ರಸ್ತೆಗೆ ಅಪ್ಪಳಿಸಲಿದೆ ಟಿವಿಎಸ್ ಹೊಸ ಶ್ರೇಣಿಯ ಬೈಕ್ಸ್
ಮುಂದಿನ ಕೆಲವೇ ತಿಂಗಳೊಳಗೆ ರಸ್ತೆ ಪ್ರವೇಶಿಸಲಿರುವ ಟಿವಿಎಸ್ ಹೊಸ ಶ್ರೇಣಿಯ ಬೈಕ್‌ಗಳ ವಿವರಗಳು ಹೊರ ಬಂದಿದೆ. ಸಾಮಾನ್ಯ ಪ್ರಯಾಣಿಕ ಬೈಕ್‌ಗಿಂತಲೂ ವಿಭಿನ್ನವಾಗಿ ನಿರ್ವಹಣಾ ಬೈಕ್‌ಗಳನ್ನು ಬಿಡುಗಡೆ ಮಾಡುವುದು ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟಿವಿಎಸ್ ಇರಾದೆಯಾಗಿದೆ.
ನಿಮ್ಮ ಮಾಹಿತಿಗಾಗಿ, ಟಿವಿಎಸ್ ಅಪಾಚಿ ಆರ್‌ಟಿಆರ್160 ಸಂಸ್ಥೆಯಿಂದ ಮಾರಾಟವಾಗಲಿರುವ ಅತ್ಯಂತ ಕಡಿಮೆ ಬೆಲೆಯ ಬೈಕ್ ಆಗಿರಲಿದೆ. ಇದು ಇದೇ ವಿಭಾಗದಲ್ಲಿ ಪಲ್ಸರ್ ಸ್ಪರ್ಧೆಯನ್ನು ಎದುರಿಸಲಿದೆ.

ಹಾಗೆಯೇ ಪರಿಷ್ಕೃತ 180ಸಿಸಿ ಅಪಾಚಿ ಬೈಕ್ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಇವೆಲ್ಲದರ ಜೊತೆಗೆ 200ಸಿಸಿ ಮಾದರಿಯನ್ನು ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.
ಮುಂಬರುವ ಆರ್ಥಿಕ ಸಾಲಿನ ಮೊದಲಾರ್ಧದಲ್ಲೇ ಟಿವಿಎಸ್ ಅಪಾಚಿ ಆರ್‌ಆರ್‌ಆರ್ 200 ಬಿಡುಗಡೆಯಾಗಲಿದೆ. ಇದು 1.3 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಟಿವಿಎಸ್ ಅಪಾಚಿ 200ಸಿಸಿ ವೈಶಿಷ್ಟ್ಯಗಳು
- ಆಲ್ ಅಲ್ಯೂಮಿನಿಯಂ ಎಂಜಿನ್,
- ಅಶ್ವಶಕ್ತಿ - 30 ಪಿಎಸ್‌ಗಿಂತಲೂ ಅಧಿಕ,
- ಎಂಜಿನ್ ಸಾಮರ್ಥ್ಯ - 210 ಸಿಸಿ,
- 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್,
- ಹಗುರ ಭಾರ, ಎಬಿಎಸ್ ಸ್ಟ್ಯಾಂಡರ್ಡ್ ,
- ವಿಭಜಿತ ಸೀಟು,
- ಮೊಬೈಲ್ ಚಾರ್ಜಿಂಗ್ ಪಾಯಿಂಟ್,
- ಬೆಲೆ ಅಂದಾಜು 1.3 ಲಕ್ಷ ರು.


Click it and Unblock the Notifications








