ಮಹೀಂದ್ರಾ ಬಹುನೀರಿಕ್ಷಿತ ಮೊಜೊ ಯುಟಿ300 ಬೈಕ್ ಬಿಡುಗಡೆ

Written By:

ಸಾಂಪ್ರದಾಯಿಕ ಬೈಕ್ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಗುಡ್ ಬೈ ಹೇಳಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಸೂಪರ್ ಬೈಕ್‌ಗಳ ನಿರ್ಮಾಣದತ್ತ ಮಹತ್ವದ ಹೆಜ್ಜೆಯಿರಿಸಿದ್ದು, ಮೊದಲ ಹಂತದಲ್ಲೇ ಅಗ್ಗದ ಬೆಲೆಯ ಮೊಜೊ ಯುಟಿ300 ಬೈಕ್ ಅನ್ನು ಬಿಡುಗಡೆ ಮಾಡುವ ಮೂಲಕ ಬೈಕ್ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ.

ಮಹೀಂದ್ರಾ ಬಹುನೀರಿಕ್ಷಿತ ಮೊಜೊ ಯುಟಿ300 ಬೈಕ್ ಬಿಡುಗಡೆ

ಈ ಹಿಂದಿನ ಮೊಜೊ ಬೈಕ್ ಮಾದರಿಯಲ್ಲೇ ಹೊಸ ಮೊಜೊ ಬೈಕ್ ಆವೃತ್ತಿಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ 1.49 ಲಕ್ಷಕ್ಕೆ ಮೊಜೊ ಯುಟಿ300 ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಮಹೀಂದ್ರಾ ಬಹುನೀರಿಕ್ಷಿತ ಮೊಜೊ ಯುಟಿ300 ಬೈಕ್ ಬಿಡುಗಡೆ

ಈ ಹಿಂದಿನ ಮೊಜೊ ಎಕ್ಸ್‌ಟಿ300 ಮಾದರಿಗಿಂತಲೂ ಮೊಜೊ ಯುಟಿ300 ಹೆಚ್ಚಿನ ಗುಣಮಟ್ಟದ ವಿನ್ಯಾಸಗಳನ್ನು ಹೊಂದಿದ್ದರು, ಕೆಲವು ಐಷಾರಾಮಿ ವೈಶಿಷ್ಟ್ಯತೆಗಳನ್ನು ಮೊಜೊ ಯುಟಿ300 ಬೈಕಿನಲ್ಲಿ ಕೈಬಿಡಲಾಗಿದೆ.

ಮಹೀಂದ್ರಾ ಬಹುನೀರಿಕ್ಷಿತ ಮೊಜೊ ಯುಟಿ300 ಬೈಕ್ ಬಿಡುಗಡೆ

ಜೊತೆಗೆ ಸೂಪರ್ ಬೈಕ್ ಸವಾರರಿಗೆ ಅನುಕೂಲಕರವಾಗುವ ಕೆಲ ಹೊಸ ಸೌಲಭ್ಯಗಳನ್ನು ನೀಡಲಾಗಿದ್ದು, ಈ ಹಿಂದಿನಂತೆ ಟ್ವಿನ್ ಎಕ್ಸಾಸ್ಟ್ ಬದಲಾಗಿ ಸಿಂಗಲ್ ಎಕ್ಸಾಸ್ಟ್ ಜೋಡಿಸಲಾಗಿದೆ. ಇದರಿಂದ ಬೈಕಿನ ತೂಕದಲ್ಲಿ ಇಳಿಕೆಯಾಗಿದೆ ಎನ್ನಬಹುದು.

ಮಹೀಂದ್ರಾ ಬಹುನೀರಿಕ್ಷಿತ ಮೊಜೊ ಯುಟಿ300 ಬೈಕ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

295ಸಿಸಿ ಲಿಕ್ವಿಡ್ ಕೂಲ್ಡ್, 4 ವಾಲ್ವೆ, ಸಿಂಗಲ್ ಸಿಲಿಂಡರ್ ಹೊಂದಿರುವ ಮೊಜೊ ಯುಟಿ300 ಬೈಕ್, ಮುಂಭಾಗ ಚಕ್ರದಲ್ಲಿ ಟೆಲಿಸ್ಕೋಪಿಕ್ ಸಸ್ಪೆಷನ್ ಮತ್ತು ಹಿಂಭಾಗದ ಚಕ್ರದಲ್ಲಿ ಮೊನೊ ಶಾರ್ಕ್ ಸಸ್ಪೆಷನ್ ಪಡೆದುಕೊಂಡಿದೆ.

ಮಹೀಂದ್ರಾ ಬಹುನೀರಿಕ್ಷಿತ ಮೊಜೊ ಯುಟಿ300 ಬೈಕ್ ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರ ಏನೆಂದರೇ, ಕಡಿಮೆ ಬೆಲೆಗಳಲ್ಲಿ ಮೊಜೊ ಯುಟಿ300 ಪರಿಚಯಿಸಿರುವ ಮಹೀಂದ್ರಾ ಸಂಸ್ಥೆಯು ಹೊಸ ಬೈಕ್‌ಗಳಲ್ಲಿ ಡ್ರಿಸ್ಕ್ ಬ್ರೇಕ್ ಸಿಸ್ಟಂ ಮಾತ್ರ ಒದಗಿಸಿದ್ದು, ಎಬಿಎಸ್ ಟೆಕ್ನಾಲಜಿ ಕೈಬಿಟ್ಟಿದೆ.

ಮಹೀಂದ್ರಾ ಬಹುನೀರಿಕ್ಷಿತ ಮೊಜೊ ಯುಟಿ300 ಬೈಕ್ ಬಿಡುಗಡೆ

ಖರೀದಿ ಮೇಲೆ ಸ್ಪೆಷಲ್ ಆಫರ್

ಹೌದು.. ರೂ.1.49 ಲಕ್ಷಕ್ಕೆ ಮೊಜೊ ಯುಟಿ300 ಬೈಕ್ ಬಿಡುಗಡೆ ಮಾಡಿರುವ ಮಹೀಂದ್ರಾ, ಮಾರ್ಚ್ 31ರ ತನಕ ಹೊಸ ಬೈಕ್ ಖರೀದಿ ಮಾಡುವ ಗ್ರಾಹಕರಿಗೆ 10 ಡಿಸ್ಕೌಂಟ್ ಕೂಡಾ ಘೋಷಣೆ ಮಾಡಿದೆ.

ಮಹೀಂದ್ರಾ ಬಹುನೀರಿಕ್ಷಿತ ಮೊಜೊ ಯುಟಿ300 ಬೈಕ್ ಬಿಡುಗಡೆ

ಹೀಗಾಗಿ ಮಾರ್ಚ್ ಅಂತ್ಯದ ತನಕ ಮೊಜೊ ಯುಟಿ300 ಬೈಕ್ ಬೆಲೆಗಳು ರೂ.1.39 ಲಕ್ಷಕ್ಕೆ ಲಭ್ಯವಿರಲಿದ್ದು, ಪಿರೆಲ್ಲಿ ಡೈಬ್ಲೊ ರೊಸೋ II ಟೈರ್‌ಗಳ ಬದಲಾಗಿ ಹೊಸ ಬೈಕ್‌ಗಳಲ್ಲಿ ಎಂಆಪ್ಎಫ್ ನಿರ್ಮಾಣದ ಟೈರ್ ಬಳಕೆಯು ಬೈಕ್ ಬೆಲೆಗಳನ್ನು ತಗ್ಗಿಸಿವೆ.

ಮಹೀಂದ್ರಾ ಬಹುನೀರಿಕ್ಷಿತ ಮೊಜೊ ಯುಟಿ300 ಬೈಕ್ ಬಿಡುಗಡೆ

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ದ್ವಿಚಕ್ರ ವಾಹನಗಳ ವ್ಯವಹಾರ ವಿಭಾಗದ ಸಿಇಒ ಪ್ರಕಾಶ್ ವಾಕಂಕಾರ್, ವಿನೂತನ ತಂತ್ರಜ್ಞಾನ ಹೊಂದಿರುವ ಮೊಜೊ ಯುಟಿ300 ಮೂಲಕ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ತರುವ ವಿಶ್ವಾಸವಿದ್ದು, ಬೈಕ್ ಸವಾರರಿಗೆ ಹೊಸ ಅನೂಭೂತಿ ನೀಡಲಿವೆ' ಎಂದಿದ್ದಾರೆ.

Read more on mahindra mojo
English summary
Mahindra Mojo UT300 Launched In India; Priced At Rs 1.49 Lakh.
Story first published: Monday, March 5, 2018, 17:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark