ಅಪಾಚಿ ಪ್ರೇಮಿಗಳಿಗೆ ಶುಭ ಸುದ್ದಿ; ಬರುತ್ತಿದೆ ಹೊಸ ಬೈಕ್
ಒಂದು ಹಂತದಲ್ಲಿ ಟಿವಿಎಸ್ ಅಪಾಚಿ ಬೈಕ್, ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಆಗಿರುವ ಬಜಾಜ್ ಪಲ್ಸರ್‌ನಷ್ಟೇ ಜನಪ್ರಿಯತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಮುಂದುವರಿದ ಮಾರುಕಟ್ಟೆ ಬೆಳವಣಿಗೆಯಲ್ಲಿ ತನ್ನ ಬೇಡಿಕೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು.
ಅಂದ ಮಾತ್ರಕ್ಕೆ ಅಪಾಚಿ ಪ್ರೇಮಿಗಳು ನಿರಾಸೆಪಡಬೇಕಾಗಿಲ್ಲ. ಎಲ್ಲ ಹೊಸತನದಿಂದ ಕೂಡಿರುವ ಅಪಾಚಿ ಬೈಕ್ ಪ್ರಸಕ್ತ ಸಾಲಿನ ಅಂತ್ಯದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಈ ಶುಭ ಸುದ್ದಿಯನ್ನು ನೂತನ ಸ್ಟಾರ್ ಸಿಟಿ ಪ್ಲಸ್ ಲಾಂಚ್ ಸಮಾರಂಭದಲ್ಲಿ ಟಿವಿಎಸ್ ಮುಖ್ಯಸ್ಥ ವೇಣು ಶ್ರೀನಿವಾಸನ್ ಬಿತ್ತರಿಸಿದ್ದಾರೆ.

ಸ್ಪೆಷಾಲಿಟಿ ಏನಿದೆ?
ಬಲ್ಲ ಮೂಲಗಳ ಪ್ರಕಾರ ಮುಂದಿನ ಜನಾಂಗದ ಅಪಾಚಿ ಬೈಕ್‌ನಲ್ಲಿ, ಡ್ರೇಕನ್ ಕಾನ್ಸೆಪ್ಟ್‌ನಲ್ಲಿ ಆಳವಡಿಸಲಾಗಿರುವ ಕೆಲವೊಂದು ತಂತ್ರಗಾರಿಕೆಗಳನ್ನು ಆಳವಡಿಸಲಾಗುವುದು. ನಿಮ್ಮ ಮಾಹಿತಿಗಾಗಿ, ಡ್ರೇಕನ್ ಕಳೆದ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.
ಡ್ರೇಕನ್‌ನಲ್ಲಿ ಆಕ್ಟಿವ್ ಮ್ಯಾಟ್ರಿಕ್ಸ್ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಟೈಲ್ ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲೈಟ್ಸ್, ಎಬಿಎಸ್ ಎಂಬಿತ್ಯಾದಿ ಆಕರ್ಷಕ ಸೌಲಭ್ಯಗಳಿವೆ. ಈ ಪೈಕಿ ಕೆಲವೊಂದು ವೈಶಿಷ್ಟ್ಯಗಳು ಅಪಾಚಿ ಪಡೆಯುವ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ಈಗಿರುವ ಅಪಾಚಿಗಿಂತ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಹೊಸ ಮಾದರಿ ಕಾಪಾಡಿಕೊಳ್ಳಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಬೇಡ. ಅಷ್ಟಕ್ಕೂ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ...


Click it and Unblock the Notifications








