮ ಬಳಿಯೂ 600 ಸಿಸಿ ಗಿಂತಲೂ ಮೇಲ್ಪಟ್ಟ ಸೂಪರ್ ಬೈಕ್ ಇದ್ದರೆ ನೀವು ಕೂಡಾ ಇದರಲ್ಲಿ ಬಾಗಿಯಾಗಬಹುದಾಗಿದೆ. (ಇಲ್ಲಿ ಕ್ಲಿಕ್ಕಿಸಿ) ಅಲ್ಲದೆ ಬೈಕ್ ಹಬ್ಬ ಆರಂಭಕ್ಕೂ ಮುನ್ನವೇ ನೊಂದಾವಣೆ ಮಾಡಿದ್ದಲ್ಲಿ ರಿಜಿಸ್ಟ್ರೇಷನ್ ಫೀಸು 1000 ರು.ಗಳಾಗಿರುತ್ತದೆ. ಅಲ್ಲದೆ ನೇರವಾಗಿ ಹಬ್ಬಕ್ಕೆ ತೆರಳಿ ರಿಜಿಸ್ಟ್ರೇಷನ್ ಮಾಡುವುದಾದರೆ 1,500 ರು. ಶುಲ್ಕ ಕಟ್ಟಬೇಕಾಗುತ್ತದೆ.
ಪ್ರಸ್ತುತ ಹಬ್ಬದಲ್ಲಿ ಕ್ಲಾಸಿಕ್ ಬೈಕ್‌ನಿಂದ ಹಿಡಿದು, ಕ್ರೂಸರ್, ನಿರ್ವಹಣೆ ಹಾಗೂ ವಿಶಿಷ್ಟ ಬೈಕ್‌ಗಳನ್ನು ನಿರೀಕ್ಷಿಸಲಾಗುತ್ತದೆ. ಹಾಗೆಯೇ ಕೆಟಿಎಂ, ಸುಜುಕಿ, ಯಮಹಾ, ಹೋಂಡಾ, ಹ್ಯೊಸಂಗ್ ಮತ್ತು ಬೆನೆಲ್ಲಿ ಬೈಕ್‌ಗಳು ಪ್ರಮುಖ ಆಕರ್ಷಣೆಯಾಗಿರಲಿದೆ.
ಜಸ್ಟ್ 340 ರು.ಗಳಲ್ಲಿ ಬೈಕಎನ್‌ವೀರ್ ಬೈಕರ್ ಬೈಕಿಂಗ್ ಗ್ಲೋವ್ಸ್ - ತ್ವರೆ ಮಾಡಿ


Click it and Unblock the Notifications








