ಮಹೀಂದ್ರ ಸೆಂಚುರೊ ಯಶಸ್ಸಿನ ಸಂಭ್ರಮ; ಕ್ಯಾಶ್‌ಬ್ಯಾಕ್ ಆಫರ್

By Nagaraja

ಮಹೀಂದ್ರ ಸಮೂಹದ ಭಾಗವಾಗಿರುವ ಮಹೀಂದ್ರ ಟು ವೀಲರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆದು, ದೇಶದ ಮಾರುಕಟ್ಟೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಸೆಂಚುರೊ ಪ್ರಯಾಣಿಕ ಬೈಕನ್ನು ಬಿಡುಗಡೆ ಮಾಡಿತ್ತು. ಇದೀಗ ಎರಡು ಲಕ್ಷ ಯಶಸ್ಸಿ ಸಂಚುರೊ ಗ್ರಾಹಕರನ್ನು ಗಿಟ್ಟಿಸಿಕೊಂಡಿರುವ ಸಂಸ್ಥೆಯು ಈ ಸಂಭ್ರಮವನ್ನು ಆಚರಿಸಿಕೊಳ್ಳಲು ನಿರ್ಧರಿಸಿದೆ.

ಸದ್ಯ ಮಹೀಂದ್ರ ಸೆಂಚುರೊ ಯಶಸ್ಸಿನ ಗುಂಗಿನಲ್ಲಿರುವ ಸಂಸ್ಥೆಯು ಹೊಸ ಖರೀದಿಗಾರರಿಗೆ 5000 ರು.ಗಳ ನಗದು ಹಿಂತಿರುಗಿಸುವ (ಕ್ಯಾಶ್ ಬ್ಯಾಕ್) ಆಫರ್ ಮುಂದಿಡುತ್ತಿದೆ. ಹಾಗೆಯೇ ಸೆಂಚುರೊ ಎನ್1 ಮತ್ತು ಸೆಂಚುರೊ ರಾಕ್‌ಸ್ಟಾರ್ ಖರೀದಿ ವೇಳೆ ಅನುಕ್ರಮವಾಗಿ ರು. 3500 ಹಾಗೂ ರು. 2000 ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

Mahindra centuro

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮಹೀಂದ್ರ ಟು ವೀಲರ್ಸ್ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಾಹಕ ಮುಖ್ಯಸ್ಥ ವಿರೆಟ್ ಪೊಪ್ಲಿ, 'ಸೆಂಚರೊ ಯಶಸ್ಸಿನಿಂದ ನಾವು ಸಂತುಷ್ಟರಾಗಿದ್ದು, ಇದರಲ್ಲಿ ಆಳವಡಿಸಲಾಗಿರುವ ಹೊಸ ತಂತ್ರಜ್ಞಾನವು ಗ್ರಾಹಕರ ಮನಗೆಲ್ಲುವಲ್ಲಿ ಸಾಧ್ಯವಾಗಿದೆ' ಎಂದಿದ್ದಾರೆ. ಇದೀಗ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಯಶಸ್ಸಿನ ಸಂಭ್ರಮವನ್ನು (Kamyabi Ka Jashn) ಆಚರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ನಾವೀನ್ಯತೆಯ ಬೈಕ್ ಆಗಿರುವ ಮಹೀಂದ್ರ ಸೆಂಚುರೊ ಕಾರಿನಲ್ಲಿರುವಂತಹ 'ರಿಮೋಟ್ ಪ್ಲಿಪ್ ಕೀ', 'ಫೈಂಡ್ ಮಿ ಲ್ಯಾಂಪ್', 'ಆ್ಯಂಟಿ ಥೆಫ್ಟ್ ಅಲಾರಾಂ ಸಿಸ್ಟಂ' ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ. ಅಲ್ಲದೆ ಇದುವರೆಗೆ ಏಳು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

More from DriveSpark

Article Published On: Thursday, September 25, 2014, 10:56 [IST]
English summary
Mahindra Two Wheelers Ltd. (MTWL), a part of the $ 16.5 billion Mahindra Group, recently crossed the 2 lakh units sales milestone for its popular Mahindra Centuro range of motorcycles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+