ಮಹೀಂದ್ರ ಮೊಜೊ ಪವರ್‌ಫುಲ್ ಬೈಕ್ ಬಿಡುಗಡೆಗೆ ರೆಡಿ

By Nagaraja

ಭಾರತೀಯ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್, ಹೆಚ್ಚು ಎಂಜಿನ್ ಸಾಮರ್ಥ್ಯದ ಮೊಜೊ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಮೊಜೊ ಹಲವಾರು ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಮಹೀಂದ್ರ ಟು ವೀಲರ್ ವಿಭಾಗದಿಂದ ಯಶಸ್ವಿ ಪರೀಕ್ಷೆಯನ್ನು ಪೂರ್ಣಗೊಳಿಸಿರುವ ಮೊಜೊ ಮುಂಬರುವ ಹಬ್ಬದ ಆವೃತ್ತಿ ವೇಳೆ ಬಿಡುಗಡೆಯಾಗಲಿದೆ. ಇದು ಬೈಕ್ ಪ್ರೇಮಿಗಳಲ್ಲಿ ಇನ್ನಷ್ಟು ಕುತೂಹಲ ಮನೆ ಮಾಡಿದೆ.


ನೂತನ ಮೊಜೊ 295 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 28 ಅಶ್ವಶಕ್ತಿ (25 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಇರಲಿದೆ.

ಅಪ್‌ಸೈಡ್ ಡೌನ್ ಫ್ರಂಟ್ ಫಾರ್ಕ್ ಮತ್ತು ರಿಯರ್ ಸ್ಪೋರ್ಟ್ ಮೊನೊಶಾಕ್ ಸಸ್ಪಷನ್ ಪ್ರಮುಖವಾಗಿರಲಿದೆ. ಅಂತೆಯೇ 17 ಇಂಚಿನ ಅಲಾಯ್ ವೀಲ್‌ನಲ್ಲಿ ಪೈರೆಲಿ ಸ್ಪೋರ್ಟ್ ಡೈಮನ್ ರಬ್ಬರ್ ಪಡೆದುಕೊಳ್ಳಲಿದೆ. ಇನ್ನುಳಿದಂತೆ ಡ್ಯುಯಲ್ ಎಕ್ಸಾಸ್ಟ್ ಸಿಸ್ಟಂ ಇರಲಿದೆ.

Mahindra Mojo

ಮಹೀಂದ್ರ ಮೊಜೊ ಡ್ಯುಯಲ್ ಹೆಡ್‌ಲ್ಯಾಂಪ್ ಜತೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಪಡೆದುಕೊಂಡಿದೆ. ಹಾಗೆಯೇ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಅನಾಲಾಗ್ ಟ್ಯಾಕೋಮೀಟರ್ ಇರಲಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಸೆಂಚುರೊ ಪ್ರಯಾಣಿಕ ಬೈಕ್‌ನಲ್ಲಿರುವಂತೆಯೇ ಎಂಜಿನ್ ಕೆಳಗಡೆ ಲಂಬವಾಗಿ ಎರಡು ಪೈಪ್‌ಗಳನ್ನು ಲಗತ್ತಿಸಲಾಗಿದೆ. ಇದು ಮಹೀಂದ್ರ ಬೈಕ್‌ಗಳನ್ನು ವಿಶೇಷವಾಗಿ ಗುರುತಿಸಲು ನೆರವಾಗಲಿದೆ.

ಹೆಚ್ಚು ಪವರ್‌ಫುಲ್ ಬೈಕ್‌ ಸಾಲಿನಲ್ಲಿ ಹೋಂಡಾ ಸಿಬಿಆರ್250ಆರ್, ಬಜಾಜ್ ಪಲ್ಸರ್ 200ಎನ್‌ಎಸ್, ಕೆಟಿಎಂ ಡ್ಯೂಕ್ 200 ಮತ್ತು ಇನ್ನಷ್ಟೇ ಲಾಂಚ್ ಆಗಲಿರುವ ಯಮಹಾ ಆರ್25 ಸವಾಲನ್ನು ಮಹೀಂದ್ರ ಹೇಗೆ ಎದುರಿಸಲಿದೆ ಎಂಬುದಕ್ಕೆ ಮುಂದಿನ ಕೆಲವೇ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

ಮಹೀಂದ್ರ ಮೊಜೊ ಸ್ಥಳೀಯವಾಗಿ ಅಭಿವೃದ್ಧಿ ಹಾಗೂ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ನೆರವಾಗಲಿದೆ. ಇದರ ಎಕ್ಸ್ ಶೋ ರೂಂ ದರ 1.50 ಲಕ್ಷ ರು.ಗಳಾಗುವ ಸಾಧ್ಯತೆಯಿದೆ.

More from DriveSpark

Article Published On: Wednesday, June 18, 2014, 11:45 [IST]
English summary
Indian based manufacturer Mahindra two wheelers had shown its Interest in developing a larger cubic capacity motorcycle locally. It had showcased its offering the Mojo several times and a close to production model was showcased at the 2014 Auto Expo in New Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+