ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯವಾದ ಮಹೀಂದ್ರಾ ಮೊಜೊ ಎಕ್ಸ್‌ಟಿ300

By Praveen Sannamani

ಕಳೆದ ಮಾರ್ಚ್‌ನಲ್ಲಿ ಮೊಜೊ ಯುಟಿ300 ಬೈಕ್‌ಗಳನ್ನು ಪರಿಚಯಿಸಿದ್ದ ಮಹೀಂದ್ರಾ ಸಂಸ್ಥೆಯು ಇದೀಗ ಮೊಜೊ ಎಕ್ಸ್‌ಟಿ300 ಬೈಕ್‌ಗಳನ್ನು ವಿಶೇಷ ವಿನ್ಯಾಸದ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯಲ್ಲಿ ಬಿಡುಗಡೆ ಮಾಡಿದ್ದು, ಬೈಕ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಹೊಸ ಆಯ್ಕೆ ನೀಡಲು ನಿರ್ಧರಿಸಿದೆ.

ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯವಾದ ಮಹೀಂದ್ರಾ ಮೊಜೊ ಎಕ್ಸ್‌ಟಿ300

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮೊಜೊ ಎಕ್ಸ್‌ಟಿ300 ಬೈಕ್‌ಗಳನ್ನು ಸಿಂಗಲ್ ಟೋನ್ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದವು. ಆದರೆ, ಬಹುತೇಕ ಗ್ರಾಹಕರು ಇತರೆ ಬಣ್ಣಗಳಲ್ಲಿ ಮೊಜೊ ಎಕ್ಸ್‌ಟಿ300 ಬೈಕ್ ಖರೀದಿಗೆ ಬೇಡಿಕೆ ಸಲ್ಲಿಸುತ್ತಿದ್ದು ಸಾಮಾನ್ಯವಾಗಿತ್ತು. ಇದರಿಂದ ಸಿಂಗಲ್ ಟೋನ್ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ತೆಗೆದುಹಾಕಿರುವ ಮಹೀಂದ್ರಾ ಸಂಸ್ಥೆಯು ಎರಡು ಪ್ರಮುಖ ಡ್ಯುಯಲ್ ಟೋನ್ ಆಯ್ಕೆಗಳನ್ನು ಹೊರತಂದಿದೆ.

ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯವಾದ ಮಹೀಂದ್ರಾ ಮೊಜೊ ಎಕ್ಸ್‌ಟಿ300

ಒಸಿಯನ್ ಬ್ಲ್ಯೂ ಮತ್ತು ವೈಟ್ ಬಣ್ಣ ಮಿಶ್ರಿತ ಒಂದು ಮಾದರಿಯಾದರೇ, ರೆಡ್ ಮತ್ತು ಸಿಲ್ವರ್ ಮಿಶ್ರಿತ ಇನ್ನೊಂದು ಆಯ್ಕೆ ಬಹುತೇಕ ಬೈಕ್ ಸವಾರರಿಗೆ ಇಷ್ಟವಾಗುವ ಬಣ್ಣದ ಆಯ್ಕೆಯಾಗಿದೆ. ಹೊಸದಾಗಿ ಹೊರತಂದಿರುವ ಬೈಕ್‌ಗಳಲ್ಲಿ ಬಣ್ಣವನ್ನು ಹೊರತುಪಡಿಸಿ ಯಾವುದೇ ತಾಂತ್ರಿಕ ಅಂಶಗಳು ಬದಲಾವಣೆಯಾಗಿಲ್ಲ.

ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯವಾದ ಮಹೀಂದ್ರಾ ಮೊಜೊ ಎಕ್ಸ್‌ಟಿ300

ಹೀಗಾಗಿ ಈ ಹಿಂದಿನಂತೆಯೇ ಬೆಲೆ ಪಟ್ಟಿ ಮುಂದುವರಿಸಿರುವ ಮಹೀಂದ್ರಾ ಸಂಸ್ಥೆಯು ಮೊಜೊ ಎಕ್ಸ್‌ಟಿ300 ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1.79 ಲಕ್ಷಕ್ಕೆ ನಿಗದಿಗೊಳಿಸಿದ್ದು, ಇದು ಮೊಜೊ ಯುಟಿ300 ಬೈಕಿಗಿಂತ ತಾಂತ್ರಿಕವಾಗಿ ಬಲಿಷ್ಠವಾಗಿದೆ.

ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯವಾದ ಮಹೀಂದ್ರಾ ಮೊಜೊ ಎಕ್ಸ್‌ಟಿ300

ಎಂಜಿನ್ ಸಾಮರ್ಥ್ಯ

ಮೊಜೊ ಎಕ್ಸ್‌ಟಿ300 ಬೈಕ್ ಮಾದರಿಯು 295-ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಲ್ ಇಜೆಕ್ಷೆಡ್ ಎಂಜಿನ್ ಹೊಂದಿದ್ದು, 25 ಬಿಎಚ್‌ಪಿ ಮತ್ತು 30ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯವಾದ ಮಹೀಂದ್ರಾ ಮೊಜೊ ಎಕ್ಸ್‌ಟಿ300

ಇನ್ನೊಂದು ಪ್ರಮುಖ ವಿಚಾರ ಏನೆಂದರೇ, ಕಡಿಮೆ ಬೆಲೆಗಳಲ್ಲಿ ಮೊಜೊ ಯುಟಿ300 ಪರಿಚಯಿಸಿರುವ ಮಹೀಂದ್ರಾ ಸಂಸ್ಥೆಯು ಹೊಸ ಬೈಕ್‌ಗಳಲ್ಲಿ ಡ್ರಿಸ್ಕ್ ಬ್ರೇಕ್ ಸಿಸ್ಟಂ ಮಾತ್ರ ಒದಗಿಸಿದ್ದು, ಎಕ್ಸ್‌ಟಿ300 ಬೈಕ್‌ಗಳಲ್ಲಿ ಮಾತ್ರ ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸಿದೆ.

ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯವಾದ ಮಹೀಂದ್ರಾ ಮೊಜೊ ಎಕ್ಸ್‌ಟಿ300

ಪರ್ಫಾಮೆನ್ಸ್ ಪ್ರಿಯರಿಗಾಗಿ ಪೆರೆಲಿ ಡೈಬ್ಲೊ ರೊಸೋ II ಟೈರ್ ಮಾದರಿಗಳನ್ನು ಇಲ್ಲಿ ಬಳಸಲಾಗಿದ್ದು, ಮುಂಭಾಗದ ಚಕ್ರದಲ್ಲಿ 320ಎಂಎಂ ಮತ್ತು ಹಿಂಭಾಗದ ಚಕ್ರದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಇದೆ. ಇದರೊಂದಿಗೆ ಎಲ್ಇಡಿ ಡಿಆರ್‌ಎಲ್ ಪಾಡ್ ಹೆಡ್‌ಲ್ಯಾಂಪ್‌, 21 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ವ್ಯವಸ್ಥೆ ಮೊಜೊ ಎಕ್ಸ್‌ಟಿ300 ಬೈಕಿನಲ್ಲಿವೆ.

ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯವಾದ ಮಹೀಂದ್ರಾ ಮೊಜೊ ಎಕ್ಸ್‌ಟಿ300

ಇದರೊಂದಿಗೆ 300ಸಿಸಿ ವಿಭಾಗದ ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೆ ವಿವಿಧ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿರುವ ಮೊಜೊ ಎಕ್ಸ್‌ಟಿ300 ಬೈಕ್‌ಗಳು ಖರೀದಿಗೆ ಉತ್ತಮ ಮಾದರಿಯಾಗಲಿದ್ದು, ಹೊಸ ಆಯ್ಕೆ ಹೊರತಾಗಿಯೂ ಬೆಲೆಗಳಲ್ಲಿ ಯಾವುದೇ ಬದಲಾವಣೆ ತಂದಿಲ್ಲ ಎನ್ನುವುದು ಪ್ರಮುಖ ವಿಚಾರ.

ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯವಾದ ಮಹೀಂದ್ರಾ ಮೊಜೊ ಎಕ್ಸ್‌ಟಿ300

ಒಟ್ಟಿನಲ್ಲಿ ಉತ್ತಮ ಪರ್ಫಾಮೆನ್ಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಟಿಎಂ ಡ್ಯೂಕ್ 390, ಟಿವಿಎಸ್ ಅಪಾಚೆ ಆರ್‌ಆರ್ 310 ಮತ್ತು ಹೋಂಡಾ ಸಿಬಿಆರ್ 250ಆರ್ ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡುತ್ತಿರುವ ಮೊಜೊ ಎಕ್ಸ್‌ಟಿ ಬೈಕ್‌ಗಳು ಕೊಟ್ಟ ಬೆಲೆಗೆ ಖರೀದಿ ಮಾಡಬಹುದಾದ ಯೋಗ್ಯ ಬೈಕ್ ಆವೃತ್ತಿಯಾಗಿದೆ.

Most Read Articles

Kannada
Read more on mahindra mojo
English summary
Mahindra Mojo XT300 Receives New Colour Options — Prices Remain Unchanged.
Story first published: Friday, June 15, 2018, 16:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X